ಯಶ್ ಸಾಧನೆಯನ್ನು ಕೊಂಡಾಡಿದ ರಾಜ್ ಮೌಳಿ

Published on

300 Views

ಯಶ್ ಸಾಧನೆಯನ್ನು ಕೊಂಡಾಡಿದ ರಾಜ್ ಮೌಳಿ

‘ಕೆಜಿಎಫ್’ ಸಾಕಷ್ಟು ಸದ್ದು ಮಾಡುತ್ತಿದ್ದು, ಬೇರೆ ಚಿತ್ರರಂಗದವರು ಸ್ಯಾಂಡಲ್ ವುಡ್ ಕಡೆ ಮುಖ ಮಾಡುವಂತೆ ಮಾಡಿದೆ. ಇದರ ಜೊತೆ ಯಶ್ ಹವಾ ಕೂಡ ಹೆಚ್ಚಾಗಿದೆ. ಎಲ್ಲರ ಬಾಯಲ್ಲೂ ‘ಕೆಜಿಎಫ್’ ಮತ್ತು ಯಶ್ ಬಗ್ಗೆನೇ ಮಾತುಗಳು ಕೇಳಿ ಬರುತ್ತಿದೆ. ಸಾಕಷ್ಟು ನಿರೀಕ್ಷೆನೂ ಹುಟ್ಟಿಸಿರುವ ‘ಕೆಜಿಎಫ್’ನ ಫ್ರೀ- ರಿಲೀಸ್ ಈವೆಂಟ್ ನ್ನು ಹೈದರಾಬಾದ್ ನಲ್ಲಿ ಆಯೋಜಿಸಲಾಗಿತ್ತು. ಅಲ್ಲಿಗೆ ಅತಿಥಿಯಾಗಿ ಆಗಮಿಸಿದ ಖ್ಯಾತ ನಿರ್ದೇಶಕ ರಾಜ್ ಮೌಳಿ ‘ಕೆಜಿಎಫ್’ ಬಗ್ಗೆ ಮೆಚ್ಚುಗೆ ಮಾತುಗಳನಾಡಿದ್ದಾರೆ. ಯಶ್ ಯಶಸ್ಸಿನ ಬಗ್ಗೆ ಮಾತನಾಡುತ್ತಾ ‘ ಯಶ್ ಬಗ್ಗೆ ಹೆಮ್ಮೆ ಪಡುತ್ತೇನೆ. ಯಶ್ ಇಲ್ಲಿಯವರೆಗೆ ನಡೆದು‌ ಬಂದ ಹಾದಿ, ಹಾಗೂ ಒಬ್ಬ ಬಸ್ ಡ್ರೈವರ್ ಮಗನೊಬ್ಬ ಇಂದು ಕನ್ನಡ ಚಿತ್ರರಂಗದ ಸ್ಟಾರ್ ನಟರಾಗಿದ್ದಾರೆ. ನಿಜಕ್ಕೂ ಯಶ್ ಬಗ್ಗೆ ಹೆಮ್ಮೆ ಅನಿಸುತ್ತದೆ ಎಂದು ರಾಜ್ ಮೌಳಿ‌ ಹೇಳಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com