ಸುಮಲತಾ ಗೆಲುವಿಗಾಗಿ ಹೊರನಾಡು ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ರಾಕ್​ಲೈನ್​​​ ವೆಂಕಟೇಶ್ ಪ್ರಾರ್ಥನೆ

Published on

579 Views

ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲುವಿಗಾಗಿ ಚಿತ್ರ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಹೊರನಾಡು ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಸುಮಲತಾ ಗೆಲುವಿನ ಬಗ್ಗೆ ಸಾಕಷ್ಟು ನಿರೀಕ್ಷೆ ಇದ್ದು, ಮಂಡ್ಯ ಕ್ಷೇತ್ರದ ಜನರು ಸೇರಿದಂತೆ ಇತರೆ ಜನರು ಕೂಡ ಸುಮಲತಾ ಜಯ ಸಾಧಿಸಲಿ ಎಂದು ಹೇಳುತ್ತಿದ್ದಾರೆ. ಇವರ ಆಶೀರ್ವಾದವೇ ಸುಮಲತಾ ಗೆಲುವಿಗೆ ವರವಾಗಲಿದೆ. ತಾಯಿ ಅನ್ನಪೂಣೇಶ್ವರಿ ದೇವಿಯಲ್ಲಿ ಸುಮಲತಾ ಗೆಲುವಿಗೆ ಪ್ರಾರ್ಥನೆ ಮಾಡಿದ್ದೇನೆ. ಒಂದು ವೇಳೆ ದೇಶದಲ್ಲಿ ಅತಂತ್ರ ಪರಿಸ್ಥಿತಿ ಎದುರಾದರೆ ಜನರ ತೀರ್ಮಾನದಂತೆ ಸುಮಲತಾ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ವೆಂಕಟೇಶ್ ಹೇಳಿದ್ದಾರೆ.

ಇನ್ನು ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಎದುರಾದ ಟೈಟಲ್​ಗಳ ಬಗ್ಗೆ ನನಗೆ ನಂಬಿಕೆ ಇಲ್ಲ. ಜೋಡೆತ್ತು, ನಿಖಿಲ್ ಎಲ್ಲಿದ್ದೀಯಾಪ್ಪ ಎನ್ನುವ ಟೈಟಲ್​ಗಳಿಂದ ಸಿನಿಮಾ ಹೋಗುವುದಿಲ್ಲ. ಟೈಟಲ್​ನಿಂದ ಸಿನಿಮಾ ಓಡುತ್ತೆ ಎನ್ನುವುದು ತಪ್ಪು ಕಲ್ಪನೆ. ಸಿನಿಮಾಕ್ಕೆ ಕಥೆ, ನಾಯಕ ಮುಖ್ಯ ಎಂದು ನಟ-ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಹೊರನಾಡು ಅನ್ನಪೂಣೇಶ್ವರಿ ದೇವಾಲಯದಲ್ಲಿ ಹೇಳಿದರು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com