ರಾಮನ ಭಕ್ತರಿಗೆ ರಸದೌತಣ ಉಣಬಡಿಸಿದ ರಾಮ್ ದರ್ಬಾರ್ ಹಾಡು

Published on

368 Views

ಇತ್ತೀಚೆಗೆ ಕನ್ನಡ ಸಂಗೀತ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಹಾಡುಗಳನ್ನು ಮಾಡುವ ಪ್ರತಿಭಾವಂತ ಯುವಕರು ಮುಂದೆಬರುತಿದ್ದಾರೆ. ಅಂತಹ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಅಭಿಲಾಷೆಯಿಂದ ಸಾಕಷ್ಟು ಪ್ರಯೋಗಗಳ ಮೂಲಕ ಸದ್ದು ಮಾಡ್ತಿರೋ ಪ್ರತಿಭೆ ಹೇಮಂತ್ ಜೋಯಿಸ್.

ನಶೆ, ಎಣ್ಣೆ, ಗಾಂಜಾ ಹಾಡುಗಳಿಗೆ ತಲೆದೂಗುತ್ತಿರೋ ಈ ಕಾಲದಲ್ಲಿ ರಾಮನ ಬಗ್ಗೆ ಈಗಿನ ಕಾಲಕ್ಕೆ ತಕ್ಕಂತೆ ಹಾಡೊಂದನ್ನು ರೆಡಿ ಮಾಡಿ ಎಲ್ಲಾ ಕಡೆಯಿಂದ ಶಬ್ಬಾಶ್ ಗಿರಿ ಪಡೆದುಕೊಳ್ಳುತ್ತಿದ್ದಾರೆ.. ರಾಮ್ ದರ್ಬಾರ್ ಎಂಬ ಹಾಡಿನ ಮೂಲಕ ರಾಮ ಭಕ್ತರಿಗೆ ರಸದೌತಣ ಉಣಬಡಿಸಿದ್ದಾರೆ. ಹೇಮಂತ್ ಜೋಯಿಸ್ ಅವರ ಈ ಪ್ರಯತ್ನಕ್ಕೆ ಹಲವಾರು ಮಂದಿ ಕೈ ಜೋಡಿಸಿದ್ದು, ಚೇತನ್ ನಾಯ್ಕ್ ಮತ್ತು ಅಂಜನಾ ಪದ್ಮನಾಭನ್ ಧ್ವನಿಯಾಗಿದ್ದಾರೆ. ಹಾಗೇನೆ ಈ ರಾಮ್ ದರ್ಬಾರ್ ನಲ್ಲಿ ರಾಮನ ಬಗ್ಗೆ ತನ್ನ ಸಾಹಿತ್ಯದ ಮೂಲಕ ವರ್ಣಿಸಿ ಹೊಗಳಿರೋದು ಪ್ರತಿಭಾನ್ವಿತ ಪ್ರಮೋದ್ ಮರವಂತೆ. ಹಾಗೇನೆ ಈ ಹಾಡಿನ ನಿರ್ದೇಶನ ಮಾಡಿರೋದು ರಕ್ಷಿತ್ ತೀರ್ಥಹಳ್ಳಿ.

ನಿನ್ನೆ ಬಿಡುಗಡೆಯಾದ ಈ ರಾಮ್ ದರ್ಬಾರ್ ಹಾಡಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ನಟ ಅಜಯ್ ರಾವ್, ಪ್ರಶಾಂತ್ ಸಂಬರಗಿ ಇನ್ನೂ ಅನೇಕರು ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹಾಡಿಗೆ ಜೈ ಅಂದಿದ್ದಾರೆ.
ಪುನೀತ್ ರಾಜ್ ಕುಮಾರ್, ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ , ಈಶ್ವರಪ್ಪನವರು, ಚಕ್ರವರ್ತಿ ಸೂಲಿಬೆಲೆ, ರಘು ದೀಕ್ಷಿತ್, ನೆನಪಿರಲಿ ಪ್ರೇಮ್, ಮಾಸ್ಟರ್ ಆನಂದ್ ಸೇರಿದಂತೆ ಹಲವಾರು ಮಂದಿ ಹಾಡು ಕೇಳಿ ಮೆಚ್ಚಿರೋದು ವಿಶೇಷ.

ಈ ಹಾಡು ಹೇಮಂತ್ ಜೋಯಿಸ್ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾ ದಲ್ಲಿ ಸಾಕಷ್ಟು ಸದ್ದು ಮಾಡ್ತಿದೆ. ಇಡೀ ತಂಡಕ್ಕೆ ನಮ್ ಕಡೆಯಿಂದ ಶುಭ ಹಾರೈಕೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com