ಸಮರ್ಥ ಚಿತ್ರದ ಆಡಿಯೋ ಬಿಡುಗಡೆ ಸಸ್ಪೆನ್ಸ್ ಥ್ರಿಲ್ಲರ್ ಜೊತೆ ಸಮಾಜ ತಿದ್ದುವ ‘ಸಮರ್ಥ’

Published on

279 Views

ಸ್ಯಾಂಡಲ್‍ವುಡ್‍ನಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳ ಅಬ್ಬರ ಜೋರಾಗಿದೆ. ಪ್ರೇಕ್ಷಕನನ್ನು ರಂಜಿಸಲು ರೋಚಕ ಕಥಾಹಂದರ ಹೊಂದಿರುವ ಚಿತ್ರಗಳು ಒಂದರ ಹಿಂದೆ ಒಂದು ಬರುತ್ತಿವೆ. ಈ ಸಾಲಿಗೆ ‘ಸಮರ್ಥ’ ಎಂಬ ಹೊಸಬರ ಸಿನಿಮಾ ಕೂಡ ಸೇರ್ಪಡೆಗೊಂಡಿದೆ. ‘ಸರ್ವ ಕ್ರಿಯೇಷನ್ಸ್’ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಸಿನಿಮಾವನ್ನು ಎಸ್.ಜಿ.ಆರ್ ಪಾವಗಡ ಕಥೆ, ಚಿತ್ರಕತೆ ಬರೆದು ನಿರ್ದೇಶಿಸಿದ್ದಾರೆ. ಈ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಜೊತೆಜೊತೆಗೆ ಸಮಾಜಕ್ಕೆ ಸಂದೇಶ ನೀಡುವ ಅಂಶಗಳನ್ನು ಒಳಗೊಂಡಿದೆಯಂತೆ.

ರವಿ ಶಿರೂರ್ ಹಾಗೂ ರಚನಾ ದಶ್ರತ್ ಈ ಚಿತ್ರದ ಮೂಲಕ ಮೊದಲ ಬಾರಿಗೆ ನಾಯಕ, ನಾಯಕಿಯಾಗಿ ಪರಿಚಯವಾಗುತ್ತಿದ್ದಾರೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಅಭಿಮಾನ್ ರಾಯ್ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಶಿಲ್ಪಾ ಮಧುಸೂಧನ್, ಅಭಿಮಾನ್, ಮಾರ್ಗರೇಟ್ ರೀಟಾ, ಸರಿಗಮಪ ಖ್ಯಾತಿಯ ಮೆಹಬೂಬ್ ಮುಂತಾದವರು ಹಾಡಿದ್ದಾರೆ. ಯಲ್ಲಪ್ಪ ಕುಸುಮ ಪ್ರಿಯ, ವಿಜಯಾ ರೆಡ್ಡಿ, ವಿಘ್ನೇಶ್ವರ ವಿಶ್ವ ಸಾಹಿತ್ಯ ಬರೆದಿದಾರೆ.

ಎಸ್.ಸಿ. ಮಹೇಂದ್ರ ಛಾಯಾಗ್ರಹಣ, ರಿಕ್ಕಿ ಸ್ವಾಮಿ ಸಂಕಲನಕರಾಗಿ ಕೆಲಸ ಮಾಡಿದ್ದಾರೆ. ಕಳೆದ ವಾರ ಸಮರ್ಥ ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು, ಚಿತ್ರದ ಎಲ್ಲಾ ಹಾಡುಗಳು ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿವೆ. ಈಗಾಗಲೇ ಟ್ರೈಲರ್ ಮೂಲಕ ಭಾರೀ ಕುತೂಹಲ ಹುಟ್ಟಿಸಿರುವ ಸಮರ್ಥ ಸಿನಿಮಾ, ಕೆಲವೇ ದಿನಗಳಲ್ಲಿ ನಿಮ್ಮ ನೆಚ್ಚಿನ ಚಿತ್ರಮಂದಿರಗಳಿಗೆ ಎಂಟ್ರಿ ಕೊಡಲಿದೆ. ಇನ್ನು ‘ಸಮರ್ಥ’ ಶೀರ್ಷಿಕೆ ಹುಟ್ಟಿದ್ದು, ಹೇಗೆ..? ಅದರ ವಿಶೇಷತೆ ಏನು ಅನ್ನೋದರ ಬಗ್ಗೆ ನಿರ್ದೇಶಕರು ಹೇಳುವುದು ಹೀಗೆ.

ಜೀವನದ ಸಂಕಷ್ಟಗಳನ್ನು ಮೆಟ್ಟಿ ನಿಲ್ಲುವವನೇ ‘ಸಮರ್ಥ

Copyright ©2026 . All Rights Reserved. privacy | terms Whatsapp: 9538193653 Email: hello@flixoye.com