ಬರ್ತಿದ್ದಾನೆ ಕಂಟ್ರಿ ಮೇಡ್ “ಚಾರಿ” ಇದು ಪುಷ್ಪಕವಿಮಾನ ನಿರ್ದೇಶಕನ ಎರಡನೇ ಕನಸು

Published on

455 Views

ಪುಷ್ಪಕ ವಿಮಾನ ಡೈರೆಕ್ಟರ್ ಮಾಡ್ತಿದ್ದಾರೆ ಕಂಟ್ರಿ ಮೇಡ್ “ಚಾರಿ”

ಪುಷ್ಪಕ ವಿಮಾನ ಅನ್ನೋ ಅದ್ಭುತ ದೃಶ್ಯಕಾವ್ಯದ ಮೂಲಕ ಕನ್ನಡಿಗರ ಮನಸೆಳೆದ. ಎಮೋಷಿನಲ್ ಸಿನಿಮಾದಿಂದ ಒಳ್ಳೆಯ ಹೆಸರು ಮಾಡಿದ್ದ ನಿರ್ದೇಶಕ ಎಸ್. ರವೀಂದ್ರನಾಥ್ ಮತ್ತೆ ವಾಪಸ್ ಆಗಿದ್ದಾರೆ. ಮೊದಲ ಸಿನಿಮಾದ ನಂತ್ರ ಚೂರು ಟೈಂ ತೆಗೆದುಕೊಂಡು. ಈ ಸಲ ಔಟ್ ಅಂಡ್ ಔಟ್ ಮಾಸ್ ಆಕ್ಷನ್ ಥ್ರಿಲ್ಲರ್ ನ ಮಾಡೋದಕ್ಕೆ ಮುಂದಾಗಿದ್ದಾರೆ. ಟಚ್ ಬೇರ್ ಸ್ಟುಡಿಯೋಸ್ ಬ್ಯಾನರ್ ನಡಿಯಲ್ಲಿ ಸುಶೀಲ್ ಸತ್ಯರಾಜ್ ಈ ಚಿತ್ರಕ್ಕೆ ಬಂಡವಾಳ ಹೂಡ್ತಿದ್ದಾರೆ.

ಹೊಸ ಫ್ಲೇವರ್ನ ಕಥೆ ಮಾಡಿಕೊಂಡಿರೋ ರವೀಂದ್ರನಾಥ್ ಈ ಸಲ ಹೊಸ ಮುಖಗಳಿಗೆ ಮಣೆಹಾಕೋದಕ್ಕೆ ಮುಂದಾಗಿದ್ದು, ಕ್ವಾಲಿಟಿ ತಂತ್ರಜ್ಞರು ಇವರಿಗೆ ಸಾಥ್ ಕೊಡ್ತಿದ್ದಾರೆ. ಅದ್ರಂತೆ, ನೂರೊಂದು ನೆನಪು ಖ್ಯಾತಿಯ ಎಸ್.ಕೆ. ರಾವ್ ಕಂಟ್ರಿ ಮೇಡ್ ಚಾರಿ ಚಿತ್ರಕ್ಕೆ ಛಾಯಾಗ್ರಹಣ ಮಾಡ್ತಿದ್ದಾರೆ. ಸಿಕ್ಕಾಪಟ್ಟೆ ಸಿನಿಮಾಪ್ಯಾಶನ್ ಇರೋ ತಂತ್ರಜ್ಞರೆಲ್ಲಾ ಸೇರಿಕೊಂಡು ಮಾಡಲು ಹೊರಟಿರೋ ಕಂಟ್ರಿ ಮೇಡ್ ಚಾರಿ ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದ್ದು, ಈ ಸಿನಿಮಾದೊಂದಿಗೆ ಸ್ಯಾಂಡಲ್ ವುಡ್ ಗೆ ಮತ್ತೊಂದು ಅಚ್ಚರಿ ನೀಡೋ ಧಾವಂತದಲ್ಲಿದೆ ಚಿತ್ರತಂಡ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com