ಟಗರು ಚಿತ್ರ ವೀಕ್ಷಿಸಿದ ರಾಕಿಂಗ್ ಸ್ಟಾರ್…

Published on

436 Views

ಟಗರು ಚಿತ್ರ ವೀಕ್ಷಿಸಿದ ರಾಕಿಂಗ್ ಸ್ಟಾರ್…

ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ ‘ಟಗರು’ ಚಿತ್ರದ ಬಗ್ಗೆ ಈಗಾಗಲೇ ಚಿತ್ರರಂಗದ ತಂತ್ರಜ್ಞರು ಹಾಗೂ ಕಲಾವಿದರು ಎಲ್ಲರೂ ಸಿನೆಮಾವನ್ನು ನೋಡಿ‌ ಉತ್ತಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಕಳೆದ ವಾರ ಕಿಚ್ಚ ಸುದೀಪ್ ‘ಟಗರು’ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಮೊನ್ನೆಯಷ್ಟೇ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಜೊತೆ ‘ಟಗರು’ ಸಿನಿಮಾ ವನ್ನು ನೋಡಿ ಸೂರಿ ನಿರ್ದೇಶನದ ಬಗ್ಗೆ ಮತ್ತು ಚಿತ್ರದ ಹಾಡುಗಳ ಬಗ್ಗೆ , ಮೇಕಿಂಗ್ ಎಲ್ಲವೂ ಕ್ಲಾಸ್ ಲೆವೆಲ್ ಎಂದು ಮೆಚ್ಚುಗೆ ಮಾತುಗಳನಾಡಿದ್ದಾರೆ. ಶಿವಣ್ಣನ ಅಭಿನಯ , ಧನಂಜಯ ರವರ ಡಾಲಿ ಪಾತ್ರ ಮತ್ತು ಅಭಿನಯವನ್ನು ಇಷ್ಟಪಟ್ಟಿದ್ದಾರೆ. ಎಲ್ಲ ಪಾತ್ರಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ‘ಟಗರು’ ಚಿತ್ರದ ಹವಾ ರಾಜ್ಯದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಸದ್ದು ಮಾಡುತ್ತಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com