“ರಂಗನಾಯಕಿ”ಯ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ

Published on

312 Views

ದಯಾಳ್ ಪದ್ಮನಾಭನ್ ಅವರು ನಿರ್ದೇಶನ ಮಾಡಲಿರುವ ಮುಂದಿನ
ರಂಗನಾಯಕಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಇಂದು ಬಿಡುಗಡೆಯಾಗಿದೆ.
ಶ್ರೀನಿವಾಸ ಕಲ್ಯಾಣ ಹಾಗೂ ಬೀರ್ ಬಲ್ ಖ್ಯಾತಿಯ ನಿರ್ದೇಶಕ ಹಾಗೂ ನಟ ಶ್ರೀನಿ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದು ಇವರಿಗೆ ಜೋಡಿಯಾಗಿ ಅದಿತಿ ಪ್ರಭುದೇವ್ ನಟಿಸಲಿದ್ದಾರೆ.ಇನ್ನು ಈ ಚಿತ್ರವನ್ನು YES VEE ಪ್ರೋಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಎಸ್.ವಿ.ನಾರಯಣ್ ಅವರು ನಿರ್ಮಾಣ ಮಾಡಿತ್ತಿದ್ದು, ಅವಿನಾಶ್‌.ಯು.ಶೆಟ್ಟಿ ಅವರು ಸಹ ನಿರ್ಮಾಪಕರಾಗಿದ್ದಾರೆ. ನಟ ನವೀನ್ ಕೃಷ್ಣ ಅವರ ಸಂಭಾಷಣೆ ಮಣಿಕಾಂತ್ ಕದ್ರಿ ಅವರ ಸಂಗೀತ,ಸುನೀಶ್ ಕಶ್ಯಪ್ ಅವರ
ಸಂಕಲನ, ಬಿ.ರಾಕೇಶ್ ಅವರ ಛಾಯಗ್ರಹಣ ಈ ಚಿತ್ರಕ್ಕಿರಲಿದೆ. ಇದೊಂದು ಹೆಣ್ಣಿನ ವಿರುದ್ದ ನಡೆಯುವ ಶೋಷಣೆಯ ಕುರಿತ ಚಿತ್ರವಾಗಿದ್ದು ದಯಾಳ್ ಪದ್ಮನಾಭನ್ ಅವರೇ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಲಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com