RGV’s Corona Virus Movie Heroine Dakkshi Guttikonda
RGV’s Corona Virus Movie Heroine Dakkshi Guttikonda
ರಾಮ್ ಗೋಪಾಲ್ ವರ್ಮಾ ಹೊಸ ನಾಯಕಿಯರನ್ನು ಚಿತ್ರರಂಗಕ್ಕೆ ಪರಿಚಯಿಸುವ ರೀತಿಯೇ ಭಿನ್ನವಾಗಿದೆ. ಗ್ಲಾಮರಸ್ ಅವತಾರದ ಫೋಟೋಶೂಟ್ ಮಾಡಿಸಿ, ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟರೆ, ರಾತ್ರೋ ರಾತ್ರಿ ಆ ಹೊಸ ನಟಿ ಸ್ಟಾರ್ ಪಟ್ಟ ಗಿಟ್ಟಿಸಿಕೊಳ್ಳುತ್ತಾಳೆ. ಈಗಾಗಲೇ ಆರ್ಜಿವಿ ಸಿನಿಮಾ ಬತ್ತಳಿಕೆಯಿಂದ ಸಾಕಷ್ಟು ನಟಿಯರು ಹಲವು ಇಂಡಸ್ಟ್ರಿಗಳಲ್ಲಿ ಸಕ್ರಿಯೆರಾಗಿದ್ದಾರೆ. ಇದೀಗ ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ‘ಕರೊನಾ ವೈರಸ್’ ಶೀರ್ಷಿಕೆಯಲ್ಲಿ ಸಿನಿಮಾ ಮಾಡಿದ್ದಾರೆ ರಾಮ್ಗೋಪಾಲ್.