ನಟಿ‌ ಸಂಯುಕ್ತ ಹೊರನಾಡು ಐಪಿಎಸ್ ಆಫೀಸರ್..!

Published on

322 Views

‘ಲೈಫು ಇಷ್ಟೇನೇ’ , ‘ಒಗ್ಗರಣೆ’ ಹೀಗೇ ಕೆಲವೇ ಕೆಲವು ಸಿನಿಮಾದಲ್ಲಿ‌ ನಟಿಸಿ ಪ್ರೇಕ್ಷಕರ ‌ಮನ‌ ಗೆದ್ದಿರುವ ನಟಿ‌ ಸಂಯುಕ್ತ ಹೊರನಾಡು ಈಗ ಐಪಿಎಸ್ ಆಫೀಸರ್ ಆಗಿದ್ದಾರೆ. ಅದ್ರೆ ಅವರು ಐಪಿಎಸ್ ಆಫೀಸರ್ ಆಗಿರೋದು ನಿಜ ಜೀವನದಲ್ಲಿ‌ ಅಲ್ಲ. ‘ ಮೈಸೂರು ಮಸಾಲ’ ಸಿನಿಮಾದಲ್ಲಿ ಸಂಯುಕ್ತ ಹೊರನಾಡು ಐಪಿಎಸ್ ಆಫೀಸರ್ ಪಾತ್ರವನ್ನು‌ ನಿರ್ವಹಿಸುತ್ತಿದ್ದಾರೆ. ಐಪಿಎಸ್ ಆಫೀಸರ್ ಪಾತ್ರಕ್ಕೆ ಬೇಕಾದ ತಯಾರಿಯನ್ನು‌ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ನಿರ್ದೇಶಕರು ಐಪಿಎಸ್ ಆಫೀಸರ್ ಡಿ ರೂಪ ಅವರನ್ನು‌ ಭೇಟಿಯಾಗಿದ್ದು, ಅವರಿಂದ ಕೆಲವೊಂದು‌ ಸಲಹೆಗಳನ್ನು ಪಡೆದುಕೊಂಡಿದ್ದಾರೆ. ಈ ಖುಷಿಯನ್ನು ನಟಿ ಸಂಯುಕ್ತ ಹೊರನಾಡು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com