‘ರಾ’ ಚಿತ್ರದ ಮೂಲಕ ನಿರ್ದೇಶಕನ‌ ಹ್ಯಾಟ್ ತೊಟ್ಟ ರಾಜೇಶ್ ಗೌಡ

Published on

349 Views

ಸಿನಿಮಾ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದ ರಾಜೇಶ್ ಗೌಡ ಈಗ ನಿರ್ದೇಶಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ತಮ್ಮ ಚೊಚ್ಚಲ ಸಿನಿಮಾ ‘ರಾ’ ಮೂಲಕ ನಿರ್ದೇಶಕನ ಹ್ಯಾಟ್ ತೊಟ್ಟಿರುವ ರಾಜೇಶ್ ಗೌಡರವರು ತಮ್ಮ ‘ರಾ’ ಚಿತ್ರದ ಆಡಿಯೋ ಬಿಡುಗಡೆ ಯನ್ನು ದುಬೈಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ದಲ್ಲಿ ತಮ್ಮ ಚಿತ್ರದ ಆಡಿಯೋ ಬಿಡುಗಡೆಗೊಳಿಸಿದ್ದರು. ಕರ್ನಾಟಕ ಮೂಲದ ಉದ್ಯಮಿ ಬಿ.ಆರ್.ಶೆಟ್ಟಿ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ರಾಜೇಶ್ ಗೌಡರವರು ತಮ್ಮ ಮೊದಲ ಚಿತ್ರದಲ್ಲಿ ಹೊಸ ಪ್ರಯೋಗವೊಂದನ್ನು‌ ಮಾಡಿದ್ದಾರೆ.‌ ‘ರಾ’ ಇದು ಚಿತ್ರದ ಟೈಟಲ್ ಹಾಗೂ ನಾಯಕನ ಹೆಸರು ಕೂಡ ರಾ ಅಕ್ಷರದಿಂದನೇ ಆರಂಭವಾಗುತ್ತದೆ. ಅದ್ರೆ ಆ ಹೆಸರು ಸಸ್ಪೆನ್ಸ್ ಆಗಿಟ್ಟಿದ್ದಾರೆ. ಪ್ರೇಕ್ಷಕರಿಗೊಂದು ಸುವರ್ಣಾವಕಾಶವನ್ನು ಕೊಟ್ಟು, ರಾ ಅಕ್ಷರದಿಂದ ಶುರುವಾಗುವ ನಾಯಕನ ಹೆಸರು ಹೇಳಿ ಬಹುಮಾನ ಗೆಲ್ಲಿ ಎಂದು ಹೇಳಿದ್ದಾರೆ. ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಇತ್ತೀಚಿಗೆ ಚಿತ್ರದ ಟೀಸರ್ ಕೂಡ ಬಿಡುಗಡೆ ಮಾಡಿತ್ತು ಚಿತ್ರತಂಡ. ಚಿಕ್ಕ ವಯಸ್ಸಿನಲ್ಲಿಯೇ ನಿರ್ದೇಶಕನಾಗಬೇಕೆಂದು ಕನಸು ಕಂಡಿದ್ದ ರಾಜೇಶ್ ಗೌಡರವರು ಗೆಳೆಯರ ಜೊತೆ ಸೇರಿಕೊಂಡು ‘ರಾ’ ಸಿನಿಮಾವನ್ನು ಮಾಡಿದ್ದಾರೆ. ಈ ಚಿತ್ರದ ಮೂಲಕ ತನ್ನ ಸಿನಿಮಾ ಜರ್ನಿ ಶುರು ಮಾಡಿದ್ದೇನೆ ಎನ್ನುತ್ತಾರೆ ರಾಜೇಶ್ ಗೌಡ. ಚಿತ್ರದಲ್ಲಿ ಸನಾ ನಾಯಕಿಯಾಗಿ, ಉಳಿದ ತಾರಾಗಣದಲ್ಲಿ ಸಮೀರ್, ಸುದರ್ಶನ್, ಮಂಜುನಾಥ್ ಚಿತ್ರದಲ್ಲಿದ್ದಾರೆ. ಜೇಮ್ಸ್ ಆರ್ಕಿಟೆಕ್ಟ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅನುರಾಧ ಭಟ್, ರವೀಂದ್ರ, ಸುರಗಾವಿ‌ ಹಾಗೂ ಅನಿರುಧ್ ಶಾಸ್ತ್ರಿ ಹಾಡಿದ್ದಾರೆ. ಸುಜಿತ್ ನಾಯಕ್ ಸಂಕಲನ, ಕುಮಾರ್ ಛಾಯಾಗ್ರಹಣವಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com