ಶೂಟಿಂಗ್ ವೇಳೆ ಅವಘಡ: ರಾಧಿಕಾ ಕುಮಾರಸ್ವಾಮಿಗೆ ಪೆಟ್ಟು

Published on

282 Views

ರಾಧಿಕಾಕುಮಾರಸ್ವಾಮಿ ಅಭಿನಯದ ‘ಭೈರಾದೇವಿ’ ಚಿತ್ರೀಕರಣದ ವೇಳೆ ರಾಧಿಕಾ ಕುಮಾರಸ್ವಾಮಿ ಆಯತಪ್ಪಿ ಬಿದ್ದಿದ್ದು, ಸ್ಪೈನಲ್ ಕಾರ್ಡ್‌ ಗೆ ತೀವ್ರ ಪೆಟ್ಟಾಗಿದೆ. ಶಾಂತಿನಗರದ ಸ್ಮಶಾನದಲ್ಲಿ ‘ಭೈರಾದೇವಿ’ ಕ್ಲೈಮಾಕ್ಸ್ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಆ ಸಮಯದಲ್ಲಿ ಗೋರಿಯ ಮೇಲಿನಿಂದ ಇಳಿಯುವ ಸಮಯದಲ್ಲಿ ರಾಧಿಕಾ ಕುಮಾರಸ್ವಾಮಿ ಆಯತಪ್ಪಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ವೈದ್ಯರು 1ತಿಂಗಳು ವಿಶ್ರಾಂತಿ ಪಡೆಯಲು ಹೇಳಿದ್ದಾರೆ. ಶಮಿಕಾ ಎಂಟರ್ಪ್ರೈಸ್ ಬ್ಯಾನರ್ ನಲ್ಲಿ ರಾಧಿಕಾ ಕುಮಾರಸ್ವಾಮಿ ನಿರ್ಮಾಣ ಮಾಡುತ್ತಿರುವ ಚಿತ್ರ ‘ಭೈರಾದೇವಿ’ ಈ ಚಿತ್ರದಲ್ಲಿ ರಮೇಶ್ ಅರವಿಂದ್, ರವಿ ಶಂಕರ್ ಮೊದಲಾದವರು ಅಭಿನಯಿಸಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com