ಎಸ್ ನಾರಾಯಣ್ ಮಗ ಆಕ್ಷನ್ ಕಟ್ ಕಡೆಗೆ
ಕಾಲ ಮತ್ತೊಮ್ಮೆ ನಮಗಾಗಿ ಬಂತು ಎಂಬಂತೆ, ತಿಂಗಳಾನು ಗಟ್ಟಲೆ ಚಿತ್ರಮಂದಿರಗಳ ಬಾಗಿಲು ಮುಚ್ಚಿ ಕರೋನ ಸಂಕಷ್ಟದಲ್ಲಿ ಕಂಗೆಟ್ಟಿದ್ದ ಚಿತ್ರರಂಗ ಈಗೀಗ ಸುಧಾರಿಸಿಕೊಳ್ಳುತ್ತಿರುವುದಲ್ಲದೆ ಹಲವಾರು ಚಿತ್ರಗಳು ಸೆಟ್ಟೇರುತ್ತಲಿವೆ.
ಇಂತಹ ಸುಸಂದರ್ಭದಲ್ಲಿ ಉತ್ಸುಕ ನವ ಯುವಕರ ತಂಡವೊಂದು ಲಾಕ್ ಡೌನ್ ದಿನಗಳಲ್ಲೆ ಕಥೆ ಬರೆದು, ಈಗ ಒಂದು ಹಂತದ ಚಿತ್ರೀಕರಣ ಮುಗಿಸಿ ಟೈಟಲ್ ಲಾಂಚಿಗೆ ಮುಂದಾಗಿದ್ದಾರೆ, ಚಿತ್ರಕ್ಕೆ ‘ನವಮಿ 9-9-1999’ ಎನ್ನುವ ಶೀರ್ಷಿಕೆ ನಿಗದಿ ಪಡಿಸಿಕೊಂಡಿರುವ ಚಿತ್ರತಂಡ ಆಯುಧ ಪೂಜೆಯ ದಿನ ಒಂಭತ್ತು ಜನ ಖ್ಯಾತ ನಿರ್ದೇಶಕರುಗಳಿಂದ ಟೈಟಲ್, ಪೋಸ್ಟರ್, ಫಸ್ಟ್ ಲುಕ್ ಲಾಂಚ್ ಮಾಡಲು ನಿರ್ಧರಿಸಿದ್ದಾರಂತೆ.
ಚಿತ್ರಕ್ಕೆ ಕನ್ನಡದ ಖ್ಯಾತ ನಿರ್ದೇಶಕರಾದ ಎಸ್.ನಾರಾಯಣ್ ರವರ ಹಿರಿಯ ಪುತ್ರ ಪವನ್ ರವರು ಆಕ್ಷನ್ ಕಟ್ ಹೇಳುತ್ತಿದ್ದು ಇವರು ಚಿ”ರಾ ಮುತ್ತು ಚಿ”ಸೌ ರತ್ನ ಎನ್ನುವ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದು, ತಂದೆ ಗರಡಿಯಲ್ಲಿ ಪಳಗಿ ಈಗ ಸ್ವತಂತ್ರ ನಿರ್ದೇಶಕನಾಗಿ ಈ ಸಿನಿಮಾದ ಮುಖಾಂತರ ಹೆಜ್ಜೆ ಹಿಡುತ್ತಿದ್ದಾರಂತೆ.
ಈ ಚಿತ್ರದ ನಾಯಕ ನಟ ಯಶಸ್ ಅಭಿಯವರು ಈ ಹಿಂದೆ ಪ್ರಸೆಂಟ್ ಪ್ರಪಂಚ ಜೀರೋ ಪರ್ಸೆಂಟ್ ಲವ್ ಹಾಗೂ ಕ್ರಿಟಿಕಲ್ ಕೀರ್ತನೆಗಳು ಎನ್ನುವ ಚಿತ್ರದಲ್ಲಿ ಅಭಿನಯಿಸಿದ್ದು ಈ ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿ ಕೊಳ್ಳಲಿದ್ದಾರಂತೆ.
ಪವನ್ ನಾರಾಯಣ್ ಹಾಗೂ ಯಶಸ್ ಅಭಿಯವರು ರಂಗಭೂಮಿಯ ಕಲಿಕೆ ದಿನಗಳಿಂದಲೂ ಉತ್ತಮ ಸ್ನೇಹಿತರಾಗಿದ್ದು, ಈ ಚಿತ್ರದ ಮುಖಾಂತರ ತಮ್ಮ ಸಾಮರ್ಥ್ಯ ಪ್ರದರ್ಶಿಸಿಕೊಳ್ಳಲು ಮುಂದಾಗಿದ್ದಾರಂತೆ.
ಚಿತ್ರದಲ್ಲಿ ನಂದಿನಿ ಗೌಡ ರವರು ನಾಯಕಿಯಾಗಿದ್ದು ನಾಯಕ ನಟ ಯಶಸ್ ಅಭಿ ಮತ್ತು ಕೃಷ್ಣ ಗುಡೆಮಾರನ ಹಳ್ಳಿ ಯವರು ಸೇರಿ ಕಥೆ ಹಾಗೂ ಚಿತ್ರಕತೆ ರಚಿಸಿ ಪಧ್ಮ ಸುಂದರಿ ಕ್ರಿಯೇಷನ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರಂತೆ.
ಚಿತ್ರದಲ್ಲಿ ಎಸ್.ನಾರಾಯಣ್, ಶಂಕರ್ ಅಶ್ವಥ್, ಓಂ ಪ್ರಕಾಶ್ ರಾವ್, ಹುಚ್ಚವೆಂಕಟ್, ಸಂದೀಪ್, ಅನುಶ್ರಿ,ಪವಿತ್ರ, ಕುರಿಬಾಂಡ್ ಸುನೀಲ್, ಅರುಣ ಬಾಲ್ರಾಜ್ ಇನ್ನೂ ಮತಾಂದ ಗಣ್ಯ ತರಾಗಣ ಚಿತ್ರದಲ್ಲಿದ್ದು.. ತಾಂತ್ರಿಕ ವರ್ಗದಲ್ಲಿ ಕೆ.ಪಿ.ಎಚ್.ಎಸ್. ರವರ ಛಾಯಾಗ್ರಹಣ, ಧರ್ಮ ರವರ ಸಂಗೀತ, ನಾಗಾರ್ಜುನ್ ಶರ್ಮ ರವರ ಸಾಹಿತ್ಯ, ಮಾಸ್ ಮಾದ ರವರ ಸಾಹಸ, ಮೋಹನ್ ರವರ ನೃತ್ಯ ಸಂಯೋಜನೆ ಇದ್ದು ಚಿತ್ರ ತಂಡವೇ ಒಟ್ಟಾಗಿ ಬಂಡವಾಳ ಹೂಡಿ, ಶಶಿಕುಮಾರ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಾಹಿಸುತ್ತಿದ್ದಾರಂತೆ.
ಸಕಲೇಶಪುರ, ಕನಕಪುರ ಇನ್ನೂ ಮುಂತಾದ ಪ್ರದೇಶಗಳಲ್ಲಿ ಚಿತ್ರೀಕರಣಗೊಳ್ಳಲಿದ್ದೂ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ಕಾಲು ಭಾಗ ಮುಗಿದಿದೆ ಎನ್ನುತ್ತಾರೆ ಚಿತ್ರತಂಡ. ತಂಡಕ್ಕೆ ಅಭಿನಂದನೆಗಳು, ನವಮಿ 9-9-1999 ನ ಮುಂದಿನೆಲ್ಲ ಕೆಲಸ ಸರಾಗವಾಗಿ ಪವನ್ ನಾರಾಯಣ್ ಹಾಗೂ ಯಶಸ್ ಅಭಿ ರವರ ಈ ಸಿನಿಮ ಯಶಸ್ವಿಯಾಗಲಿ ಎಂಬುದೇ ನಮ್ಮ ಆಶಯ.