ನೀರಿನ ಕ್ಯಾನ್ ಸಪ್ಲೈ ಮಾಡುತ್ತಿದ್ದ ರಿಷಬ್ ಶೆಟ್ಟಿ..!!

Published on

368 Views

ಸಾಮಾಜಿಕ ಜಾಲತಾಣದಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ‌ಸಿನಿಮಾರಂಗಕ್ಕೆ ಬರುವ ಮೊದಲು ಏನು‌ ಕೆಲಸ ಮಾಡುತ್ತಿದ್ದರು ಎಂಬುದನ್ನು ಹಂಚಿಕೊಂಡಿದ್ದಾರೆ.

ರಿಷಬ್ ಶೆಟ್ಟಿಯವರು ನೀರಿನ‌ ಕ್ಯಾನ್ ಸಪ್ಲೈ ಮಾಡುವ ಪೋಟೋ ಹಂಚಿಕೊಂಡು ನಾನು ಸಿನಿಮಾರಂಗಕ್ಕೆ ಬರುವ ಮೊದಲು ಇದೇ ಕೆಲಸ ಮಾಡುತ್ತಿದ್ದೆ ಎಂದು‌ ಹೇಳಿಕೊಂಡಿದ್ದಾರೆ. ರಿಷಬ್ ಶೆಟ್ಟಿಯವರ ಈ ಮಾತನ್ನು‌ ಕೇಳಿದ ನಿರ್ಮಾಪಕ ಕಾರ್ತಿಕ್ ಗೌಡ ಅವರನ್ನು ತಮಾಷೆ ಮಾಡುತ್ತ ನಮಗೂ 50 ಕ್ಯಾನ್ ಹಾಕಿ ಎಂದಿದ್ದಾರೆ.

ಇದಕ್ಕೆ ರಿಷಬ್‌ ಶೆಟ್ಟಿಯವರು ಅಡ್ರೆಸ್ ಕೊಡಿ ಖಂಡಿತಾ ಕೊಡುತ್ತೇನೆ ಎಂದು ತಮಾಷೆಯಾಗಿ ಹೇಳಿದ್ದಾರೆ. ಹಾಗೇ ಇಬ್ಬರೂ ತಮಾಷೆಯಾಗಿ ಮಾತುಕತೆ ನಡೆಸಿದ್ದಾರೆ. ಇದಕ್ಕೆ ಇತರ ಸ್ನೇಹಿತರು ಅವರನ್ನು ನೀವ್ಯಾಕೆ ಇದೇ ಕೆಲಸದ ಕತೆ ಇಟ್ಟುಕೊಂಡು ಸಿನಿಮಾ ಮಾಡಬಾರದೆಂದು ಕೇಳಿದ್ದಾರೆ. ರಿಷಬ್ ಶೆಟ್ಟಿ ಹಾಗೂ ನಿರ್ಮಾಪಕ ಕಾರ್ತಿಕ್ ಗೌಡರಿಗೂ ಈಗ ಈ ಐಡಿಯಾ ಹೊಳೆದಿರಬಹುದು. ಮುಂದೆ ಇಂತಹುದೇ ಕಥೆ ಹಿಡಿದುಕೊಂಡು ಸಿನಿಮಾ ಮಾಡಿದರೂ ಆಶ್ಚರ್ಯ ಪಡಬೇಕಿಲ್ಲ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com