ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ಯಿಂದ ನೋಟೀಸ್..?
ಯುವರಾಜ್ ರವರು ರಾಧಿಕಾ ಕುಮಾರಸ್ವಾಮಿ ಖಾತೆಗೆ ಹಣ ವರ್ಗಾವಣೆ ಮಾಡಿರುವ ವಿಚಾರವಾಗಿ ರಾಧಿಕಾ ಕುಮಾರಸ್ವಾಮಿ ಅವರ ವಿಚಾರಣೆಗೆ ಸಿಸಿಬಿ ನೋಟೀಸ್ ನೀಡುವ ಸಾಧ್ಯತೆ ಇದೆ. ರಾಧಿಕಾ ಕುಮಾರಸ್ವಾಮಿ ಅಕೌಂಟ್ ಗೆ 75ಲಕ್ಷ ಹಣ ವರ್ಗಾವಣೆಯಾಗಿದ್ದು, ಇದರ ಬಗ್ಗೆ ಸಿಸಿಬಿ ಬಳಿ ಮಾಹಿತಿಯಿದೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಧಿಕಾ ಕುಮಾರಸ್ವಾಮಿ ಸಹೋದರ ರವಿರಾಜ್ ರನ್ನು ಸಿಸಿಬಿ ಅಧಿಕಾರಿಗಳು ಒಂದು ಗಂಟೆಯ ಕಾಲ ವಿಚಾರಣೆ ನಡೆಸಿದ್ದು, ರಾಧಿಕಾ ಕುಮಾರಸ್ವಾಮಿ ಖಾತೆಗೆ ಹಣ ವರ್ಗಾವಣೆಯಾದ ಕೆಲವು ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಯುವರಾಜ್ ಖಾತೆಯಿಂದ ರಾಧಿಕಾರವರ ಖಾತೆಗೆ ಹಣ ವರ್ಗಾವಣೆ ಆಗಿರುವ ಬಗ್ಗೆ ಸ್ಪಷ್ಟನೆ ನೀಡಲು ನಿನ್ನೆ ರಾಧಿಕಾ ಕುಮಾರಸ್ವಾಮಿ ಹಾಗೂ ಸಹೋದರ ರವಿರಾಜ್ ಸುದ್ದಿಗೋಷ್ಟಿ ನಡೆಸಿದ್ದರು. ಅದರೆ ಅವರು ನಿನ್ನೆ ಕೊಟ್ಟ ಸ್ಪಷ್ಟನೆಯಲ್ಲಿ ಗೊಂದಲಗಳೇ ಹೆಚ್ಚಾಗಿದ್ದು, ಇದ್ದರಿಂದ ರಾಧಿಕಾ ಕುಮಾರಸ್ವಾಮಿ ಅವರು ಸಿಸಿಬಿ ವಿಚಾರಣೆಗೆ ಗುರಿಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.