‘ಸುಂದರಿ’ ಗೆ ನಿರ್ಮಾಪಕರಾದ ರಮೇಶ್ ಅರವಿಂದ್
ಈ ಹಿಂದೆ ‘ನಂದಿನಿ’ ಧಾರಾವಾಹಿ ನಿರ್ಮಾಣ ಮಾಡಿದ ನಟ ರಮೇಶ್ ಅರವಿಂದ್ ಈಗ ಮತ್ತೊಂದು ಧಾರಾವಾಹಿ ಮಾಡಲು ಮುಂದಾಗಿದ್ದಾರೆ. ಉದಯ ಟಿವಿಯಲ್ಲಿ ‘ಸುಂದರಿ’ ಧಾರಾವಾಹಿ ಪ್ರಸಾರವಾಗುತ್ತಿದ್ದು ಅದಕ್ಕೆ ರಮೇಶ್ ಅರವಿಂದ್ ಬಂಡವಾಳ ಹೂಡಲಿದ್ದಾರೆ ಎಂದು ಹೇಳಲಾಗುತ್ತಿದೆ.
‘ಗಿರಿಜಾ ಕಲ್ಯಾಣ’, ‘ಅನುರೂಪ’, ‘ಸರ್ವಮಂಗಳ ಮಾಂಗಲ್ಯೇ’ ಧಾರಾವಾಹಿ ಮೂಲಕ ಗಮನ ಸೆಳೆದಿದ್ದ ನಟಿ ಐಶ್ವರ್ಯ ‘ಸುಂದರಿ’ಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಆದರೆ ಪಾತ್ರ, ಕಥೆ ಮಾತ್ರ ಇನ್ನು ರಿವೀಲ್ ಆಗಿಲ್ಲ.
‘ನಂದಿನಿ’ ಧಾರಾವಾಹಿ ನಿರ್ಮಾಣ ಮಾಡಿದ್ದ ರಮೇಶ್ ಅರವಿಂದ್ ಆ ಧಾರಾವಾಹಿ ಯಲ್ಲೂ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 1000 ಸಂಚಿಕೆಯನ್ನು ಪೂರೈಸುತ್ತಿದ್ದ ‘ನಂದಿನಿ’ ಧಾರಾವಾಹಿ ಆಮೇಲೆ ಲಾಕ್ ಡೌನ್ ನಿಂದ ನಿಂತುಹೋಯಿತು. ‘ನಂದಿನಿ’ ನಾಲ್ಕು ಭಾಷೆಯಲ್ಲಿ ಪ್ರಸಾರವಾಗುತ್ತಿತ್ತು. ಇನ್ಮುಂದೆ ‘ಸುಂದರಿ’ ಪ್ರೇಕ್ಷಕರ ಮುಂದೆ ಬರಲಿದೆ.