‘ಪಂಕಜ‌ಕಸ್ತೂರಿ’ ಯಾದ ರಚಿತಾ ರಾಮ್…

Published on

455 Views

ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ ಸ್ಯಾಂಡಲ್ ವುಡ್ ನಟಿ ರಚಿತಾ ರಾಮ್ ಮತ್ತೊಂದು ವಿಭಿನ್ನ ಸಿನಿಮಾಗೆ ಸಹಿ ಮಾಡುವ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.

ರಚಿತಾ ರಾಮ್ ರವರ ಈ ಹೊಸ ಸಿನಿಮಾಗೆ ಮಯೂರ ರಾಘವೇಂದ್ರ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ನಿರ್ದೇಶಕ ಮಯೂರ ಚಿತ್ರಕ್ಕೆ ‘ಪಂಕಜ ಕಸ್ತೂರಿ’ ಎಂದು ಟೈಟಲ್ ಇಡಲಾಗಿದೆ. ಮಯೂರ ರಾಘವೇಂದ್ರ ನಿರ್ದೇಶನದ ‘ಕನ್ನಡ್ ಗೊತ್ತಿಲ್ಲ’ ಸಿನಿಮಾದಲ್ಲಿ ರಚಿತಾ ರಾಮ್ ನಟಿಸಬೇಕಿತ್ತು. ಆದರೆ ಈ ಸಿನಿಮಾದಲ್ಲಿ ಹರಿಪ್ರಿಯಾ ಕಾಣಿಸಿಕೊಂಡಿದ್ದರು.

ಇದೀಗ ‘ಪಂಕಜ ಕಸ್ತೂರಿ’ ಮೂಲಕ ಮತ್ತೆ ಒಂದಾಗಿದ್ದಾರೆ. ಸದ್ಯ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ಉಳಿದಂತೆ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ. ಚಿತ್ರದಲ್ಲಿ ಯಾರೆಲ್ಲ ನಟಸಲಿದ್ದಾರೆ, ತಾಂತ್ರಿಕ ವರ್ಗದ ಬಗ್ಗೆ ಸದ್ಯದಲ್ಲೇ ಮಾಹಿತಿ ಹೊರಬಿಳಲಿದೆ.

ರಾಘವೇಂದ್ರ ಮತ್ತು ರಚಿತಾ ರಾಮ್ ಈ ಮೊದಲು ರಿಷಭಪ್ರಿಯ ಎನ್ನುವ ಕಿರುಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಮಯೂರ ನಿರ್ದೇಶನದ ಕಿರುಚಿತ್ರಕ್ಕೆ ರಚಿತಾ ರಾಮ್ ಬಂಡವಾಳ ಹೂಡಿದ್ದರು. ಇದೀಗ ಸಿನಿಮಾ ಮೂಲಕ ಇಬ್ಬರು ಮತ್ತೆ ಒಂದಾಗುತ್ತಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com