ಕೆಜಿಎಫ್ 2 ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ರವೀನಾ ಟಂಡನ್

Published on

554 Views

ಭಾರೀ ನಿರೀಕ್ಷೆ ಹುಟ್ಟಿಸಿರುವ ‘ಕೆಜಿಎಫ್ 2’ ಟೀಸರ್ ಗೆ ಸಾಕಷ್ಟು ಅಭಿಮಾನಿಗಳು ಕಾಯುತ್ತಿದ್ದು, ‘ಕೆಜಿಎಫ್2’ ಚಿತ್ರತಂಡ ಕೆಲವು ಪೋಟೋ ಗಳನ್ನು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ವಾಗುವಂತೆ ಮಾಡಿದೆ. ‘ಕೆಜಿಎಫ್ 2’ ಸಿನಿಮಾದಲ್ಲಿ ರವೀನಾ ಟಂಡನ್, ಸಂಜಯ್ ದತ್ತ ಅಭಿನಯಿಸುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ. ರಮಿಕಾ ಸೇನ್ ಎಂಬ ರಾಜಕಾರಣಿ ಪಾತ್ರದಲ್ಲಿ ನಟಿಸುತ್ತಿರುವ 90 ದಶಕದ ಬಾಲಿವುಡ್ ನಟಿ ರವೀನಾ ಟಂಡನ್ ಚಿತ್ರದಲ್ಲಿ ತಮ್ಮ ಪಾತ್ರ ಬಗ್ಗೆ ಅಭಿಪ್ರಾಯ ‌ಹಂಚಿಕೊಂಡಿದ್ದಾರೆ.

ಚಿತ್ರದಲ್ಲಿ ನನ್ನದು ನೆಗೆಟಿವ್ ಶೇಡ್ ಇರುವಂತಹ ಪಾತ್ರ, ಚಿತ್ರದಲ್ಲಿ ನನ್ನ ಪಾತ್ರ ಯಾವ ರೀತಿ‌ ಸಾಗುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಅಂತಹ ಭಿನ್ನವಾದ ಪಾತ್ರವಾಗಿದ್ದು, ರಮಿಕಾ ಸೇನ್ ಪಾತ್ರಕ್ಕೆ ತೂಕವಿದೆ. ಕೆಜಿಎಫ್ ಚಾಪ್ಟರ್ 1 ಸಿನಿಮಾ ನೋಡುವ ಮೊದಲೇ ಡೈರೆಕ್ಟರ್ ಪ್ರಶಾಂತ್ ನೀಲ್ ನನಗೆ ಕಥೆ ಹೇಳಿದ್ದರು. ಮಾತುಕತೆಯೂ ನಡೆಯುತ್ತಿತ್ತು.‌ ನನಗೆ ಸ್ಟೋರಿ ಲೈನ್ ತುಂಬ ಇಷ್ಟವಾಗಿತ್ತು.

‘ಕೆಜಿಎಫ್’ ಸಿನಿಮಾ ನೋಡಿದ ಮೇಲೆ ಇದೊಂದು ಹೊಸ ಬಗೆಯ ಸಿನಿಮಾ ಅನಿಸಿತು.‌ ‘ಕೆಜಿಎಫ್ 2’ ನಲ್ಲಿ ನನ್ನ ಪಾತ್ರದ ಬಗ್ಗೆ ಹೇಳಿದಾಗ ನಾನು ಇಲ್ಲ ಎನ್ನದೇ ಒಪ್ಪಿಕೊಂಡೆ ಎನ್ನುತ್ತಾರೆ ರವೀನಾ ಟಂಡನ್. ವಿಜಯ್ ಕಿರಗಂದೂರುರವರ ನಿರ್ಮಾಣದಲ್ಲಿ ಹೊಂಬಾಳೆ ಫಿಲ್ಮ್ಸ್‌ ಮೂಲಕ ಮೂಡಿಬರುತ್ತಿರುವ ‘ಕೆಜಿಎಫ್ 2’ ಕೊರೋನಾ ಕಾರಣದಿಂದಾಗಿ ನಿಧಾನಗತಿಯಲ್ಲಿ ಸಾಗಿದ ಚಿತ್ರೀಕರಣ ಈಗ ಮುಕ್ತಾಯ ಹಂತಕ್ಕೆ ಬಂದಿದೆ. ಯಶ್ ರವರ ಹುಟ್ಟುಹಬ್ಬದಂದು ಚಿತ್ರದ ಟೀಸರ್ ಬಿಡುಗಡೆಯಾಗಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com