ಹಿರಿಯ ನಟಿ ಕೃಷ್ಣಕುಮಾರಿ ಇನ್ನಿಲ್ಲ

Published on

603 Views

ಹಿರಿಯ ನಟಿ ಕೃಷ್ಣಕುಮಾರಿ ಇನ್ನಿಲ್ಲ

‘ಭಕ್ತ ಕನಕದಾಸ’ , ‘ಆಶಾ ಸುಂದರಿ’ , ‘ ಶ್ರೀಶೈಲ ಮಹಾತ್ಮೆ’, ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಕೃಷ್ಣಕುಮಾರಿ (84) ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ನಟಿ ಸಾಹುಕರ್ ಜಾನಕಿ ಅವರ ಸಹೋದರಿಯಾಗಿರುವ ಕೃಷ್ಣಕುಮಾರಿ ಯವರು ತಮಿಳು‌, ತೆಲುಗು, ಕನ್ನಡ, ಮಲಯಾಳಂ ಹೀಗೇ ಸುಮಾರು 230 ಚಿತ್ರಗಳಲ್ಲಿ ನಟಿಸಿದ್ದಾರೆ. ಡಾ.ರಾಜ್ ಕುಮಾರ್, ಎನ್.ಟಿ.ಆರ್, ನಾಗೇಶ್ವರರಾವ್ ಮೊದಲಾದ ನಾಯಕರ ಜೊತೆ ನಟಿಸಿದ್ದಾರೆ. 60-70ರ ದಶಕದಲ್ಲಿ ಜನಪ್ರಿಯ ತಾರೆಯಾಗಿದ್ದರು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com