‘ರಾಣಿ ಜೇನು’ ರೊಮ್ಯಾಂಟಿಕ್ ಮ್ಯೂಸಿಕ್ ಆಲ್ಬಂ ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆ..

Published on

816 Views

ಸಂಗೀತ ಕ್ಷೇತ್ರದಲ್ಲಿ ತನ್ನದೇ ಹೆಸರು ಮಾಡಿರುವ ಜಂಕಾರ್ ಮ್ಯೂಸಿಕ್ಸಂಸ್ಥೆ ಈವರೆಗೂ ಸಾಕಷ್ಟು ವಿಡಿಯೋ ಆಲ್ಬಂ ಬಿಡುಗಡೆ ಮಾಡಿದೆ.ಈ ಬಾರಿ ಸೋನಿ ಆಚಾರ್ಯ ಅವರ ಸಾರಥ್ಯದಲ್ಲಿ ‘ರಾಣಿ ಜೇನು’ ಎಂಬ ರೊಮ್ಯಾಂಟಿಕ್ ವಿಡಿಯೋ
ಜಂಕಾರ್ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ.

ಸೋನಿ‌‌ ಆಚಾರ್ಯ ಮತ್ತು ಪೂಜಾ ನಾಣಯ್ಯ ನಟಿಸಿರುವ ಈ ಸುಂದರ ಆಲ್ಬಂನ ಚಿತ್ರೀಕರಣ ಶ್ರೀರಂಗಪಟ್ಟಣ, ಕರಿಫಟ್ಟ ಸುತ್ತಮುತ್ತಲಿನ ಸುಂದರ ಪರಿಸರದಲ್ಲಿ ಚಿತ್ರೀಕರಣವಾಗಿದೆ.
ಸೋನಿ ಆಚಾರ್ಯ ಸಾಹಿತ್ಯ ಬರೆದು, ಸಂಗೀತ ನೀಡಿ, ನಟಿಸಿರುವ ಈ ಆಲ್ಬಂ ಗೆ ರಾಮ್ ಸಂತೋಷ್ ಛಾಯಾಗ್ರಹಣ, ಶಶಾಂಕ್ ಮುರಳೀಧರನ್ ಸಂಕಲನ ಹಾಗೂ ಶ್ರೀಧರ್ ಶ್ರೀ ನೃತ್ಯ ನಿರ್ದೇಶನವಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com