ಕಾಫಿ ನಾಡಿನ ಚೆಲುವೆ ಜೊತೆ ರಾಜ ಹುಲಿ ಹರ್ಷ ಮದುವೆ!

Published on

423 Views

ನಮ್ಮ ಕಾಫಿ ನಾಡಿನ ಸುಂದರ ರೂಪದರ್ಶಿ ಆದ ಐಶ್ವರ್ಯ ಅವರು ಕನ್ನಡ ನಟ ರಾಜ ಹುಲಿ ಖ್ಯಾತಿಯ ಹರ್ಷ / ಹರ್ಷವರ್ಧನ್ ಅವರ ಜೊತೆ ಇದೇ ವರ್ಷ ಡಿಸೆಂಬರ್ ಅಲ್ಲಿ ಮದುವೆ ಆಗಲಿದ್ದಾರೆ. ಮೂಲತಃ ಮಾಡೆಲ್ ಆದ ಐಶ್ವರ್ಯ ಅವರು ಆಭರಣ ಹಾಗು ಸೀರೆ ಬ್ರಾಂಡ್ ಗಳಿಗೆ brand ambassador ಆಗಿದ್ದಾರೆ.

ಐಶ್ವರ್ಯ ಅವರಿಗೆ ಸುಮಾರು ಧಾರಾವಾಹಿಗಳಲ್ಲಿ ಹಾಗು ಸಿನಿಮಾ ಗಳಲ್ಲಿ ಕೂಡ ಅವಕಾಶಗಳು ಬರುತ್ತಿವೆ. ಸದ್ಯ ತಮ್ಮ ಜೀವನದ ಹೊಸ ಜರ್ನಿ ಯನ್ನು ಶುರು ಮಾಡುತ್ತಿರುವ ಐಶ್ವರ್ಯ ಅವರು ಮದುವೆಯ ನಂತರ ತಮ್ಮ ಸಿನಿಮಾ ಹಾಗು ಮಾಡೆಲ್ಲಿಂಗ್ ಕೆರಿಯರ್ ಮೇಲೆ ಮತ್ತೆ ಫೋಕಸ್ ಮಾಡಲಿದ್ದಾರೆ.

ಕನ್ನಡ ನಟ ಹರ್ಷ ಅವರು ಮೊಗ್ಗಿನ ಮನಸ್ಸು ಚಿತ್ರದಿಂದ ಕನ್ನಡ ಸಿನಿಮಾ ರಂಗಕ್ಕೆ ಕಾಲಿಟ್ಟರು. ಹರ್ಷ ಅವರು ಸುಮಾರು 15 ಕ್ಕೂ ಹೆಚ್ಚು ಕನ್ನಡ ಸಿನೆಮಾಗಳಲ್ಲಿ ನಟಿಸಿದ್ದಾರೆ. ಒಂದೆರಡು ಚಿತ್ರಗಳಲ್ಲಿ ಹೀರೋ ಪಾತ್ರ ಕೂಡ ಮಾಡಿದ್ದಾರೆ. ಸಾಮಾನ್ಯವಾಗಿ ಯಶ್ ಅವರ ಎಲ್ಲಾ ಚಿತ್ರದಲ್ಲಿ ಹರ್ಷ ಅವರು ಇರುತ್ತಾರೆ.

ನಟ ಹರ್ಷ ಅವರು ತಮ್ಮ ಗೆಳತಿ ಐಶ್ವರ್ಯ ಅವರ ಜೊತೆ ಇದೆ ವರ್ಷ ಮೇ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಇದೆ ವರ್ಷ ಡಿಸೆಂಬರ್ 3 ನೇ ತಾರೀಕು ನಟ ಹರ್ಷ ಹಾಗು ಐಶ್ವರ್ಯ ಅವರ ಮದುವೆ ನಡೆಯಲಿದೆ. ಈ ಸುದ್ದಿ ಇವತ್ತು ನಟ ಹರ್ಷ ಅವರು ತಮ್ಮ ಫೇಸ್ಬುಕ್ ನಲ್ಲಿ ಎಲ್ಲರಿಗು ಅನೌನ್ಸ್ ಮಾಡಿದರು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com