ರಾಜಕೀಯಕ್ಕೆ ರಶ್ಮಿಕಾ ಮಂದಣ್ಣ ಎಂಟ್ರಿ???
ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿ ಇರುತ್ತಾರೆ. ಇಂದು ರಶ್ಮಿಕಾ ಇನ್ಸ್ಟಾಗ್ರಾಮ್ ನಲ್ಲಿ ಮಾಡಿರುವ ಒಂದು ಪೋಸ್ಟ್ ವಿವಾದವನ್ನು ಸೃಷ್ಟಿಸಿದೆ.
ಅದೇನು ವಿವಾದ? ಇಲ್ಲಿದೆ ವಿವರ.
ರಶ್ಮಿಕಾ ಮಂದಣ್ಣ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ BJP ಪರ ಪ್ರಚಾರ ಮಾಡಿದ್ದಾರೆ. PM Modi ಸರ್ಕಾರದಲ್ಲಿ ಆಗಿರುವ ರಸ್ತೆ ಹಾಗೂ ಮೂಲಭೂತ ಸೌಕರ್ಯದ ಬಗ್ಗೆ ಹೊಗಳಿದ್ದಾರೆ.
ಇತ್ತೀಚೆಗೆ ನಿರ್ಮಾಣವಾಗಿರುವ ಮುಂಬೈನ ಅಟಲ್ ಸೇತು ಸೇತುವೆಯಿಂದ 2 ಗಂಟೆಯ ಪ್ರಯಾಣವನ್ನು 20 ನಿಮಿಷಗಳಲ್ಲಿ ಮಾಡಬಹುದು ಎಂದು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ದೇಶದೆಲ್ಲೆಡೆ ಚುನಾವಣೆ ನಡೆಯುತ್ತಿರುವುದರಿಂದ ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾ ಹಂಚಿಕೊಂಡಿರುವ ಪೋಸ್ಟ್ ಬಹಳ ವಿವಾದಕ್ಕೆ ಕಾರಣವಾಗಿದೆ. ಈ ವಿಡಿಯೋದಲ್ಲಿ ಮುಂಬೈನ ಅಟಲ್ ಸೇತು ಸೇತುವೆಯಲ್ಲಿ ಸಂಚರಿಸಿದ ಅನುಭವವನ್ನು ರಶ್ಮಿಕಾ ಹಂಚಿಕೊಂಡಿದ್ದಾರೆ.
ಪ್ರಧಾನಿ ಮೋದಿ ಸರ್ಕಾರ ಮತ್ತು ಬಿಜೆಪಿಯನ್ನು ಹೊಗಳಿದ ರಶ್ಮಿಕಾ ಮಂದಣ್ಣ, ಬಿಜೆಪಿಗೆ ಪೇಯ್ಡ್ ಪ್ರಚಾರ ಮಾಡುತ್ತಿದ್ದಾರೆ ಎಂದು ನೆಟಿಜನ್ಸ್ ಗಳು ರಶ್ಮಿಕಾ ಅವರನ್ನು ಟ್ರೋಲ್ ಮಾಡಿದ್ದಾರೆ.
ಚಲನಚಿತ್ರಗಳ ಕುರಿತಾದ ಹೆಚ್ಚಿನ ಅಪ್’ಡೇಟ್ಸ್’ಗಳಿಗಾಗಿ flixoye.com ಫಾಲೋ ಮಾಡಿ.