ರಾಜ್ ಕುಮಾರ್ ಅಂದರೆ ಕನ್ನಡದಲ್ಲಿ ಒಂದು ಅಗಾಧ ಶಕ್ತಿ.
ರಾಜ್ ಕುಮಾರ್ ಅಂದರೆ ಕನ್ನಡದಲ್ಲಿ ಒಂದು ಅಗಾಧ ಶಕ್ತಿ.
ಡಾ ರಾಜ್ ಕುಮಾರ್ ಅವರ ಬಗ್ಗೆ ನಿಮಗೆ ತಿಳಿಯದ ಕೆಲ ರೋಚಕ ವಿಷಯಗಳು.ತಪ್ಪದೇ ಓದಿ.
1 – Kentucky Colonel ಪ್ರಶಸ್ತಿ ಪಡೆದ ಭಾರತದ ಏಕೈಕ ನಟ🙏
1985 ರಲ್ಲಿ, ಕೆಂಟುಕಿ ನ ಗವರ್ನರ್, ಯುನೈಟೆಡ್ ಸ್ಟೇಟ್ಸ್ ಅವರ ಕಡೆ ಇಂದ ಈ ಗೌರವವನ್ನು ಡಾ.ರಾಜ್ ಪಡೆದರು. ಈ ಮೂಲಕ ಅವರು ಈ ಪ್ರಶಸ್ತಿಯನ್ನು ಪಡೆದ ಏಕೈಕ ಭಾರತದ ನಟ ಆಗಿ ಹೋದರು.
2- ಅದು 1978 ರ ಚುನಾವಣೆ ಸಮಯ🙏
೧೯೭೮ ರ ಬೈ-ಎಲೆಕ್ಷನ್ ನಲ್ಲಿ ರಾಜಕುಮಾರ್ ಅವರು ಸ್ಪರ್ಧಿಸುತ್ತಾರೆ ಎಂದು ಹೀಗೆ ಗುಲ್ಲು ಎದ್ದಿತ್ತು. ಒಂದು ವೇಳೆ ರಾಜ್ ಸ್ಪರ್ಧಿಸಿದ್ದರೆ ಅವರು ಗೆಲ್ಲುವ ಎಲ್ಲ ಸಾಧ್ಯತೆಗಳು ಇದ್ದವು ಆದರೆ ರಾಜ್ ರಾಜಕೀಯದ ಹಾದಿ ತುಳಿಯಲಿಲ್ಲ. ತಮ್ಮ ಜನ ಪ್ರೀತಿಯನ್ನು ರಾಜಕೀಯ ದಾಳವಾಗಿ ಬಳಸಲು ಅವರಿಗೆ ಇಷ್ಟ ಇರಲಿಲ್ಲ ಹಾಗೂ ರಾಜ್ ಕುಮಾರ್ ಅವರಿಗೆ ರಾಜಕೀಯದಲ್ಲಿ ಹೇಳಿಕೊಳ್ಳುವಂತಹ ಆಸಕ್ತಿಯೂ ಇರಲಿಲ್ಲ.
3- ರಾಜ್ ಕುಮಾರ್ ಎಂದರೆ ಕನ್ನಡ, ಕನ್ನಡ ಎಂದರೆ ರಾಜ್ ಕುಮಾರ 🙏
ಹಿಂದಿಯ ಪ್ರಿಥ್ವಿ ರಾಜ್ ಕಪೂರ್ ಜೊತೆ ನಟಿಸುವ ಅವಕಾಶ ರಾಜ್ ರನ್ನು ಹುಡುಕಿ ಕೊಂಡು ಬಂದಿತ್ತು. ಬೇರೆ ಯಾರೇ ಆಗಿದ್ದರು ಸುಲಭವಾಗಿ ಈ ಅವಕಾಶವನ್ನು ತಮ್ಮದಾಗಿಸಿ ಕೊಳ್ಳುತ್ತಿದ್ದರು ಆದರೆ ರಾಜ್ ಇದನ್ನು ನಯವಾಗಿ ತಿರಸ್ಕರಿಸಿ ಬಿಟ್ಟರು, ಕಾರಣ ಅದು ಹಿಂದಿ ಭಾಷೆಯ ಸಿನೆಮಾ ಎಂದು.
ಆದರೆ ನೋಡಿ, ಇದೇ ಪೃಥ್ವಿ ರಾಜ್ ಕಪೂರ್ ಅವರು ನಮ್ಮ ರಾಜ್ ಕುಮಾರ್ ಜೊತೆ ‘ಸಾಕ್ಷಾತ್ಕಾರ’ ಎಂಬ ಕನ್ನಡ ಚಿತ್ರದಲ್ಲಿ ನಟಿಸಿದರು. ಇದಲ್ಲವೇ ರಾಜ್ ಅವರ ಕನ್ನಡದ ಭಕ್ತಿ
4- ರಾಜ್ ಕುಮಾರ್ ಮತ್ತು ಅವರ ದಾರಿಯನ್ನು ಜನ ಸಮೂಹವೇ ಅನುಸರಿಸುತಿತ್ತು.🙏
ಬಂಗಾರದ ಮನುಷ್ಯ ಎಂಬ ಚಿತ್ರ ಇದಕ್ಕೆ ಒಂದು ಒಳ್ಳೆ ಉದಾಹರಣೆ ಎಂದು ಹೇಳಬಹುದು. ರಾಜ್ ಅವರ ಅಭಿನಯ ಮತ್ತು ಆದರ್ಶ ಪ್ರಾಯವಾದ ಪಾತ್ರವನ್ನು ನೋಡಿದ ಮೇಲೆ ಜನ ತಮ್ಮ ನೌಕರಿಯನ್ನು ಬಿಟ್ಟು ಮತ್ತೆ ಹಳ್ಳಿಗೆ ಹೋಗಿ ವ್ಯವಸಾಯವನ್ನು ಶುರು ಮಾಡಿದ್ದು ಇದೆ
5- ನ್ಯಾಷನಲ್ ಅವಾರ್ಡ್ ಪಡೆದ ಏಕೈಕ ಗಾಯಕ ನಟ ಎಂದರೆ ನಮ್ಮ ರಾಜ್ ಕುಮಾರ್🙏
1963 ರಲ್ಲಿ ಸಂತ ತುಕಾರಾಮ ಎಂಬ ಚಿತ್ರಕ್ಕೆ ರಾಜ್ ಅವರು ಉತ್ತಮ ನಟನೆಗಾಗಿ ನ್ಯಾಷನಲ್ ಅವಾರ್ಡ್ ಅನ್ನು ಪಡೆಯುತ್ತಾರೆ. ಮತ್ತು 1992 ರಲ್ಲಿ, ನಾದಮಯ ಎಂಬ ಹಾಡಿಗೆ ತಮ್ಮ ಸುಶ್ರಾವ್ಯ ವಾದ ಹಾಡಿಗೆ ಉತ್ತಮ ಗಾಯಕ, ನ್ಯಾಷನಲ್ ಅವಾರ್ಡ್ ಅನ್ನು ಪಡೆಯುತ್ತಾರೆ.
6- ರಾಜ್ ಕುಮಾರ್ ಅವರು ಭಾರತ ಮತ್ತು ಕರ್ನಾಟಕ ದಲ್ಲಿ ಮಾತ್ರ ಜನಪ್ರಿಯ ಆಗಿರಲಿಲ್ಲ🙏
ಹೌದು, 1965ರಲ್ಲಿ, ರಾಜ್ ಅವರ ಜನಪ್ರಿಯ ವಾದ ‘ನಾಂದಿ’ ಎಂಬ ಚಿತ್ರವೂ ಫ್ರಾನ್ಸ್ ನ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಪ್ರದರ್ಶನಗೊಂಡಿತ್ತು, ಸುಮಾರು ೪೦ ವರ್ಷದ ಹಿಂದೆ. ಇದು ರಾಜ್ ಅವರ ಪ್ರತಿಭೆ ಗೆ ಸಿಕ್ಕ ಒಂದು ಮನ್ನಣೆ ಆಗಿತ್ತು.
7 – ರಾಜ್ ರದ್ದು ಮಗುವಿನಂತಹ ಮನಸ್ಸು🙏
ವಿನಯಕ್ಕೆ ಮತ್ತೊಂದು ಹೆಸರೇ ಡಾ. ರಾಜ್. ಸರಳತೆ ಮತ್ತು ಮುಗ್ಧತೆ ಯನ್ನು ತಮ್ಮ ಜೀವನದ ಉದ್ದಕ್ಕೂ ಕಾಪಾಡಿಕೊಂಡು ಬಂದನಟ ಇವರು. ಯೋಗ ಅಭ್ಯಾಸವನ್ನು ತಮ್ಮ ಕೊನೆಯ ಉಸಿರು ಇರುವವರೆಗೂ ಪಾಲಿಸಿದರು. ಎಂದಿಗೂ ಪರದೆಯ ಮೇಲೆ ಸ್ಮೋಕ್ ಮಾಡುವ ಅಥವಾ ಕುಡಿಯುವ ದೃಶ್ಯದಲ್ಲಿ ರಾಜ್ ರನ್ನು ನಾವು ನೋಡಲೇ ಇಲ್ಲ ಮತ್ತು ಇದು ಅವರ ವಯಕ್ತಿಕ ಜೀವನಕ್ಕೂ ಅನ್ವಯವಾಗುತ್ತದೆ.
ಹೀಗೆ ರಾಜ್ ಅವರ ಬಗ್ಗೆ ಹೇಳುತ್ತಾ ಹೋದರೆ ಹೀಗೆ ಪದಗಳು ಸಾಗುತ್ತಲೇ ಇರುತ್ತವೆ.