ತಮ್ಮ‌ ಊರಿನಲ್ಲಿ‌ ಸ್ಟುಡಿಯೋ ‌ತೆರೆದ ಸಂಗೀತ ನಿರ್ದೇಶಕ ರವಿ ಬಸ್ರೂರ್

Published on

375 Views

ಸಿನಿಮಾ ನಿರ್ದೇಶನ, ಸಂಗೀತ‌ ಸಂಯೋಜನೆ ಮಾಡಿ ಸೈ ಎನಿಸಿಕೊಂಡಿರುವ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ತಮ್ಮ ಹುಟ್ಟೂರಿನಲ್ಲಿ ಹೊಸ ಮ್ಯೂಸಿಕ್ ಹೌಸ್ ನ್ನು ಮಾಡಿದ್ದಾರೆ. ಇದು‌‌ ತಮ್ಮ ಊರಿನ ಸಿನಿ ಆಸಕ್ತರಿಗೆ ಸಿನಿ ಕಲಾವಿದರಿಗೆಂದೇ ಹೊಸ ಸ್ಟುಡಿಯೊಂದನ್ನು ನಿರ್ಮಿಸಿದ್ದಾರೆ. ಆ ಸ್ಟುಡಿಯೋ ಗೆ ‘ರವಿ‌ ಬಸ್ರೂರ್ ಮ್ಯೂಸಿಕ್‌ ಆ್ಯಂಡ್ ಮೂವೀಸ್’ ಎಂದು‌ ಹೆಸರು‌ ಇಟ್ಟಿದ್ದಾರೆ.

https://fb.watch/2jnYwdgX76/

ಆ ಸ್ಟುಡಿಯೋದಲ್ಲಿ ಒಂದು‌ ಚಿತ್ರಕ್ಕೆ ಬೇಕಾಗಿರುವ ವಿಡಿಯೋ‌ ಶೂಟ್ ,ಡ್ರೋನ್ ಶೂಟ್, ವಿಡಿಯೋ ಕಾನ್ಸೆಪ್ಟ್ ಶೂಟ್, ವಿಡಿಯೋ ಎಡಿಟಿಂಗ್, ಕ್ಯಾಪ್ಷನ್ ರೈಟಿಂಗ್, ವಾಯ್ಸ್ ಓವರ್‌ ಎಲ್ಲ ಸವಲತ್ತುಗಳು ಈ ಸ್ಟುಡಿಯೋದಲ್ಲಿ ಇದೆಯಂತೆ. ಈ‌ ಹಿಂದೆ ರವಿ ಬಸ್ರೂರ್ ಸಾಮಾಜಿಕ‌ ಜಾಲತಾಣದಲ್ಲಿ ” ನಾ‌ ಕಂಡ ಚಿಕ್ಕ‌ ಕನಸು, ಹುಟ್ಟೂರಿನಲ್ಲಿ ನನಸಾಗುವ ಸಮಯ. ಕನಸು‌ ಕಟ್ಟಿಕೊಳ್ಳಲು ಊರು ಬಿಡಬೇಕಾಗಿಲ್ಲ‌” ಎಂದು‌ ಬರೆದುಕೊಂಡಿದ್ದರು. ಲಾಕ್ ಡೌನ್ ಸಮಯದಲ್ಲಿ ತಮ್ಮ ಊರಿನಲ್ಲಿ ‌ಸುಮ್ಮನೆ‌ಯಿರದೇ‌ ಸದ್ದಿಲ್ಲದೆ ಸ್ಟುಡಿಯೋವನ್ನು ಪ್ರಾರಂಭಿಸಿದ ರವಿ ಬಸ್ರೂರ್ ರವರ ಈ ಕೆಲಸಕ್ಕೆ ಊರಿನ‌ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು‌ ತಮ್ಮ ಊರಿನ ಹೊಸ ಪ್ರತಿಭೆಗಳಿಗೆ‌ ಆಸಕ್ತರಿಗೆ‌ ಒಂದೊಳ್ಳೆ‌ ಅವಕಾಶವಾಗಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com