“ಕರೋನ ಬಗ್ಗೆ ಉಪ್ಪೇಂದ್ರ ಹೇಳಿದ್ದೇನು ಅಂತ ಈ ಸ್ಟೋರಿ ನೋಡಿ”
ಕೊರೊನಾನಾ ಆಮೇಲೆ ನೋಡ್ಕೋಳ್ಳೋಣ ಅಂಥ ಹೆಚ್ಚು ಕಡಿಮೆ ಕಳೆದೊಂದು ವರ್ಷದಿಂದ ಉಡಾಫೆ ಮಾಡ್ಕೊಂಡು ಬಂದ ಪರಿಣಾಮ ಇವತ್ತು ಕೊರೊನಾ ದೇಶವನ್ನ ಮತ್ತೆ ಆವರಿಸಿಕೊಂಡಿದೆ. ದಿನದಿಂದ ದಿನಕ್ಕೆ ಬಡವ-ಶ್ರೀಮಂತ ಅನ್ನುವ ಬೇದ-ಭಾವವಿಲ್ಲದೇ ಅಟ್ಟಹಾಸ ಮೆರೆಯುತ್ತಿದೆ. ಇದಕ್ಕೆ ಕಾರಣ ಯಾರು..? ಸರ್ಕಾರನಾ.. ಜನಾನಾ..? ಇಂಥಹದ್ದೊಂದು ಪ್ರಶ್ನೆ ನಿಮಗೆ ಕಾಡುತ್ತಿದ್ದರೆ ಉಪ್ಪಿಯ ಮಾತುಗಳನ್ನೊಮ್ಮೆ ನೀವ್ ಕೇಳಿಸಿಕೊಳ್ಳಬೇಕು.
ಉಪ್ಪಿ ಪ್ರಕಾರ ಇದಕ್ಕೆಲ್ಲ ಕಾರಣ ಬದಲಾದ ರಾಜಕೀಯ. ಹೌದು. ರಾಜಕೀಯ ರಾಜಕೀಯವಾಗೀಗ ಉಳಿದಿಲ್ಲ. ಬದಲಿಗೆ ಇದೀಗ ರಾಜಕೀಯ ವ್ಯವಹಾರ ಆಗಿದೆ. ಇದು.. ಸಾಲದು ಅನ್ನುವಂತೆ ಕೊರೊನಾಗೆ ಕಡಿವಾಣ ಹಾಕಬೇಕಿರುವ ಸರ್ಕಾರವೇ ಜನರನ್ನ ದಿಕ್ಕು ತಪ್ಪಿಸುತ್ತಿದೆ. ಮಾಡೋದೆಲ್ಲ ಅನಾಚಾರ ಮನೆ ಮುಂದೆ ಬೃಂದಾವನ ಅನ್ನುವಂತೆ ರಾತ್ರಿಯಾದರೇ ಸಾಮಾಜಿಕ ಅಂತರ ಕಾಯ್ದುಕೊಳ್ಳಿಯೆಂದು ಹೇಳುವ ಸರ್ಕಾರ ದಿನವೀಡಿ ಜನರನ್ನ ಗುಡ್ಡೆ ಲೆಕ್ಕದಲ್ಲಿ ಒಂದು ಕಡೆ ಸೇರಿಸುತ್ತೆ. ಪ್ರಚಾರದ ನೆಪದಲ್ಲಿ ತಾನೇ ಮಾಡಿದ ಎಲ್ಲ ನಿಯಮಗಳನ್ನ ಗಾಳಿಗೆ ತೂರಿ ಚುನಾವಣಾ ರ್ಯಾ ಲಿ ನಡೆಸುತ್ತೆ.
ಹೀಗಾದಾಗ.. ಜನ ಕನ್ಫ್ಯೂಸ್ ಆಗಲ್ವಾ..? ಅನ್ನೋದು ಉಪ್ಪಿ ಕೇಳುವ ಪ್ರಶ್ನೆ. ಇನ್ನು.. ಯಾವ್ದೇ ದೇಶ ಪ್ರಗತಿಯತ್ತ ಹೆಜ್ಜೆ ಇಡ್ಬೇಕಂದ್ರೆ ಅಲ್ಲಿ ಶಿಕ್ಷಣ ಹಾಗೂ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು. ದುರದೃಷ್ಟವಶಾತ್ ಭಾರತದಲ್ಲಿ ಶಿಕ್ಷಣ ಹಾಗೂ ಆರೋಗ್ಯಕ್ಕೆ ಸರ್ಕಾರಗಳೂ ನೀಡುವ ಮಹತ್ವ ಎಷ್ಟಿದೆ ಅನ್ನುವದು ಕಣ್ಮುಂದೆ ಇದೆ. ಸದ್ಯದ ಪರಿಸ್ಥಿತಿಯಲ್ಲಂತೂ ಎಲ್ಲಿ ಹೋದರೂ ಸರಿಯಾದ ಚಿಕಿತ್ಸೆ ಸಿಗ್ತಿಲ್ಲ. ಕೊರೊನಾ ಸೊಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್.. ಆಕ್ಸಿಜನ್ ಕೂಡಾ ಸಿಗ್ತಿಲ್ಲ. ಈ ಕಾರಣದಿಂದಾಗಿಯೇ ಶಿಕ್ಷಣ ಮತ್ತು ಆರೋಗ್ಯ ಚೆನ್ನಾಗಿದ್ದರೆ ದೇಶ ಚೆನ್ನಾಗಿರುತ್ತೆ ಅಂದಿದ್ದಾರೆ ಉಪೇಂದ್ರ .
ಇನ್ನು ಸಾಮಾನ್ಯವಾಗಿ ಸೆಲೆಬ್ರೀಟಿಗಳೂ ಅಂದ್ಮೇಲೆ ಕಾಲಿಗೊಂದು ಕೈಗೊಂದು ಆಳಿರುತ್ತಾರೆ. ಎಲ್ಲವೂ ಅನಾಯಾಸವಾಗಿ ಇವ್ರಿಗೆ ಸಿಕ್ಕ ಬಿಡುತ್ತೆ ಅನ್ನುವ ಒಂದು ಭ್ರಮೆ ಅನೇಕರಲ್ಲಿ ಇರುತ್ತೆ. ಆದ್ರೆ ನೆನಪಿಡಿ.. ವಾಸ್ತವ ಬೇರೆ ಇದೆ. ಅದ್ರಲ್ಲೂ ಕೊರೊನಾ ಕಾಲದಲ್ಲಂತೂ ಯಾವ ಇನ್ ಪ್ಲೂಯೆನ್ಸ್ ಕೆಲ್ಸಕ್ಕೆ ಬರಲ್ಲ. ಇದಕ್ಕೆ ಸಾಧು ಕೋಕಿಲಾ ಅತ್ಯುತ್ತಮ ಉದಾಹರಣೆ. ಹೌದು. ಸಾಧು ಅವರ ಅಣ್ಣನ ಮಗನಿಗೆ ಇತ್ತೀಚಿಗೆ ಕೊರೊನಾ ಸೊಂಕು ತಗುಲಿತ್ತು. ಉಸಿರಾಟದ ತೊಂದರೆಯೂ ಆಗಿತ್ತು. ಆಗ ಸಾಧು ಒಂದೇ ಒಂದು ಆಕ್ಸಿಜನ್ ಸಿಲೆಂಡರ್ ಗಾಗಿ ಪಡಬಾರದ ಕಷ್ಟವನ್ನ ಪಟ್ಟಿದ್ದಾರೆ. ಆಕ್ಸಿಜನ್ ಸಿಲಿಂಡರ್ ಪಡೆಯಲು ಪರದಾಡಿದ್ದಾರೆ. ಈ ಕಾರಣದಿಂದಾಗಿ ತನಗಾದ ಸಂಕಟ ಬೇರೆಯವರು ಅನುಭವಿಸುವಂತಾಗದಿರಲಿ ಎಂದು ಪ್ರಾರ್ಥಿಸಿದ್ದಾರೆ ಸಾಧು. ದಯವಿಟ್ಟು ನಿರ್ಲಕ್ಷ್ಯ ಬೇಡ.. ಟಿವಿ ಚಾನಲ್ ನಲ್ಲಿ ಬರೋ ಸುದ್ದಿಯನ್ನ ನಿರ್ಲಕ್ಷ್ಯ ಮಾಡಬೇಡಿ..
ನಾವು ಮೊದಲು ಹುಷಾರಾಗಿರೋದನ್ನ ಕಲಿಯಬೇಕು ಅಂದಿದ್ದಾರೆ ಸಾಧು ಕೋಕಿಲಾ. ಅಂದ ಹಾಗೇ ಸಾಧು ಕೋಕಿಲಾ ಹಾಗೂ ಉಪೇಂದ್ರ ಇವ್ರಿಬ್ಬರು ಸದ್ಯದ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದು ಲಗಾಮ್ ಚಿತ್ರದ ಮುಹೂರ್ತ ಸಮಾರಂಭದಲ್ಲಿ. ಲಗಾಮ್ ಚಿತ್ರದ ಮುಹೂರ್ತ ಸಮಾರಂಭದ ಕಥೆಯನ್ನ ಮತ್ತೊಂದು ವರದಿಯಲ್ಲಿ ನಾವು ನಿಮಗೆ ಹೇಳುತ್ತೇವೆ. ಸದ್ಯಕ್ಕೆ ನೀವು ಕೊರೊನಾದಿಂದ ಜಾಗೃತರಾಗಿರಿ. ಯಾಕಂದ್ರೆ ಕೊರೊನಾ ಎರಡನೇ ಅಲೆ ನಿಜಕ್ಕೂ ಭೀಕರವಾಗಿದೆ. ಕೊನೆಯದಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಮಾಸ್ಕ್ ಕಡ್ಡಾಯವಾಗಿ ಧರಿಸಿ.