ರಾಧಿಕಾ‌ಯಶ್ ಮಗಳ ಹೆಸರು‌ ರಿವೀಲ್…!!!

Published on

476 Views

ಕೆಜಿಎಫ್​-2 ಚಿತ್ರದ ಶೂಟಿಂಗ್​​ನಲ್ಲಿ ಸಕ್ರಿಯರಾಗಿರುವ ರಾಕಿಂಗ್ ಸ್ಟಾರ್​ ಯಶ್​ ಜೂನ್ 23ರಂದು ತಮ್ಮ‌ ಮನೆಯ ವಿಶೇಷ ಸಂಭ್ರಮವೊಂದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಕೆಜಿಎಫ್​ ಚಿತ್ರ ಬಿಡುಗಡೆ ವೇಳೆ ವೈಯಕ್ತಿಕ ಜೀವನದಲ್ಲಿ ಅಪ್ಪನ ಸ್ಥಾನಕ್ಕೆ ಬಡ್ತಿ ಪಡೆದಿದ್ದ ಯಶ್, ತಮ್ಮ ಮುದ್ದಾದ ಮಗಳಿಗೆ ಜೂನ್ 23 ರಂದು ನಾಮಕರಣ ಮಾಡಿದ್ದಾರೆ. ಇದುವರೆಗೆ ಮಗುವಿನ ಹೆಸರನ್ನು ಬಿಟ್ಟುಕೊಡದ ಈ ತಾರಾ ಜೋಡಿ ಜೂನ್ 23 ಕ್ಕೆ‌ ತಮ್ಮ ಮಗಳ‌ ಹೆಸರು ರಿವೀಲ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಯಶ್​ರಾಧಿಕಾ ದಂಪತಿ ತಮ್ಮ ಪುತ್ರಿಗೆ ‘ಐರಾ’ ಎಂದು ಹೆಸರನ್ನಿಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ಎರಡೂ ಕುಟುಂಬದ ಆಪ್ತರು ಭಾಗವಹಿಸಿದ್ದರು.

ತಮ್ಮ ಮಗಳ ನಾಮಕರಣದ ಪುಟ್ಟ ವಿಡಿಯೋ ಒಂದನ್ನು ಯಶ್ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಕಾರ್ಯಕ್ರಮದ ಝಲಕ್​ ಜೊತೆಗೆ ಕೊನೆಯಲ್ಲಿ ಮಗಳ ಹೆಸರನ್ನು ರಿವೀಲ್ ಮಾಡಿದ್ದಾರೆ. ನಮ್ಮದೇ ಉಸಿರಿನ ಮಗಳೆಂಬ ಕನಸಿಗೆ ಹೆಸರಿಟ್ಟ ಸಂಭ್ರಮ, ಹರಸಿ.. ಹಾರೈಸಿ ಎಂದು ಯಶ್​ ಕ್ಯಾಪ್ಶನ್ ನೀಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com