‘ಮಫ್ತಿ’ ನಿರ್ದೇಶಕರ ಜೊತೆ ಸಿನಿಮಾ ಮಾಡಲಿದ್ದಾರೆಯೇ ರಾಕಿಂಗ್ ಸ್ಟಾರ್

Published on

312 Views

ಕೆಜಿಎಫ್ 2 ಸಿನಿಮಾದ ಬಳಿಕ ರಾಕಿಂಗ್ ಸ್ಟಾರ್ ಯಶ್ ಯಾವ ಸಿನಿಮಾ ಮಾಡುತ್ತಿದ್ದಾರೆಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಮೂಡಿದೆ. ಪರಭಾಷೆಯ ಸ್ಟಾರ್ ಡೈರೆಕ್ಟರ್ ಗಳು ಯಶ್ ಅವರ ಕಾಲ್ ಶೀಟ್ ಪಡೆಯಲು ಪ್ರಯತ್ನಿಸಿದ್ದಾರೆಂಬ ಸುದ್ದಿಯಿದೆ. ಈಗ ಹೊರ ಬಿದ್ದಿರುವ ಸುದ್ದಿಯ ಪ್ರಕಾರ ಯಶ್ ರವರು ‘ಮಫ್ತಿ’ ಚಿತ್ರದ ನಿರ್ದೇಶಕ ನರ್ತನ್ ಯಶ್ ರವರಿಗೆ ಸಿನಿಮಾ ಮಾಡಲಿದ್ದಾರೆಂಬ ಸುದ್ದಿ ಚರ್ಚೆಯಲ್ಲಿದ್ದು, ಯಶ್ ಮತ್ತು ನರ್ತನ್ ಕಾಂಬಿನೇಷನ್ ನಲ್ಲಿ ಮೂಡಿ ಬರಲಿರುವ ಚಿತ್ರ ಫ್ಯಾನ್ ಇಂಡಿಯಾ ಸಿನಿಮಾವಾಗಲಿದೆ.

ನಟ ಶ್ರೀಮುರುಳಿ ಹಾಗೂ ಶಿವರಾಜ್ ಕುಮಾರ್ ನಟನೆಯ ‘ಮಫ್ತಿ’ ಸಿನಿಮಾ ಕನ್ನಡದಲ್ಲಿ ಯಶಸ್ಸು ಕಂಡಿದ್ದು, ಈಗ ‘ಮಫ್ತಿ’ ಸಿನಿಮಾ ತಮಿಳಿಗೆ ರಿಮೇಕ್ ಆಗುತ್ತಿದ್ದು, ನರ್ತನ್ ಆ್ಯಕ್ಷನ್ ಕಟ್ ಹೇಳಬೇಕಿತ್ತು. ಅದರೆ ನರ್ತನ್ ಅದರಿಂದ ಹೊರಬಂದಿದ್ದಾರೆ. ಕೆಜಿಎಫ್ 2 ನಲ್ಲಿ ಶೂಟಿಂಗ್ ನಲ್ಲಿ‌ ಬಿಜಿಯಾಗಿದ್ದಾರೆ ಯಶ್. ಡಿಸೆಂಬರ್ ನಲ್ಲಿ ಶೂಟಿಂಗ್ ಮುಗಿಯುವ ಹಂತದಲ್ಲಿದ್ದು, ಜನವರಿ ನಂತರ ಯಶ್ ಹೊಸ ಸಿನಿಮಾದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.

ಅದರೆ ಯಶ್ ಮತ್ತು‌ ನರ್ತನ್ ರವರ ಸಿನಿಮಾದ ಬಗ್ಗೆ ಇನ್ನು ಅಧಿಕೃತ ಮಾಹಿತಿ ಬಂದಿಲ್ಲ. ಕೆಜಿಎಫ್ ಸಿನಿಮಾದ ಮೂಲಕ ನ್ಯಾಷನಲ್ ಸ್ಟಾರ್ ಆಗಿರುವ ಯಶ್ ತಮ್ಮ ಇಮೇಜ್ ನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ತಮ್ಮ ಮುಂದಿನ ಸಿನಿಮಾದಲ್ಲಿದೆ. ಯಶ್ ಅಭಿಮಾನಿಗಳು ಕೂಡ ಅವರ ಮುಂದಿನ ಸಿನಿಮಾದ ಬಗ್ಗೆ ಕಾತುರದಿಂದ ಕಾಯುತ್ತಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com