‘ಸಮಾನತೆಯ ಕಡೆಗೆ’ ಚಿತ್ರಕ್ಕೆ ಸಿಕ್ತು ‘ಯು’ ಸರ್ಟಿಫಿಕೆಟ್
ಮಾರ್ಡನ್ ಫಿಲಂಸ್ ಲಾಂಛನದಲ್ಲಿ ಕಥೆ-ಚಿತ್ರಕಥೆ-ಸಂಭಾಷಣೆ-ಸಾಹಿತ್ಯ-ನಿರ್ದೇಶನದ ಜೊತೆಗೆ ನಿರ್ಮಾಪಕರೂ ಆಗಿರುತ್ತಾರೆ ಅನಂತರಾಯಪ್ಪ, ಈ ಚಿತ್ರಕ್ಕೆ ಇತ್ತೀಚೆಗೆ ಸೆನ್ಸಾರ್ ಮಂಡಳಿಯು ‘ಯು’ ಸರ್ಟಿಫಿಕೆಟ್ ನೀಡಿದೆ ‘ಈ ಚಲನಚಿತ್ರವು ಅಸ್ಪøಶ್ಯತೆ ಆಚರಣೆ ಕುರಿತಾದ ಕಥೆಯಾಗಿರುತ್ತದೆ.
ಸರ್ಕಾರದ ಸವಲತ್ತುಗಳನ್ನು ಬಳಸಿಕೊಂಡು ಪ್ರಗತಿ ಹೊಂದುವಂತೆ ಶೋಷಿತ ವರ್ಗದವರನ್ನು ಹುರಿದುಂಬಿಸುವ ಈ ಚಲನಚಿತ್ರ, ದಲಿತರನ್ನು ಈಗಲೂ ಕೀಳಾಗಿ ಕಾಣುವ ಕೆಲವು ಮೇಲ್ವರ್ಗದವರ ಮನಸ್ಸನ್ನು ಪರಿವರ್ತಿಸಿ ಜಾತಿ ಸಾಮರಸ್ಯವನ್ನು ಸಾರುವ ಚಿತ್ರಕಥೆ ಹೊಂದಿರುವ ಈ ಚಿತ್ರದ ಸಹ ನಿರ್ಮಪಕರು – ಅಶೋಕ್ ಕುಮಾರ್, ಸಂಗೀತ- ಎ.ಟಿ. ರವೀಶ್, ಸಂಕಲನ – ವಿನೋದ್ ಬಸವರಾಜ್, ಛಾಯಾಗ್ರಹಣ – ಹರಿಕೃಷ್ಣ ಸಾರಥಿ, ಸಹನಿರ್ದೇಶನ – ಸೃಷ್ಟಿ ಬಸವರಾಜ್, ತರಾಗಣದಲ್ಲಿ – ಸಚಿನ್, ಸ್ನೇಹ, ಹನುಂತರಾಜು, ಕೆ. ಜಯರಾಂ, ಅನಂತರಾಯಪ್ಪ, ಶ್ರೀನಿವಾಸ್ ಕೆಂತೂರು, ರಾಮರಾವ್, ಪುಟ್ಟರಾಜು, ಹರ್ಷವರ್ದನ್, ನಾಗರಾಜರಾವ್, ಸಂಪತ್ ಕುಮಾರ್, ದೇವನಳ್ಳಿ ದೇವರಾಜ್, ರೋಹಿಣಿ, ಜಯಂತಿ, ಎಮ್.ಎಸ್. ಮಂಜುಳ, ಚೈತ್ರ, ಗುರುತೇಜಸ್, ಆನಂತ ಪದ್ಮನಾಬ್.