ವೀಡಿಯೋ ನೋಡಿ – ರಿಷಭ್ ಶೆಟ್ಟಿಗೆ ಸೆಲ್ಯೂಟ್ ಮಾಡಿ ಸಂಭ್ರಮಿಸಿದ ಆರ್.ಸಿ.ಬಿ ಯ ಸ್ಟಾರ್ ಬೌಲರ್ ಸಿರಾಜ್!!
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಭಾರತದ ಸ್ಟಾರ್ ಬೌಲರ್ ಸಿರಾಜ್ ರಿಷಬ್ ಶೆಟ್ಟಿಗೆ ಸೆಲ್ಯೂಟ್ ಮಾಡಿ ಸಂಭ್ರಮಿಸಿದ್ದಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ!!
18ನೇ ತಾರೀಕಿನಂದು ನಡೆದ ಆರ್.ಸಿ.ಬಿ ಮ್ಯಾಚ್ ಮಾಡು ಇಲ್ಲವೆ ಮಡಿ ಪಂದ್ಯವಾಗಿತ್ತು. ಇದು ಆರ್.ಸಿ.ಬಿ ಗೆ ಮಾತ್ರವಲ್ಲದೆ ಪೈನಲ್ ಗೆ ಆಯ್ಕೆಯಾಗಲು ಸಿ.ಎಸ್.ಕೆ ಗೂ ಮಾಡು ಇಲ್ಲವೆ ಮಡಿ ಪಂದ್ಯವಾಗಿತ್ತು. ಈ ಎರಡು ತಂಡಗಳಲ್ಲಿ ಒಬ್ಬರು ಮಾತ್ರ ಫ್ಲೇ ಆಫ್ ಗೆ ತಲುಪಲು ಸಾಧ್ಯವಾಗಿತ್ತು.
ಇದು 2024ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡಯುವ ಕೊನೆಯ ಪಂದ್ಯ ಹಾಗು ಮುಖ್ಯ ಪಂದ್ಯವಾಗಿರುವುದರಿಂದ ಸ್ಯಾಂಡಲ್ವುಡ್ ಕಲಾವಿದರು ಹಾಗು ಕರ್ನಾಟಕದ ಪ್ರಮುಖ ವ್ಯಕ್ತಿಗಳು ಪಂದ್ಯ ವೀಕ್ಷಿಸಲು ಬಂದಿದ್ದರು ಹಾಗೂ ಆರ್.ಸಿ.ಬಿಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ಪಂದ್ಯ ವೀಕ್ಷಿಸಲು ಬೆಂಗಳೂರಿಗೆ ಆಗಮಿಸಿದ್ದರು.
ನಟ ನಟಿಯರಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ರಿಷಭ್ ಶೆಟ್ಟಿ, ಅನುಷ್ಕಾ ಶರ್ಮಾ ಹಾಗೂ ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ, ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ಹಾಗು ಸಚಿವರು ಪಂದ್ಯ ನೋಡಲು ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದಿದ್ದರು. ಆರ್.ಸಿ.ಬಿ ಯ ಪ್ರಮುಖ ಹಾಗೂ ಹಳೆಯ ಅಟಗಾರ ಕ್ರಿಸ್ ಗೇಲ್ ಹಾಗೂ ಸ್ಮೃತಿ ಮಂದಾನ, ಶ್ರೇಯಾಂಕ ಪಾಟೀಲ್ ಕೂಡ ಬಂದಿದ್ದರು.
ಆರ್.ಸಿ.ಬಿ ಪಂದ್ಯವನ್ನು ಗೆದ್ದು ಪ್ಲೇ ಆಫ್ ಗೆ ಆಯ್ಕೆಯಾದಾಗ ನಟ/ನಟಿಯರು, ರಾಜಕಾರಣಿಗಳು ಸಂಭ್ರಮಿಸಿದರು. ಪಂದ್ಯ ಗೆದ್ದ ನಂತರ ಆಟಗಾರರು ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಲು ಸ್ಟೇಡಿಯಂನ ಸುತ್ತ ಚಪ್ಪಾಳೆ ತಟ್ಟುತ್ತಾ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.
ಕೃತಜ್ಞತೆಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಆರ್.ಸಿ.ಬಿ ಯ ಸ್ಟಾರ್ ಆಟಗಾರ ಮೊಹಮ್ಮದ್ ಸಿರಾಜ್ ಗ್ರೌಂಡ್ ನಿಂದ ರಿಷಭ್ ಶೆಟ್ಟಿಗೆ ಸೆಲ್ಯೂಟ್ ಮಾಡಿ ಸಂಭ್ರಮಿಸಿದರು. ಅದರ ವಿಡಿಯೋ ಇಲ್ಲಿದೆ.
ಇದಕ್ಕೆ ರಿಷಭ್ ಶೆಟ್ಟಿ ಸಿರಾಜ್ ಗೆ ಲವ್ ಯು ಮಿಯಾ ಎಂದು ಹೇಳಿದರು ಹಾಗೂ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಫೋಟೋ ಮತ್ತು ವೀಡಿಯೋವನ್ನು ರಿಷಭ್ ಶೆಟ್ಟಿ ಶೇರ್ ಮಾಡಿ ಇದು ಇತಿಹಾಸವಾಗಿದೆ!!
ಕ್ರೀಡಾಂಗಣದಲ್ಲಿ ಇದು ನನ್ನ ಮೊದಲ ಪಂದ್ಯವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
https://www.instagram.com/p/C7HuFIDPvqR/?utm_source=ig_web_copy_link&igsh=MzRlODBiNWFlZA==
ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ flixoye.com ನ್ನು ಫಾಲೋ ಮಾಡಿ.