ಮುತ್ತಪ್ಪ ರೈ ಬಗ್ಗೆ ಸಿನಿಮಾ ಮಾಡಲು ಹೊರಟ್ಟಿದ್ದಾರೆ ರವಿ ಶ್ರೀವತ್ಸ…
ಕೆಲವು ವರ್ಷಗಳ ಹಿಂದೆ ಮುತ್ತಪ್ಪ ರೈ ಬಗ್ಗೆ ಸಿನಿಮಾ ಮಾಡುತ್ತೇನೆಂದು ಮುಂದೆ ಬಂದಿದ್ದರು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ. ರೈ ಟೈಟಲ್ ಇಟ್ಟು ಅದ್ದೂರಿಯಾಗಿ ಸಿನಿಮಾ ಕೂಡ ಸೆಟ್ಟೇರಿತ್ತು. ಸುದೀಪ್, ನಂತರ ವಿವೇಕ್ ಒಬೆರಾಯ್ ಹೀರೋ ಎಂದು ಕೂಡ ಫಿಕ್ಸ್ ಆಗಿತ್ತು. ಅದರೆ ಆ ಸಿನಿಮಾ ಮಾತ್ರ ಶುರುವಾಗಲೇ ಇಲ್ಲ. ಅನಾರೋಗ್ಯದಿಂದ ಕೆಲ ದಿನಗಳ ಹಿಂದೆ ಮುತ್ತಪ್ಪ ರೈ ರವರು ನಿಧನರಾದರು.
ಅದೆಲ್ಲಾ ಹಳೆ ಕಥೆಯಾದರೆ ಈಗ ರೈರವರ ಬಗ್ಗೆ ಸಿನಿಮಾ ಮಾಡಲು ನಿರ್ದೇಶಕ ರವಿ ಶ್ರೀವತ್ಸ ಮುಂದಾಗಿದ್ದಾರೆ. ಚಿತ್ರಕ್ಕೆ ‘ಎಂಆರ್’ ಶೀರ್ಷಿಕೆ ಫೈನಲ್ ಮಾಡಿದ್ದು, ಗ್ರ್ಯಾಂಡ್ ಆಗಿ ಸಿನಿಮಾವನ್ನು ಲಾಂಚ್ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಇತ್ತೀಚಿಗೆ ಅದ್ದೂರಿಯಾಗಿ ಪೋಟೋ ಶೂಟ್ ಕೂಡ ಮಾಡಲಾಗಿದ್ದು, ಈ ಸಿನಿಮಾಕ್ಕೆ ‘ಡೆಡ್ಲಿ ಸೋಮ’ ನಿರ್ಮಾಪಕ ಶೋಭ ರಾಜಣ್ಣ ಅವರ ಪುತ್ರ ದೀಕ್ಷಿತ್ ನಾಯಕನಾಗಿ ‘ಎಂಆರ್’ ಮೂಲಕ ಬಡ್ತಿ ಪಡೆಯಲಿದ್ದಾರೆ. ದೀಕ್ಷಿತ್ ಡೆಡ್ಲಿ ಸೋಮದಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದರು. ರಾಜಣ್ಣ ಬಂಡವಾಳ ಹೂಡುತ್ತಿದ್ದು, ಮುತ್ತಪ್ಪ ರೈ ಬಾಲ್ಯದ ಜೀವನದಿಂದ, ಕೊನೆಯ ದಿನಗಳವರೆಗೆ ಈ ಸಿನಿಮಾದ ಕಥೆ ಸಾಗಲಿದೆಯಂತೆ.
ರಾಮನಗರದ ರೆಸಾರ್ಟ್ ವೊಂದರಲ್ಲಿ ಪೋಟೋ ಶೂಟ್ ಎಂಟ್ರಿ ಸೀನ್ ಗಳನ್ನು ಸೆರೆಹಿಡಿಯಲಾಗಿದೆ. ದುಬಾರಿ ಕಾರು, ಹೆಲಿಕಾಪ್ಟರ್ ಬಳಕೆ ಮಾಡಲಾಗಿದೆ. ಜನವರಿಯಿಂದ ಐದು ತಿಂಗಳಕಾಲ ಶೂಟಿಂಗ್ ಮಾಡಿ ಅಗಸ್ಟ್ ಸೆಪ್ಟೆಂಬರ್ ವೇಳೆಗೆ ಸಿನಿಮಾ ರಿಲೀಸ್ ಮಾಡುವ ಯೋಜನೆ ಹಾಕಿಕೊಂಡಿದ್ದೆ ಚಿತ್ರತಂಡ. ಮಂಗಳೂರು, ಪುತ್ತೂರು, ಬೆಂಗಳೂರು, ದುಬೈ, ಮುಂಬೈ ಸೇರಿದಂತೆ ಅನೇಕ ಕಡೆಗಳಲ್ಲಿ ಶೂಟಿಂಗ್ ಮಾಡಲಿದ್ದರಂತೆ.