ಅಲ್ಲೂ ಅರ್ಜುನ್ ಗೆ ನಾಯಕಿಯಾಗಿ ರಶ್ಮಿಕಾ…!!!

Published on

346 Views

‘ಗೀತಾ ಗೋವಿಂದ’ ಚಿತ್ರದ ನಂತರ ಅದೇ ಬ್ಯಾನರ್ ನಲ್ಲಿ ತ್ರಿವಿಕ್ರಮ್ ನಿರ್ದೇಶನ ಮಾಡುತ್ತಿರುವ ಅಲ್ಲು ಅರ್ಜುನ್ ನಾಯಕನಾಗಿ ನಟಿಸುತ್ತಿರುವ ಚಿತ್ರದಲ್ಲಿ ಅಲ್ಲೂ ಅರ್ಜುನ್ ಅವರ ಚಿತ್ರಕ್ಕೆ ನಾಯಕಿಯ ಹುಡುಕಾಟದಲ್ಲಿ ಇರುವಾಗ ಮೊದಲು ಸಾಯಿ ಪಲ್ಲವಿ ಹೆಸರು‌ ಕೇಳಿ ಬಂದಿತ್ತು. ಈಗ ರಶ್ಮಿಕಾ ಮಂದಣ್ಣ ಆ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಇದೆ. ರಶ್ಮಿಕಾ ಮಂದಣ್ಣ ದೊಡ್ಡ ದೊಡ್ಡ ಸ್ಟಾರ್ ಗಳ ಜೊತೆ ನಟಿಸುತ್ತಿದ್ದಾರೆ. ಸಾಕಷ್ಟು ಸ್ಟಾರ್ ನಟರ ಜೊತೆ ನಟಿಸುವ ಅವಕಾಶವನ್ನು ಪಡೆದು ಕೊಂಡು ಫುಲ್ ಬಿಜಿಯಾಗಿದ್ದಾರೆ. ಈಗ ಸದ್ಯ ‘ಗೀತಾ ಗೋವಿಂದಂ’ ಚಿತ್ರದ ನಂತರ ವಿಜಯ್ ದೇವರಕೊಂಡ ಜೊತೆ ‘ಡಿಯರ್ ಕಾಮ್ರೇಡ್ ‘ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಶ್ಮಿಕಾ ಈಗಾಗಲೇ ತೆಲುಗಿನಲ್ಲಿ ನಟಿಸಿದ ಎಲ್ಲ ಚಿತ್ರಗಳು ಹಿಟ್ ಆಗಿವೆ. ರಶ್ಮಿಕಾ ಅಲ್ಲೂ ಅರ್ಜುನ್ ಜೊತೆ‌ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡರೆ ರಶ್ಮಿಕಾಗೆ ಇದೊಂದು ದೊಡ್ಡ ಬ್ರೇಕ್ ಸಿಗಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com