ಫಸ್ಟ್ ಲುಕ್ ರಿಲೀಸ್ ಮಾಡಿದ ರಾಂಚಿ ಸಿನಿಮಾ

Published on

326 Views

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ರಾಂಚಿ ಸಿನಿಮಾದ ಫಸ್ಟ್ ಲುಕ್ ಅನ್ನು ಚಿತ್ರತಂಡ ಇಡುಗಡೆ ಮಾಡಿದೆ. ಈ ಹಿಂದೆ ‘ಡಾಟರ್ ಆಫ್ ಪಾರ್ವತಮ್ಮ’ ಚಿತ್ರದಲ್ಲಿ ಹರಿಪ್ರಿಯಾಗೆ ಜೋಡಿಯಾಗಿ ನಟಿಸಿದ್ದ ನಟ ಪ್ರಭು ಮುಂಡ್ಕುರ್ ಇದೀಗ ನಿರ್ದೇಶಕರಾಗಿ ಬದಲಾಗಿದ್ದಾರೆ. ಅರ್ರೆ ಶಾಕ್ ಹಾಗಬೇಕು ಅದ್ಹೇಗಪ್ಪಾ ಒಬ್ಬ ನಟ ಡೈರೆಕ್ಟರ್ ಆದ್ರೂ ಅನ್ಕೊಂಡ್ರಾ ಮುಂದೆ ಓದ್ರಿ..

‘ರಾಂಚಿ’ ಚಿತ್ರದಲ್ಲಿ ನಾಯಕನಾಗಿ ಡೈರೆಕ್ಟರ್ ಪಾತ್ರವನ್ನು ಮಾಡುತ್ತಿದ್ದಾರೆ. ಇದೊಂದು ನೈಜ ಘಟನೆಯಾದರಿತ ಚಿತ್ರವಾಗಿದೆ. ‘‘ರಾಂಚಿ’ ಚಿತ್ರದಲ್ಲಿ ನಾನು ಚಿತ್ರದ ನಿರ್ದೇಶಕನ ಪಾತ್ರವನ್ನು ಮಾಡುತ್ತಿದ್ದೇನೆ. ಇದೊಂದು ಸ್ಯಾಂಡಲ್‌ವುಡ್‌ನ ಹೆಸರಾಂತ ನಿರ್ದೇಶಕರೊಬ್ಬರ ಜೀವನದಲ್ಲಿ ನಡೆದ ಸತ್ಯ ಘಟನೆಯನ್ನು ಒಳಗೊಂಡಿದೆ. ಹಾಗಾಗಿಯೇ ಪಾತ್ರವೂ ತುಂಬಾ ಜವಬ್ದಾರಿಯುತವಾಗಿದೆ. ಈ ಪಾತ್ರವನ್ನು ನಿರ್ವಹಿಸುವಾಗ ನಿರ್ದೇಶಕರ ಕೆಲಸ ನಿಭಾಯಿಸುವುದು ಎಷ್ಟು ಕಷ್ಟವೆಂದು ನನಗೆ ತಿಳಿಯಿತು. ಸಿನಿಮಾಗೂ ರಾಂಚಿಗೂ ತುಂಬಾ ಕನೆಕ್ಟ್ ಆಗುತ್ತದೆ. ಹಾಗಾಗಿಯೇ ಈ ಚಿತ್ರಕ್ಕೆ ರಾಂಚಿ ಎಂದು ಹೆಸರಿಡಲಾಗಿದೆ.

‘ನಾನು ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದೂ, ಚಿತ್ರದ ಪೋಸ್ಟರ್‌ಗೆ ಈಗಾಗಲೇ ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಈಗ ನನ್ನ ಅಭಿನಯದ ‘ರಿಲ್ಯಾಕ್ಸ್ ಸತ್ಯ’ ಮತ್ತು ‘ಮಾಯಾ ಕನ್ನಡಿ’ ಚಿತ್ರದಲ್ಲಿಯೂ ನಾಯಕನಾಗಿ ನಟಿಸಿದ್ದೇನೆ. ನಾನು ಮುಂದಿನ ಸಿನಿಮಾಕ್ಕಾಗಿ ಸಿಕ್ಸ್‌ಪ್ಯಾಕ್ ತಯಾರಿಯನ್ನು ನಡೆಸಿಕೊಳ್ಳುತ್ತಿದ್ದೇನೆ. ಅದಕ್ಕಾಗಿಯೇ ಕಟ್ಟುನಿಟ್ಟಿನ ವರ್ಕೌಟ್ ಆರಂಭಿಸಿದ್ದೇನೆ. ಹೊಸ ಸಿನಿಮಾದ ಆಯ್ಕೆಯಲ್ಲಿ ನಾನು ತುಂಬಾ ಚೂಸಿಯಾಗಿದ್ದೇನೆ.

ನಿರ್ದೇಶಕರ ಪಾತ್ರ ಮಾಡುವುದು ಒಂದು ಜವಬ್ದಾರಿಯುವಾದ ವೃತ್ತಿ ಎಂದು ನನಗೆ ರಾಂಚಿ ಸಿನಿಮಾದಲ್ಲಿ ತಿಳಿಯಿತು. ಈ ಸಿನಿಮಾವನ್ನು ಆನಂದ್ ಹಾಗೆ ಅರುಣ್ ನಿರ್ಮಿಸುತ್ತಿದ್ದು. ರುದ್ರ ಫಿಲಂ ಹಾಗಿ ಗಿರಿಜಾ ಟಾಕೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ.
-ಪ್ರಭು ಮುಂಡ್ಕುರ್.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com