RH 100 ಹೊಸಬರ ಚಿತ್ರದ ಟ್ರೇಲರ್​ ಬಿಡುಗಡೆ ಸಂಭ್ರಮದ ಸಮಾರಂಭ

Published on

384 Views

ಆರ್​ಎಚ್​ 100 ಸಿನಿಮಾ ಇದೀಗ ಟ್ರೇಲರ್​ ಬಿಡುಗಡೆ ಮಾಡಿಕೊಂಡ ಸಂಭ್ರಮದಲ್ಲಿದೆ. ಎಸ್.ಎಲ್.ಎಸ್ ಪ್ರೊಡಕ್ಷನ್ಸ್​ನಡಿ ಹರೀಶ್ ಕುಮಾರ್ ಎಲ್ ನಿರ್ಮಿಸುತ್ತಿರುವ ‘ಆರ್​ಎಚ್​ 100’ ಚಿತ್ರವನ್ನು ಮಹೇಶ್ ಎಂ.ಸಿ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

ಬಹುತೇಕ ಹೊಸಬರೇ ಸೇರಿ ನಿರ್ಮಿಸಿರುವ ಈ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ಮಹೇಶ್, ಒಟ್ಟು 38 ದಿನಗಳ ಕಾಲ ಬೆಂಗಳೂರು ಮತ್ತು ಕೊಡಚಾದ್ರಿಯಲ್ಲಿ ಚಿತ್ರದ ಬಹುಪಾಲು ಶೂಟಿಂಗ್​ ಮಾಡಿಕೊಂಡಿದ್ದೇವೆ. ಸೆನ್ಸಾರ್ ಮಂಡಳಿಯಿಂದ ಎ ಪ್ರಮಾಣ ಪತ್ರ ಸಿಕ್ಕಿದ್ದು, ಡಿ.18ರಂದು ಬಿಡುಗಡೆಗೆ ದಿನಾಂಕ ನಿಗದಿ ಮಾಡಿಕೊಂಡಿದ್ದೇವೆ’ ಎಂದರು.

ಆ್ಯಕ್ಟ್​ 1978 ಚಿತ್ರದ ನಿರ್ಮಾಪಕ ದೇವರಾಜ್​ ಆರ್, ನಿರ್ದೇಶಕ ಹರಿ ಸಂತು ನಟ ಚೇತನ್ ರಾಜ್​ ಅತಿಥಿಗಳಾಗಿ ಆಗಮಿಸಿ, ಟ್ರೇಲರ್​ ಲಾಂಚ್ ಮಾಡಿದರು. ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಹರಸಿದರು.

‘ಆರ್​.ಎಕ್ಸ್​ 100’ ಗೊತ್ತು, ಈ ‘ಆರ್​.ಎಚ್​ 100’ ಎಂದರೇನು? ಎಂಬ ಪ್ರಶ್ನೆ ಬರುವುದು ಸಹಜ. ಆದರೆ, ನಿರ್ದೇಶಕರು ಈ ವಿಷಯವನ್ನು ರಹಸ್ಯವಾಗಿಟ್ಟಿದ್ದು, ಚಿತ್ರಮಂದಿರಗಳಲ್ಲೇ ನೋಡಿ ಎಂದು ಪ್ರೇಕ್ಷಕರಿಗೆ ಮನವಿ ಮಾಡಿದ್ದಾರೆ.

ಮನೋಜ್ ಹಾಗೂ ಸಿದ್ದು ಕೋಡಿಪುರ್ ಹಾಡುಗಳನ್ನು ಬರೆದಿದ್ದು, ಮೆಲ್ವಿನ್ ಮೈಕಲ್ ಸಂಗೀತ ನೀಡಿದ್ದಾರೆ. ಸೋಮಶೇಖರ್ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಸಂಜಿತ್‌ ಹೆಗ್ಡೆ, ಅನುರಾಧ ಭಟ್, ಸಿದ್ದಾರ್ಥ್ ಬೆಲ್‌ ಮನು ಅವರ ಕಂಠಸಿರಿಯಲ್ಲಿ ಈ ಚಿತ್ರದ ಹಾಡುಗಳು ಮೂಡಿಬಂದಿವೆ. ಚಿತ್ರಕ್ಕೆ ಕೃಷ್ಣ ಛಾಯಾಗ್ರಹಣ, ಸಿ.ರವಿಚಂದ್ರನ್‌ ಸಂಕಲನ ಹಾಗೂ ಕುಂಫ್ಫು ಚಂದ್ರು ಸಾಹಸ ನಿರ್ದೇಶನ ಮಾಡಿದ್ದಾರೆ. ಗಣೇಶ್, ಹರ್ಷ. ಚಿತ್ರ, ಕಾವ್ಯ, ಸೋಮ್ ಸುಹಿತ್ ಮುಂತಾದವರು ಚಿತ್ರದಲ್ಲಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com