ಎಡಕಲ್ಲು ಗುಡ್ಡದ ಮೇಲೆ’ ಖ್ಯಾತಿಯ ನಟ ಚಂದ್ರಶೇಖರ್ ಇನ್ನಿಲ್ಲ.

Published on

545 Views

‘ಎಡಕಲ್ಲು ಗುಡ್ಡದ ಮೇಲೆ’ ಖ್ಯಾತಿಯ ನಟ ಚಂದ್ರಶೇಖರ್ ಇನ್ನಿಲ್ಲ.
ಎಡಕಲ್ಲು ಗುಡ್ಡದ ಮೇಲೆ ಚಿತ್ರ ಖ್ಯಾತಿಯ ಚಂದ್ರಶೇಖರ್ ಅವರು‌ ಹೃದಯಾಘಾತದಿಂದ ಕೆನಾಡದ ತಮ್ಮ ನಿವಾಸದಲ್ಲಿ ಇಂದು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ.

ಚಂದ್ರಶೇಖರ್ ರವರು ಪತ್ನಿ ಶೀಲಾ ಮತ್ತು ಮಗಳು ತಾನಿಯಾರನ್ನು ಅಗಲಿದ್ದಾರೆ.

ಎಡಕಲ್ಲು ಗುಡ್ಡದ ಮೇಲೆ ಚಿತ್ರದಲ್ಲಿ ನಾಯಕನಟನಾಗಿ ಅಭಿನಯಿಸಿದ್ದ ಚಂದ್ರಶೇಖರ್ ರವರು ಅನೇಕ ಕನ್ನಡ ಚಿತ್ರದಲ್ಲಿ ನಾಯಕ ಹಾಗೂ ಖಳನಾಯಕನಾಗಿ ಅಭಿನಯಿಸಿದ್ದಾರೆ. ಬಾಲನಟರಾಗಿ‌ ಚಿತ್ರರಂಗ ಪ್ರವೇಶಿಸಿದ ಅವರು ‘ಪಡುವರಳ್ಳಿ ಪಾಂಡವರು’, ‘ ವಂಶ ವೃಕ್ಷ’, ‘ ರಾಜ ನನ್ನ ರಾಜ’ ಸೇರಿದ್ದಂತೆ 40 ಕ್ಕೂ ಹೆಚ್ಚು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇತ್ತೀಚಿಗೆ ತೆರೆ ಕಂಡ ’30 ಗಂಟೆ 30 ದಿನ 30 ಸೆಕೆಂಡು’ ಸಿನಿಮಾದಲ್ಲಿ ನಟಿಸಿದ್ದಾರೆ. ಇದು ಅವರ ಕೊನೆಯ ಸಿನಿಮಾವಾಗಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com