ಬಿಡುಗಡೆ ಗೆ ರೆಡಿಯಾದ “ಆಚಾರ್ಯ ಶ್ರೀ ಶಂಕರ” ಸಿನಿಮಾ.

Published on

690 Views

ಕನ್ನಡ ಸಂಸ್ಕೃತ, ದ್ವಿಭಾಷೆಗಳಲ್ಲಿ ತಯರಾಗಿರುವ “ಆಚಾರ್ಯ ಶ್ರೀ ಶಂಕರ” ಚಿತ್ರವನ್ನು ವೃತ್ತಿಯಲ್ಲಿ ಲೆಕ್ಕಪರಿಶೋಧಕರಾಗಿರುವ ವೈ.ಎನ್.ಶರ್ಮ ಮತ್ತು ಶ್ರೀಮತಿ.ವಿಜಯಲಕ್ಷ್ಮಿ ಅವರು, ಯಮ್ಮನೂರು ಕ್ರಿಯೇಷನ್ಸ್ ಲಾಂಛನದಡಿಯಲ್ಲಿ ನಿರ್ಮಿಸಿದ್ದಾರೆ. “ಆಚಾರ್ಯ ಶ್ರೀ ಶಂಕರ” ಚಿತ್ರವು ಕೇಂದ್ರ ಸೆನ್ಸಾರ್ ಮಂಡಳಿಯವರಿಂದ ವೀಕ್ಷಿಸಿ “ಯು” ಸರ್ಟಿಫಿಕೇಟ್ ಪಡೆದುಕೊಂಡಿದೆ.

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಶ್ರೀಮತಿ, ಅಷ್ಟಾವಕ್ರ, ಭಗವದ್ ಶ್ರೀರಾಮಾನುಜಾಚಾರ್ಯ ಚಿತ್ರಗಳನ್ನು ನಿರ್ದೇಶಿಸಿದ್ದ ರಾಜಾರವಿಶಂಕರ್ ರವರು ಆಚಾರ್ಯ ಶ್ರೀಶಂಕರ ಚಿತ್ರವನ್ನು ನಿರ್ದೇಶಿಸಿದ್ದಾರೆ. ಶ್ರೀಶಂಕರಚಾರ್ಯರ ಪಾತ್ರದಲ್ಲಿ ರವೀಂದ್ರ ಭಾಗವತ್, ರಾಮಕೃಷ್ಣ, ಪ್ರಥಮಪ್ರಸಾದ್, ವಿನಯಪ್ರಸಾದ್, ಸಾಯಿಪ್ರಕಾಶ್, ಭರತ್‌ಕಲ್ಯಾಣ್, ಮೂಗುಸುರೇಶ್, ಮೈಕೋಮಂಜು, ತೇಜಸ್ವಿನಿ, ಸುರೇಖ, ಮಾಸ್ಟರ್‌ ಲಿಖಿತ್ ಶರ್ಮ, ಮಾಸ್ಟರ್ ರೋಹಿತ್ ಶರ್ಮ ಮುಂತಾದವರು ಅಭಿನಯಿಸಿದ್ದಾರೆ.

ಛಾಯಾಗ್ರಹಣ – ಸಿ.ನಾರಾಯಣ, ಸಂಗೀತ ಅರ್ಜುನ್ ಜನ್ಯ, ಸಂಕಲನ-ಆರ್‌.ದೊರೈರಾಜ್ (ಆರ್.ಡಿ.ರವಿ), ಪ್ರಸಾದನ-ಕುಮಾರ್‌ ವಸ್ತಾಲಂಕಾರ – ಕೆ.ಚಂದ್ರಚಾರಿ, ಕಲಾನಿರ್ದೇಶನ ಸಹ-ನಿರ್ದೆಶನ – ಎಂ.ಜಿ.ಜಗದೀಶ್ ಕುಮಾರ್‌ (ಎನ್.ಕೆ) ನೊಣವಿನಕೆರೆ,

ಡಾ|| ಶ್ರೀ ಆರೂಢ ಸ್ವಾಮಿಜಿಯವರು ಸಂಸ್ಕೃತ ಚಿತ್ರಕ್ಕೆ ಸಂಭಾಷಣೆಯನ್ನು ರಚಿಸಿ ವ್ಯಾಸ ಮಹರ್ಷಿಗಳ ಪಾತ್ರದಲ್ಲಿ ಅಭಿನಯಿಸಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com