ಸಾಮರ್ಥ್ಯ ಟ್ರೇಲರ್ ಬಿಡುಗಡೆ

Published on

628 Views

ಕಾರ್ತಿಕ್ ಮೂವೀಸ್ ಲಾಂಛನದಲ್ಲಿ ರಾಜರಬಂಡಿ ಕಾರ್ತಿಕ್ ನಿರ್ಮಿಸುತ್ತಿರುವ ಸಾಮರ್ಥ್ಯ
ಚಿತ್ರದ ಟ್ರೇಲರ್ ಹಾಗೂ ಧ್ವನಿಸಾಂದ್ರಿಕೆ ಬಿಡುಗಡೆ ಕಾರ್ಯಕ್ರಮ ಕಲಾವಿದರ ಸಂಘದಲ್ಲಿ
ನಡೆಯಿತು. ಚುಕ್ಕಿ ಶಿವಾನಂದ ಟ್ರೇಲರ್ ಲೋಕರ್ಪಣೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.
ನಾಯಕ ಬಾಲಾಜಿಶರ್ಮ ಮಾತನಾಡಿ ತುಣುಕುಗಳಲ್ಲಿ ಡೈರಕ್ಟರ್ ವಾಸು ಅವರ ಶ್ರಮ ಎದ್ದು
ಕಾಣಿಸುತ್ತಿದೆ. ಸಕಲೇಶಪುರದ ಅನುಭವವನ್ನು ಮರೆಯಲಿಕ್ಕೆ ಆಗುವುದಿಲ್ಲ. ಕಲೈ,
ತ್ರಿಭುವನ್ ಎರಡು ಹಾಡುಗಳಿಗೆ, ಅರ್ಜುನ್-ಡಿಫರೆಂಟ್‌ಡ್ಯಾನಿ-ಕೌರವ ವೆಂಕಟೇಶ್-ವಿನೋಧ್
ಅವರುಗಳು ತಲಾ ಒಂದೊಂದು ಸಾಹಸಕ್ಕೆ ಸಂಯೋಜನೆ ಮಾಡಿದ್ದಾರೆ. ಕರೋನ ಸಮಯದಲ್ಲಿ ಧೈರ್ಯ
ಮಾಡಿ ನಿರ್ಮಾಪಕರು ಮುಂದೆ ಬಂದರು. ಅಂಬರೀಷ್ ಹುಟ್ಟುಹಬ್ಬದಂದು ಸಮಾರಂಭ ನಡೆದಿರುವುದು
ಖುಷಿ ತಂದಿದೆ ಎಂದರು.

ಎಲ್ಲಾ ತರಹ ಉದ್ಯಮಗಳನ್ನು ಕಂಡಿದ್ದೇನೆ. ಸಿನಿಮಾ ವ್ಯವಹಾರ ತಿಳಿಯಲು ಬಂಡವಾಳ
ಹೂಡಿದೆ. ಆದರೂ ಇದನ್ನು ಮಾಡಲು ಎರಡು ಗುಂಡಿಗೆ ಇರಬೇಕು. ಸಕಲೇಶಪುರ, ಹಾಸನ,
ಚಿಕ್ಕಮಗಳೂರು, ಬೆಂಗಳೂರು ಕಡೆಗಳಲ್ಲಿ ೩೫ ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ
ಮುಗಿಸಲಾಗಿದೆ ಎಂಬುದು ನಿರ್ಮಾಪಕ ಶ್ರೀನಾಥ್ ನುಡಿ. ಅಡಿಷನ್ ನಡೆಸದೆ
ಆಯ್ಕೆಯಾಗಿದ್ದನೆಂದು ನಾಯಕಿ ಗಗನಮಧು ಖುಷಿ ಹಂಚಿಕೊಂಡರು.

ಕೇಳಿದ ಕ್ಯಾಮಾರ ಉಪಕರಣಗಳನ್ನು ನೀಡಿದ್ದಕ್ಕೆ ಇಷ್ಟು ಚೆಂದವಾಗಿ ಮೂಡಿಬಂದಿದೆ.
ಎರಡು ಹಾಡುಗಳನ್ನು ಮಗ ಸೆರೆಹಿಡಿದಿದ್ದಾನೆಂದು ಛಾಯಾಗ್ರಾಹಕ ಕೆ.ಕೃಷ್ಣಕುಮಾರ್
ಮಾಹಿತಿ ನೀಡಿದರು. ಶುರುವಿನಲ್ಲಿ ಚಿತ್ರವನ್ನು ಮ್ಯಾಜಿಕ್ ರಂಗ ಮಾಡಬೇಕಾಗಿತ್ತು.
ಆದರೆ ಅವರ ಧೋರಣೆ ಬುದ್ದಿ ನಿರ್ಮಾಪಕರಿಗೆ ಹಿಡಿಸದ ಕಾರಣ ಅದರ ಜವಬ್ದಾರಿಯನ್ನು ನನಗೆ
ಹೊರಿಸಿದರು. ಮೊದಲು ನಿರ್ಮಾಪಕರು ಸೇಫ್ ಆಗಬೇಕೆಂಬುದು ನನ್ನ ಧ್ಯೇಯ. ೧೯೯೪ರಲ್ಲಿ
ರವಿತೇಜ ಚಿತ್ರದ ಮೂಲಕ ನಿರ್ದೇಶಕನಾಗಿ ಗುರುತಿಸಿಕೊಂಡು, ಇಲ್ಲಿಯವರೆಗೂ ೨೪
ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದೇನೆ. ಲವ್ ಕಂ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ
ಇದಾಗಿದೆ ಎಂದು ನಿರ್ದೇಶಕ ಹೆಚ್.ವಾಸು ಹೇಳಿದರು.

ತಾರಾಗಣದಲ್ಲಿ ಶೋಭರಾಜ್, ಅವಿನಾಶ್, ದಶರತ್‌ಅಭಿ, ರವೀಂದ್ರನಾಥ್, ಪೆಟ್ರೋಲ್
ಪ್ರಸನ್ನ, ಮಡೆನೂರು ಮನು, ಸ್ವಾತಿ, ಶಶಿಕುಮಾರ್ ಹಾಗೂ ಒಂದು ಹಾಡಿಗೆ ನವ ಪ್ರತಿಭೆ
ರಾಯಚೂರಿನ ಅಭಿ ಹೆಜ್ಜೆ ಹಾಕಿದ್ದಾರೆ. ಅಂದಹಾಗೆ ಚಿತ್ರವು ಜುಲೈ ಮೊದಲ ವಾರದಲ್ಲಿ
ತೆರೆಗೆ ಬರುವ ಸಾದ್ಯತೆ ಇದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com