ಸದ್ದು ಮಾಡುತ್ತಿದೆ “ಸಲಗ” ಪ್ರಮೋಷನಲ್ ಸಾಂಗ್

Published on

375 Views

ದುನಿಯಾ ವಿಜಯ್ ಅಭಿನಯಿಸಿ ನಿರ್ದೇಶಿಸಿದ ಸಲಗ ತಂಡದ ಪ್ರಮೋಶನಲ್ ಸಾಂಗ್ ಒಂದು ಯುಟ್ಯೂಬ್ ನಲ್ಲಿ ಭರ್ಜರಿ ರೆಸ್ಪಾನ್ಸ್ ಪಡೆದು, ದಾಖಲೆ ನಿರ್ಮಿಸಿದೆ. ಎರಡು ದಿನದಿಂದ ಟ್ರೆಂಡಿಂಗ್ ನಲ್ಲಿರೋ ಹಾಡು ಸಾಕಷ್ಟು ವಿಶೇಷಗಳಿಂದ ಕೂಡಿದ್ದು, ಹಲವಾರು ನಟ ನಟಿ ನಿರ್ದೇಶಕರು ಈ ಹಾಡಿನ ಬಗ್ಗೆ ಅಭಿಪ್ರಾಯ ಹಂಚಿಕೊಂಡು ಖುಷಿಪಟ್ಟಿದ್ದಾರೆ.

ಕೆ ಪಿ ಶ್ರೀಕಾಂತ್ ಬಂಡವಾಳ ಹೂಡಿರುವ ಈ ಸಲಗ ಸಿನೆಮಾ ಇದೇ ವರಮಹಾಲಕ್ಷ್ಮಿ ಹಬ್ಬಕ್ಕೆ ತೆರೆಗೆ ಬರಬೇಕಿತ್ತು. ಕಾರಣಾಂತರಗಳಿಂದ ಮುಂದೆ ಹೋಗಿದ್ದು, ಬಹುದೊಡ್ಡ ನಿರೀಕ್ಷೆ ಮೂಡಿಸಿದೆ. ಈ ಹಾಡಿನ ವಿಶೇಷ ಅಂದ್ರೆ, ಬುಡಕಟ್ಟು ಜನಾಂಗದವರು ಹೆಜ್ಜೆ ಹಾಕಿದ್ದು, ಭಾಷೆ, ಸಾಹಿತ್ಯ ಸಹ ಅವರದ್ದೇ ಆಗಿದೆ. ಅದರ ಚಿತ್ರೀಕರಣ ಶೇರ್ಟಾನ್ ಹೋಟೆಲ್ ನಲ್ಲಿ ಮಾಡಿರೋದು ವಿಶೇಷ ಸಂಗತಿ. ಚರಣ್ ರಾಜ್ ಮ್ಯೂಸಿಕ್ ಕಂಪೋಸ್ ಎಲ್ಲರಿಗೂ ಇಷ್ಟ ಆಗಿದೆ. ಧನಂಜಯ, ಸಂಜನ ಅನಂದ್, ಯಶ್ ಶೆಟ್ಟಿ ಹೀಗೆ ಬಹು ತಾರಾಂಗಣ ಚಿತ್ರವಿದು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com