ಅಕ್ಷಿತ್ ಶಶಿಕುಮಾರ್ ಗೆ ಶುಭಕೋರಿದ ರಶ್ಮಿಕಾ ಮಂದಣ್ಣ

Published on

467 Views

ನಟ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ನಟನೆಯ ಹೊಸ ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ಅದು ತೆಲುಗು ತಮಿಳಿನಲ್ಲಿಯೂ ಸಿನಿಮಾ ಬಿಡುಗಡೆಯಾಗಲಿದೆ. ಅಕ್ಷಿತ್ ಶಶಿಕುಮಾರ್ ನಟನೆಯ ‘ಸೀತಾಯಣ’ ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು, ನವೆಂಬರ್ 25 ರಂದು ನಟಿ ರಶ್ಮಿಕಾ ಮಂದಣ್ಣ ‘ಸೀತಾಯಣ’ ಸಿನಿಮಾದ ಕನ್ನಡದಲ್ಲಿ ಕವಿರಾಜ್ ಬರೆದಿರುವ ‘ಸಂಜೆ ಗಗನ’ ಸೇರಿದಂತೆ ತೆಲುಗು ತಮಿಳಿನ ಹಾಡುಗಳನ್ನು ಒಟ್ಟಿಗೆ ತಮ್ಮ ಟ್ವಿಟರ್ ಖಾತೆಯಿಂದ ಬಿಡುಗಡೆ ಮಾಡಿದ್ದಾರೆ.

“ಈ ಹಾಡು ನನಗೆ ಬಹಳ ಇಷ್ಟವಾಯಿತು” ಅಕ್ಷಿತ್ ಶಶಿಕುಮಾರ್ ಹಾಗೂ ‘ಸೀತಾಯಣ’ ಸಿನಿಮಾ ತಂಡಕ್ಕೂ ಶುಭಕೋರಿದ್ದಾರೆ. ತೆಲುಗಿನ ನಟ ರವಿತೇಜ್ ಟೀಸರ್ ಬಿಡುಗಡೆ ಮಾಡಿ ಶುಭಕೋರಿದ್ದರು. ಈ‌ ಹಿಂದೆ ನಟ ಶಿವರಾಜ್ ಕುಮಾರ್ ಕೂಡ ಶುಭಕೋರಿದ್ದರು. ಇನ್ನು ಕೆಲವೇ ದಿನಗಳಲ್ಲಿ ಮೂರು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಗೊಳ್ಳಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com