ರವಿ ಬಸ್ರೂರು ನಿರ್ದೇಶನದಲ್ಲಿ ‘ಗಿರ್ಮಿಟ್’ ಅನ್ನೋ ಮತ್ತೊಂದು ಚಿತ್ರ

Published on

373 Views

ಕೆಜಿಎಫ್ ಚಿತ್ರದ ಮೂಲಕ ಭಾರೀ ಜನಪ್ರಿಯತೆ ಗಳಿಸಿದ್ದ ಸಂಗೀತ ನಿರ್ದೇಶಕ ರವಿ ಬಸ್ರೂರು ಆಗಾಗ ಡೈರೆಕ್ಷನ್​ನಲ್ಲೂ ತಮ್ಮ ಕೈಚಳಕ ತೋರಿಸ್ತಾನೆ ಇರ್ತಾರೆ. ಈಗಾಗಲೇ ‘ಗರ್​ಗರ್ ಮಂಡ್ಲ’, ‘ಬಿಲಿಂಡರ್’, ‘ಕಟಕ’ ದಂತಹ ಸದಭಿರುಚಿಯ ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ ರವಿ, ಇದೀಗ ‘ಗಿರ್ವಿುಟ್’ ತಿನ್ನಿಸೋಕೆ ರೆಡಿಯಾಗ್ತಿದ್ದಾರೆ. ಹೌದು ರವಿ ಬಸ್ರೂರು ನಿರ್ದೇಶನದಲ್ಲಿ ‘ಗಿರ್ಮಿಟ್’ ಅನ್ನೋ ಮತ್ತೊಂದು ಚಿತ್ರ ಬರುತ್ತಿದ್ದು, ಚಿತ್ರದ ಟೀಸರ​ನ್ನ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ರಿಲೀಸ್ ಮಾಡಿದ್ದಾರೆ.


‘ಗಿರ್ಮಿಟ್’​ನಲ್ಲಿ ಒಂದಾದ್ರು ರಾಕಿಂಗ್ ಜೋಡಿ..!
ಇದೊಂದು ಮಕ್ಕಳ ಸಿನಿಮಾವಾಗಿದ್ದು ಚಿತ್ರದಲ್ಲಿ ಸುಮಾರು 280 ಕ್ಕೂ ಅಧಿಕ ಬಾಲಪ್ರತಿಭೆಗಳು ನಟಿಸಿದ್ದಾರೆ. ಇದೊಂದು ಪಕ್ಕಾ ಕಮರ್ಷಿಯಲ್ ಶೈಲಿಯ ಸಿನಿಮಾವಾಗಿದೆ. ಇದರಲ್ಲಿ ಸ್ನೇಹ, ಪ್ರೀತಿ, ಫ್ಯಾಮಿಲಿ ಸೆಂಟಿಮೆಂಟ್ ಜೊತೆಗೆ ಭರ್ಜರಿ ಮನರಂಜನೆಯನ್ನು ಒಳಗೊಂಡಿದೆ. ಚಿತ್ರದಲ್ಲಿ ಸ್ಯಾಂಡಲ್​ವುಡ್​​ ತಾರೆಯರಾದ ರಂಗಾಯಣ ರಘು, ಸುಧಾ ಬೆಳವಾಡಿ, ಸೇರಿದಂತೆ ಹಲವಾರು ತಾರೆಯರೂ ಪಾತ್ರಗಳಿಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ವಿಶೇಷವಾಗಿ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಹೀರೋ, ಹೀರೋಯಿನ್ ರೋಲ್​ಗಳಿಗೆ ದನಿಯಾಗಿದ್ದಾರೆ.

ಈ ಮೂಲಕ ಮದುವೆ ನಂತರ ಈ ತಾರಾಜೋಡಿ ಮತ್ತೆ ಒಂದಾಗಿದ್ದಾರೆ. ಇನ್ನು ಪುನೀತ್ ಕೂಡ ಒಂದು ಹಾಡನ್ನ ಹಾಡಿದ್ದಾರೆ. ಈಗಾಗಲೇ ಚಿತ್ರದ ಪೊಸ್ಟರ್​​ಗಳು ಭರ್ಜರಿ ಕುತೂಹಲ ಮೂಡಿಸಿದ್ದು ಪಂಚ ಭಾಷೆಗಳಲ್ಲಿ ಗಿರ್ಮಿಟ್​ ತೆರೆ ಕಾಣಲಿದೆ

Copyright ©2026 . All Rights Reserved. privacy | terms Whatsapp: 9538193653 Email: hello@flixoye.com