ಈ ವಾರದ ಸದಾ ನಿಮ್ಮೊಂದಿಗೆಯಲ್ಲಿ “ರಂಗಾಯಣ ರಘು”

Published on

524 Views

ಕಳೆದ ಸಂಚಿಕೆಯಲ್ಲಿ ಆಶಿಕ ರಂಗನಾಥ್ ಅವರು ಪರಶುರಾಮ್ ಅವರಿಗೋಸ್ಕರ ಸ್ವೀಟ್ ಕಾರ್ನ್ ಸೇಲ್ ಮಾಡಿ ಸಹಾಯ ಮಾಡಿದ್ದರು.

ಈ ವಾರದ ಸಂಚಿಕೆಯಲ್ಲಿ ಹೆಸರಾಂತ ಹಾಸ್ಯ ನಟ ರಂಗಾಯಣ ರಘು ಭಾಗವಹಿಸಿದ್ದಾರೆ. ಮೈತ್ರಿ ಎಂಬ ಮುಗ್ಧ ಹೆಣ್ಣು ಮಗಳಿಗಾಗಿ ಸದಾ ನಿಮ್ಮೊಂದಿಗೆಯಲ್ಲ್ಲಿ ಭಾಗವಹಿಸ್ತಿದ್ದಾರೆ. ತಂದೆ ಕುಡಿತದ ದಾಸನಾಗಿ ಮನೆ ಬಿಟ್ಟು ಹೋಗಿದ್ದಾನೆ. ತಾಯಿ ಶುಂಠಿ ಹೊಲದಲ್ಲಿ ದಿನಗೂಲಿ ಕೆಲಸ ಮಾಡುತ್ತಾ ಮೂಳೆ ನೋವಿನಿಂದ ಬಳಲುತ್ತಿದ್ದಾರೆ.

ಈ ಕಡೆ ಮೈತ್ರಿಗೆ ಡಿಗ್ರಿ ಓದಲು ಆಗುತ್ತಿಲ್ಲ. ತಮ್ಮ ಚಿಕಿತ್ಸೆ ಹಾಗೂ ಮಗಳ ವಿದ್ಯಾಭ್ಯಾಸಕ್ಕಾಗಿ ಈಗಾಗಲೇ 1,50,000 ಸಾಲ ಮಾಡಿದ್ದಾರೆ. ಇನ್ನು ಕೇವಲ 6 ತಿಂಗಳ ಓದಿಗಾಗಿ ಸಹಾಯ ಮಾಡಿ ಅಂತ ಮೈತ್ರಿಯ ಬೆಡಿಕೆ.

ಈ ಸಮಸ್ಯೆಗಾಗಿ ರಂಗಾಯಣ ರಘು ಅವರು ವಿಜಯನಗರದಲ್ಲಿ ತರಕಾರಿಯನ್ನು ಮಾರಿದ್ದಾರೆ. ಹಾಗಾದರೆ ರಂಗಾಯಣ ರಘು ಅವರು ಸಂಗ್ರಹಿಸಿದ ಹಣವೇಷ್ಟು? ಎಂಬುದು ಈ ವಾರದ ಸಂಚಿಕೆಯಲ್ಲಿ ತಿಳಿಯುತ್ತದೆ.
.
“ಸದಾ ನಿಮ್ಮೊಂದಿಗೆ” ಇದೇ ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com