ವಿಭಿನ್ನ ಪಾತ್ರದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಸಂಚಾರಿ ವಿಜಯ್
ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಒಂದರ ಮೇಲೊಂದರಂತೆ ಸಿನಿಮಾ ಮಾಡುತ್ತ ಬಿಜಿಯಾಗಿದ್ದಾರೆ. ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಲು ಬರುತ್ತಿರುವ ಸಂಚಾರಿ ವಿಜಯ್ ಈಗ ಹರಿವು ಖ್ಯಾತಿಯ ಮಂಸೋರೆ ನಿರ್ದೇಶನದ ಆಕ್ಟ್ 1978 ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ನವೆಂಬರ್ 20 ರಂದು ತೆರೆಗೆ ಬರಲು ತಯಾರಾಗಿದೆ. ಕೊರೋನಾ ಲಾಕ್ ಡೌನ್ ನಂತರ ರಿಲೀಸ್ ಆಗಲಿರುವ ಮೊದಲ ಹೊಸ ಸಿನಿಮಾ ಆಕ್ಟ್ 1978. ಸಂಚಾರಿ ವಿಜಯ್ ಅವರ ಪಾತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದ್ದು, ವಿಭಿನ್ನ ಪಾತ್ರಗಳಲ್ಲಿ ಹೊಸ ಅವತಾರದಲ್ಲಿ ಕಾಣಲು ಅವರ ಅಭಿಮಾನಿಗಳು, ಸಿನಿ ರಸಿಕರು ಕಾಯುತ್ತಿದ್ದಾರೆ.ಇದರ ಜೊತೆಗೆ ‘ಅವಸ್ಥಾಂತರ’ ಎಂಬ ಚಿತ್ರಕ್ಕೂ ಸಹಿ ಮಾಡಿದ್ದಾರಂತೆ ಸಂಚಾರಿ ವಿಜಯ್.