‘ಪೊಗರು’ ಚಿತ್ರದಲ್ಲಿ ಕಾಲೇಜು ಶಿಕ್ಷಕಿಯಾದ ರಶ್ಮಿಕಾ…!!!

Published on

499 Views

‘ಅದ್ದೂರಿ’, ‘ಬಹದ್ದೂರ್’, ‘ಭರ್ಜರಿ’ ಹಿಟ್ ಚಿತ್ರಗಳನ್ನು ಕೊಟ್ಟ ಧ್ರುವ ಸರ್ಜಾರವರ ‘ಪೊಗರು’ ಚಿತ್ರ ಕೂಡ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಈ‌ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಅಭಿನಯಿಸಿದ್ದಾರೆ. ‘ಕಿರಿಕ್ ಪಾರ್ಟಿ’ ಸಿನಿಮಾದಲ್ಲಿ ಕಾಲೇಜು ಉಪನ್ಯಾಸಕಿಯಾಗಿ‌ ನಟಿಸಿ, ಎಲ್ಲರ ನಿದ್ದೆಗೆಡಿಸಿದ ರಶ್ಮಿಕಾ ಮಂದಣ್ಣ ‘ ಪೊಗರು’ ಚಿತ್ರದಲ್ಲೂ ಶಿಕ್ಷಕಿಯಾಗಿ ಎಲ್ಲರ ಗಮನ ಸೆಳೆಯಲಿದ್ದಾರೆ. ‘ಪೊಗರು’ ಚಿತ್ರದಲ್ಲಿ ಉಪನ್ಯಾಸಕಿಯಾಗಿ ಅಭಿನಯಿಸುತ್ತಿರುವ ರಶ್ಮಿಕಾ ಮಂದಣ್ಣ ಧ್ರುವ ಸರ್ಜಾಗೆ ಜೋಡಿಯಾಗಿದ್ದಾರೆ.

ಧ್ರುವ ಸರ್ಜಾ ನಿಜ‌ ಜೀವನದಲ್ಲಿ ಮದುವೆಯಾಗುತ್ತಿರುವ ಪ್ರೇರಣಾ ಕೂಡ ವೃತ್ತಿಯಲ್ಲಿ ಉಪನ್ಯಾಸಕಿಯಾಗಿದ್ದಾರೆ. ‘ಪೊಗರು’ ಚಿತ್ರದಲ್ಲಿ ಧ್ರುವ ಸರ್ಜಾ ಚಿಕ್ಕ ಹುಡುಗನಾಗಿ ಮತ್ತೊಂದರಲ್ಲಿ ಗಡ್ಡ ಬಿಟ್ಟು ರಗಡ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಂದ ಕಿಶೋರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಬಿ.ಕೆ.ಗಂಗಾಧರ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com