ರಘು ದೀಕ್ಷಿತ್ ತೆಕ್ಕೆಗೆ ಮತ್ತೊಂದು ಸೂಪರ್ ಹಿಟ್ ಮಾದಪ್ಪ ಸಾಂಗ್

Published on

696 Views

ರಘು ದೀಕ್ಷಿತ್ ಸೈಕೋ ಚಿತ್ರದ ಮೂಲಕ, ಮಾದೇಶ್ವರ ಬಗ್ಗೆ ಭಕ್ತಿಪೂರ್ವಕವಾಗಿ ಹಾಡಿ ಸೂಪರ್ ಹಿಟ್ ಸಾಂಗ್ ಮಾಡಿದ್ದು ಗೊತ್ತೇ ಇದೆ. ಇದೀಗ ಮತ್ತೆ ಮಾದಪ್ಪ ಜೊತೆ ಬಂದಿದ್ದು, ಆರ್ಕೆಸ್ಟ್ರಾ ಸಿನಿಮಾ ಮೂಲಕ. ಹೌದು ಕನ್ನಡ ಚಿತ್ರರಂಗದಲ್ಲಿ ಇದೀಗ ಹೊಸತನದ ಹೊಸ ಯುವ ಪ್ರಾರಂಭವಾಗಿದ್ದು, ಈ ಯುಗಾದಿಯ ದಿನ ಮಾದಪ್ಪನ ಸಾಂಗ್ ಬಿಡುಗಡೆ ಮಾಡಿದ್ದಾರೆ.


ನಿನ್ನ ಪೂಜೆಗೆ ಬಂದೆ ಮಾದೇಶ್ವರ ಹಾಡಿನ ನಂತರ ಮತ್ತೊಂದು ಬಿಗ್ ಹಿಟ್ ಸಾಂಗ್ ನೀಡಿದ್ದಾರೆ ರಘು ದೀಕ್ಷಿತ್. ಈ ಹಾಡಿನ ಮುಖ್ಯ ವಿಶೇಷತೆ ಏನಂದರೆ, ಡಾಲಿ ಧನಂಜಯ ಹಾಡು ಬರೆದಿರೋದು. ಡಾಲಿ ನಟನಾಗಿ ಎಲ್ಲರಿಗೂ ಪರಿಚಯ, ಆದರೆ ಈ ಸಿನೆಮಾ ಮೂಲಕ ದೊಡ್ದ ಮಟ್ಟದ ಚಿತ್ರಸಾಹಿತಿ ಆಗಿ ಹೊರ ಹೊಮ್ಮಲಿದ್ದಾರೆ. ಈ ಆರ್ಕೆಸ್ಟ್ರಾ ಚಿತ್ರದಲ್ಲಿ 11 ಹಾಡುಗಳಿದ್ದು, ಅದ್ರಲ್ಲಿ 8 ಹಾಡುಗಳು ಧನಂಜಯ ಬರೆದಿದ್ದಾರೆ.

ಸುನಿಲ್ ಮೈಸೂರ್ ಆಕ್ಷನ್ ಕಟ್ ಹೇಳಿದ್ದು, ಪೂರ್ಣಚಂದ್ರ ಮೈಸೂರ್ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಈ ಸಿನಿಮಾ ಆರ್ಕೆಸ್ಟ್ರಾ ದವರ ಜೀವನ ಸಾಧನೆ ಎಲ್ಲದನ್ನೂ ಹೇಳೋದಕ್ಕೆ ಹೊರಟಿದೆ. ಸದ್ಯ ಸಿನಿಮಾ ಚಿತ್ರೀಕರಣ ಪೂರ್ಣಗೊಳಿಸಿ ತೆರೆಗೆ ಬರಲು ರೆಡಿಯಾಗಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com