ಮತ್ತೆ ಒಂದಾಗಲಿರುವ ರಕ್ಷಿತ್ ಮತ್ತು ರಶ್ಮಿಕಾ..!!!

Published on

692 Views

ಕನ್ನಡ ಚಿತ್ರರಂಗದಲ್ಲಿ “ಕಿರಿಕ್” ಜೋಡಿ ಎಂದೇ ಖ್ಯಾತಿ ಗಳಿಸಿದ್ದ ರಕ್ಷಿತ್ ಹಾಗೂ ರಶ್ಮಿಕಾ ಮಂದಣ್ಣ ಸ್ಯಾಂಡಲ್ವುಡ್ ನ ಅತ್ಯುತ್ತಮ ಜೋಡಿಗಳಲ್ಲಿ ಒಂದೆಂದರೂ ತಪ್ಪಿಲ್ಲ. ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದ “ಕಿರಿಕ್ ಪಾರ್ಟಿ” ಒಂದೇ ಸಿನಿಮಾವಾದರೂ ಆ ಒಂದೇ ಸಿನಿಮಾದಲ್ಲಿ ಈ ಜೋಡಿ ಮೋಡಿ ಮಾಡಿಬಿಟ್ಟರು. ರಾತ್ರೋ ರಾತ್ರಿ ರಶ್ಮಿಕಾ ಸ್ಟೇಟ್ ಕ್ರಶ್ ಎನಿಸಿಕೊಂಡರು. ನಂತರದ ದಿನಗಳಲ್ಲಿ ರಶ್ಮಿಕಾ ಹಾಗೂ ರಕ್ಷಿತ್ ಅವರ ಲವ್ ವಿಚಾರ ಬಹಿರಂಗವಾಯಿತು. ಮೊದಲ ಸಿನಿಮಾದ ಶೂಟಿಂಗ್ ನಲ್ಲಿಯೇ ಇಬ್ಬರಿಗೂ ಲವ್ ಆಗಿ ಹೋಗಿತ್ತು‌‌ ಎನ್ನುವುದು ಸತ್ಯ.
ಇಬ್ಬರ ನಡುವೆ ಲವ್ ಆದ ನಂತರ ರಿಂಗ್ ಕೊಟ್ಟು ರಶ್ಮಿಕಾಳಿಗೆ ಪ್ರಪೋಸ್ ಮಾಡಿದ್ದರಂತೆ ರಕ್ಷಿತ್. ನಂತರ ಈ ಇಬ್ಬರೂ ಪರಸ್ಪರ ಪ್ರೀತಿಸುತ್ತಿರುವುದಾಗಿ ಬಹಿರಂಗವಾಗಿ ಹೇಳಿಕೊಂಡರು. ಎರಡೂ ಮನೆಯವರು ಈ ಜೋಡಿಯ ಪ್ರೀತಿಗೆ ಒಪ್ಪಿಗೆ ಕೊಟ್ಟು ಅದ್ಧೂರಿಯಾಗಿ ನಿಶ್ಚಿತಾರ್ಥವನ್ನೂ ನೆರವೇರಿಸಿದರು. ಎಲ್ಲ ಕಡೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿಯ ನಡುವಿನಲ್ಲಿ ಮನಸ್ತಾಪ ಉಂಟಾಗಿ, ಎರಡೂ ಕುಟುಂಬಗಳ ನಡುವೆ ಹೊಂದಾಣಿಕೆ ಸರಿ ಬಾರದ ಕಾರಣ ಈ ಜೋಡಿಯ ನಿಶ್ಚಿತಾರ್ಥ ಮುರಿದುಬಿದ್ದಿತ್ತು. ರಶ್ಮಿಕಾ ಅವರ ಅಮ್ಮ ಈ ಬಗ್ಗೆ ಮಾದ್ಯಮದ ಬಳಿ ಈ ಸಂಬಂಧ ಕ್ಯಾನ್ಸಲ್ ಮಾಡಿರುವುದಾಗಿಯೂ ತಿಳಿಸಿದ್ದರು. ಆನಂತರ ನಿಶ್ಚಿತಾರ್ಥದ ದಿನ ತೊಡಿಸಿದ್ದ ಉಂಗುರಗಳನ್ನು ಇಬ್ಬರೂ ವಾಪಸ್ ನೀಡಿದ್ದಾರೆ ಎಂಬ ಮಾಹಿತಿ ತಿಳಿದು ಬಂತು.

ಆದರೆ ರಕ್ಷಿತ್ ಮಾತ್ರ ಕೆಲ ದಿನಗಳು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ತನ್ನ ಪ್ರೀತಿ ಮತ್ತೆ ಸಿಗಲಿದೆ ಎಂದು ಭಾವಿಸಿ. ಮಾದ್ಯಮವೊಂದಕ್ಕೆ ಮಾತ್ರ ಈ ಬಗ್ಗೆ ಒಮ್ಮೆ ಫೋನ್ ನಲ್ಲಿ ಮಾತನಾಡಿ ನಿಶ್ಚಿತಾರ್ಥ ಮುರಿಯಿತು ಅಂತ ರಶ್ಮಿಕಾ ಏನಾದರು ಹೇಳಿದ್ರಾ? ಇಲ್ಲವಲ್ಲ.., ಎಂದಿದ್ದರು. ಆದರೆ ರಕ್ಷಿತ್ ಶೆಟ್ಟಿ ಯಾವುದೇ ವಿಚಾರವನ್ನು ಬಿಟ್ಟು ಕೊಡಲೇ ಇಲ್ಲ.

ನಂತರ ಇಬ್ಬರು ದೂರಾವಾಗಿದ್ದು ಸತ್ಯ. ಆ ನೋವಿನಿಂದ ಹೊರ ಬರಲು ರಕ್ಷಿತ್ ಅವರಿಗೆ ಎರಡು ವರ್ಷಗಳು ಬೇಕಾಯಿತು. ಆನಂತರ “ಶ್ರೀಮನ್ನಾರಾಯಣ” ಸಿನಿಮಾ ಚಿತ್ರ ತೆರೆಗೆ ಬಂತು. ಅತ್ತ ರಶ್ಮಿಕಾ ಮಂದಣ್ಣ ಬ್ಯಾಕ್ ಟು ಬ್ಯಾಕ್ ತೆಲುಗು ಕನ್ನಡ ಸಿನಿಮಾಗಳಲ್ಲಿ ಬ್ಯುಸಿ ಆಗಿ ಹೋದರು.

ಆದರೆ ಈಗ ಮತ್ತೊಮ್ಮೆ ಕನ್ನಡದ ಈ “ಕಿರಿಕ್ ಪಾರ್ಟಿ” ಚಿತ್ರದ ಜೋಡಿ ಒಂದಾಗುತ್ತಿದೆ. ಆದರೆ ನಿಜ ಜೀವನದಲ್ಲಿ ಬಾಳ ಸಂಗಾತಿಯಾಗಲ್ಲ. ಬದಲಾಗಿ ತೆರೆಯ ಮೇಲೆ ಮತ್ತೊಮ್ಮೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ.‌ ಹೌದು ಕನ್ನಡದಲ್ಲಿನ ಕಿರಿಕ್ ಪಾರ್ಟಿ ಸಿನಿಮಾ ದೊಡ್ಡ ಯಶಸ್ಸನ್ನು ಪಡೆದಿತ್ತು. ಯುವ ಜನತೆಯ ನೆಚ್ಚಿನ ಸಿನಿಮಾವಾಗಿ ಹೊರಹೊಮ್ಮಿತು.

ಇದೀಗ ಅದೇ ಸಿನಿಮಾದ ಎರಡನೇ ಭಾಗ “ಕಿರಿಕ್ ಪಾರ್ಟಿ 2” ಸಿನಿಮಾ ಮಾಡಲು ಸಂಪೂರ್ಣ ತಂಡ ತಯಾರಾಗುತ್ತಿದೆ. ನಿರ್ಮಾಪಕರು ರಶ್ಮಿಕಾ ಮಂದಣ್ಣ ಅವರೇ ಹೀರೋಯಿನ್ ಆಗಲಿ ಎಂದು ಹೇಳಿದ್ದಾರಂತೆ. ಅತ್ತ “ಕಿರಿಕ್ ಪಾರ್ಟಿ 2” ಸಿನಿಮಾದಲ್ಲಿ ಅಭಿನಯಿಸಲು ಯಾವುದೇ ಅಭ್ಯಂತರವಿಲ್ಲ ಎನ್ನುವ ಮಾತು ರಶ್ಮಿಕಾ ಕಡೆಯಿಂದಲೂ ಕೇಳಿ ಬಂದಿದೆ ಎನ್ನುತ್ತಿವೆ ಎಂದು ಸುದ್ದಿ ಮೂಲಗಳಿಂದ ತಿಳಿದು ಬಂದಿದೆ.

ಎಲ್ಲವೂ ಅಂದುಕೊಂಡಂತೆ ಆದರೆ “ಕಿರಿಕ್ ಪಾರ್ಟಿ 2” ಸಿನಿಮಾದಲ್ಲಿ‌ ಮತ್ತೊಮ್ಮೆ ಈ ಜೋಡಿಯನ್ನು ತೆರೆಯ ಮೇಲೆ ನೋಡಬಹುದಾಗಿದೆ. ಪ್ರೊಫೆಷನ್ ಅನ್ನು ಬರಿ ಪ್ರೊಫೆಷನ್ ರೀತಿಯೇ ನೋಡಿ ಇಬ್ಬರು ಒಟ್ಟಿಗೆ ಸಿನಿಮಾ ಮಾಡುತ್ತಾರಾ…? ಅಥವಾ ಅದು ಸಾಧ್ಯವಾಗದ ಮಾತು ಎಂದು ರಕ್ಷಿತ್ ಈ ನಿರ್ಧಾರದಿಂದ ಹೊರ ಬರುತ್ತಾರಾ..? ಕಾದು ನೋಡಬೇಕಿದ್ದು, ಸಿನಿಮಾ ತಂಡದಿಂದ ಅಧಿಕೃತವಾಗಿ ವಿಚಾರ ಹೊರ ಬರಲಿದೆ ಎಂದು ತಿಳಿದು ಬಂದಿದೆ.

More Buzz

Buzz 3 days ago

Swastik Productions celebrates the iconic success of Shrimad Ramayan and the grand launch of Veer Hanuman

Trailers 10 months ago

Rudra Garuda Purana Official Teaser Starring Rishi, Priyanka

Trailers 10 months ago

Pepe Kannada Movie Trailer Starring Vinay Rajkumar

BuzzKollywood Buzz 10 months ago

The GOAT Movie: Trailer ಗೂ ಟ್ರೈಲರ್ ರಿಲೀಸ್ ಮಾಡಿದ ವಿಜಯ್ ನಟನೆಯ ಚಿತ್ರತಂಡ

Buzz 10 months ago

Daali Pictures: ವಿದ್ಯಾಪತಿ ಮೂಲಕ ಕರಾಟೆ ಕಿಂಗ್ ಆದ ನಾಗಭೂಷಣ, ಪ್ರೊಮೋ ಬಗ್ಗೆ ಸಿಕ್ತು ಬಿಗ್ ಅಪ್ ಡೇಟ್

BuzzTrailers 10 months ago

Laughing Buddha Trailer – ಪ್ರಮೋದ್ ಶೆಟ್ರ ಡೊಳ್ಳೊಟ್ಟೆ ಪೊಲೀಸ್ ಪಾತ್ರ ನೋಡಿದ್ರಾ? ಟ್ರೈಲರ್ ಇಲ್ಲಿದೆ ನೋಡಿ.

Buzz 10 months ago

Samarjith Lankesh: ಇಂದ್ರಜಿತ್ ಲಂಕೇಶ್ ಮಗನ ಜೊತೆ ಹುಚ್ಚೆದ್ದು ಕುಣಿದು ‘ಕಿಸ್’ ಕೊಟ್ಟ ಉಪೇಂದ್ರ – ವೈರಲ್ ವಿಡಿಯೋ ಇಲ್ಲಿದೆ!

Buzz 10 months ago

Abhishek Aishwarya Divorce – ನಾವು ಡಿವೋರ್ಸ್ ಪಡೆಯಲಿದ್ದೇವೆ ಎಂದ ಅಭಿಷೇಕ್‌ ಬಚ್ಚನ್ ವಿಡಿಯೋ ವೈರಲ್ – ಅಸಲಿಯತ್ತೇನು?

Buzz 10 months ago

Tharun Sonal Marriage: ಸಪ್ತಪದಿ ತುಳಿಯಲಿರುವ ತರುಣ್ – ಸೋನಲ್, ನಟಿ ನಿರ್ದೇಶಕ ಜೋಡಿಗೆ ಹಲವಾರು ಗಣ್ಯರ ಆಶೀರ್ವಾದ

Buzz 10 months ago

Bheema Movie Review: ಫುಲ್ ಆಕ್ಷನ್, ಸ್ಟಾರ್ಟ್ ಟು ಎಂಡ್ ಸಖತ್ ಮಾಸ್ – ದುನಿಯಾ ವಿಜಿ ಭೀಮ ಥಿಯೇಟರ್ ಕಿಂಗ್

BuzzTollywood Buzz 10 months ago

Naga Chaithanya – Shobhitha Dhulipala: ದೀರ್ಘಕಾಲದ ಗೆಳತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಸಮಂತಾ ಮಾಜಿ ಪತಿ ನಾಗಚೈತನ್ಯ

BuzzTollywood Buzz 10 months ago

Mr.Bachchan ಆದ ರವಿತೇಜ – ಚಿತ್ರದ ಟ್ರೈಲರ್ ನಲ್ಲಿ ‘ಮಾಸ್ ಮಹಾರಾಜ’ನ ಕಮಾಲ್

Copyright ©2025 . All Rights Reserved. privacy | terms Whatsapp: 9538193653 Email: hello@flixoye.com