ರಾಮಧಾನ್ಯ’ ಇಂದಿನಿಂದ ರಾಜ್ಯಾದ್ಯಂತ ತೆರೆಗೆ
‘ರಾಮಧಾನ್ಯ’ ಇಂದಿನಿಂದ ರಾಜ್ಯಾದ್ಯಂತ ತೆರೆಗೆ
ಕನಕದಾಸರ ರಚನೆಯ ‘ರಾಮಧಾನ್ಯ’ ಚರಿತೆಯ ಚಿತ್ರ. ಕನ್ನಡದಲ್ಲಿ ರೂಪಾಂತರ ಸಂಸ್ಥೆ ಇದನ್ನು ೭೫ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ ನಾಟಕ ಈಗ ಸಿನಿಮಾ ಆಗಿ ಬರುತ್ತಿದೆ ಚಿತ್ರ ಇಂದು ತೆರೆಗೆ ರಾಜ್ಯಾದ್ಯಂತ ತೆರೆಕಾಣುತ್ತಿದೆ.
ದಶಮುಖ ವೆಂಚರ್ಸ್ ಅಡಿಯಲ್ಲಿ ೧೦ ನಿರ್ಮಾಪಕರುಗಳು ವೆಂಕಟೇಶ್ ಸವನುರ್, ಜಂಬಣ್ಣ ಬಿ ಹವಳದ, ಸಂತೋಷ್ ಅಂಗಡಿ, ಅನಿಲಕುಮರ ಪವಳಿ, ಆರ್ ಗೋವಿಂದರಾಜು, ಮಲ್ಲೇಶ್ ರಾಜ ಗಂಧರ್ವ, ಎಸ್ ಎನ್ ರಾಜಶೇಖರ್ ಬೂದಲ್ ಹಾಗೂ ಮಹಂತೆಶ್ ಗ ತಾಂವಶಿ ಹಣ ಹೂಡಿದ್ದಾರೆ.
ಜಾಗತಿಕ ಸಿನಿಮಾ ಎಂದು ಹೇಳಲಾಗುವ ‘ರಾಮಧಾನ್ಯ’ ಕತೆಯಲ್ಲೊಂದು ಕಥೆ ಮೂರು ಕಾಲ ಘಟ್ಟದಲ್ಲಿ ನಿರ್ದೇಶಕ ಟಿ ಎನ್ ನಾಗೇಶ್ ಕಟ್ಟಿ ಕೊಟ್ಟಿದ್ದಾರೆ. ಶ್ರೀ ರಾಮನ, ಕನಕದಾಸರು ಹಾಗೂ ಇಂದಿನಿ ಪೀಳಿಗೆಯ ಪಾತ್ರವನ್ನು ಯಶಸ್ ಸೂರ್ಯ ಹಾಗೂ ನಿಮಿಕ ರತ್ನಾಕರ್ ನಿರ್ವಹಿಸಿದ್ದಾರೆ.
ದೇಸೀ ಮೋಹನ್ ಅವರ ಸಂಗೀತ, ಬೆನಕ ರಾಜು ಛಾಯಾಗ್ರಹಣ, ಸಂಭಾಷಣೆ ಬಸವರಾಜ್ ಸೂಳೆರಿಪಾಳ್ಯ, ವಾದಿರಾಜ್ ಅವರ ನಿರ್ವಹಣೆ ಚಿತ್ರಕ್ಕೆ ಒದಗಿಸಿದ್ದಾರೆ.