ಪುಕ್ಸಟ್ಟೆ ಲೈಫಿನಲ್ಲಿ ಸ್ವಾಮಿ ಅಯ್ಯಪ್ಪನ ಭಜನಾವಳಿ..!!!!

Published on

328 Views

ಮಣಿಕಂಠನ ಮಹಿಮೆಯನ್ನು ಸಾರುವಂತಹ, ಕೋಟ್ಯಾಂತರ ಭಕ್ತರು ಆರಾಧಿಸುವಂತಹ ಸ್ವಾಮಿ ಅಯ್ಯಪ್ಪನ ಹಾಡುಗಳು, ಭಜನೆಗಳು ಎಷ್ಟೋ ಇವೆ. ಸ್ವಾಮಿ ಅಯ್ಯಪ್ಪನ ಸ್ಮರಿಸೋ ಜಪಿಸೋ ಅನೇಕ ಸಿನಿಮಾ ಹಾಡುಗಳು ಬಂದಿವೆ. ಇದೀಗ ಆ ಸಾಲಿಗೆ ಕನ್ನಡ ಚಿತ್ರರಂಗದ ಲೇಟೆಸ್ಟ್ ಸಿನಿಮಾ ಪುಕ್ಸಟ್ಟೆ ಲೈಫು ಚಿತ್ರದ ಭಜನೆ ಹಾಡು ಸೇರ್ಪಡೆಯಾಗಿದೆ.
ಪುಕ್ಸಟ್ಟೆ ಲೈಫು… ಸಂಚಾರಿ ವಿಜಯ್, ಅಚ್ಯುತ್ ಕುಮಾರ್ , ರಂಗಾಯಣ ರಘು, ಮಾತಂಗಿ ಪ್ರಸನ್ನ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರೋ ಸಿನಿಮಾ. ಸರ್ವಸ್ವ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ನಾಗರಾಜ್ ಸೋಮಯಾಜಿ ನಿರ್ಮಿಸಿರೋ ಈ ಚಿತ್ರವನ್ನ ಅರವಿಂದ್ ಕುಪ್ಳೀಕರ್ ನಿರ್ದೇಶಿಸಿದ್ದಾರೆ. ಅದೈತ ಗುರುಮೂರ್ತಿ ಛಾಯಾಗ್ರಹಣ, ವಾಸು ದೀಕ್ಷಿತ್ ಸಂಗೀತ ಸಂಯೋಜಿಸಿದ್ದಾರೆ.

ಪೂರ್ ಸೊತ್ತೇ ಇಲ್ಲ ಅನ್ನೋ ಟ್ಯಾಗ್ ಲೈನ್ ಇರೋ ಪುಕ್ಸಟ್ಟೆ ಲೈಫು ಚಿತ್ರದ ಅಯಪ್ಪನ ಭಜನೆ ಹಾಡು ಇತ್ತೀಚೆಗಷ್ಟೇ ಸರ್ವಸ್ವ ಪ್ರೊಡಕ್ಷನ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದೆ. ಜೊತೆಗೆ ಎಲ್ಲಾ ಅನ್ ಲೈನ್ ಮ್ಯೂಸಿಕ್ ಫ್ಲಾಟ್ ಫಾರಂ ಹಾಗೂ ಎಫ್ ಎಮ್ ಗಳಲ್ಲಿ ಈ ಹಾಡು ಪ್ರಸಾರ ಆಗ್ತಿದ್ದು, ಕೇಳುಗರಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ತಿದೆ. ಈಗಾಗ್ಲೇ ಹಲವರು ಹೆಲೋ ಟ್ಯೂನ್ಸ್ ರಿಂಗ್ ಟೋನ್ಸ್ ಆಗಿ ಸ್ವಾಮಿ ಅಯ್ಯಪ್ಪನ ಭಜನೆ ರಿಂಗಣಿಸ್ತಿದೆ. ಅಯ್ಯಪ್ಪನ ಭಜನೆಯನ್ನ ಈಗಿನ ಮ್ಯೂಸಿಕ್ ಟ್ರೆಂಡಿಗೆ ತಕ್ಕಂತೆ ವಾಸು ದೀಕ್ಷಿತ್ ಕಂಪೋಸ್ ಮಾಡಿದ್ದಾರೆ.
ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಮತ್ತು ವಾಸು ದೀಕ್ಷಿತ್ ಹಾಡಿರೋ ಈ ಹಾಡು ಕೇಳೋದಕ್ಕೆ ಸಖತ್ ಮಜವಾಗಿದೆ. ಟ್ರೆಂಡಿಯಾಗಿದೆ. ಪುಕ್ಸಟ್ಟೆ ಲೈಫು ಚಿತ್ರದಲ್ಲಿ ಈ ಭಜನೆ ಹಾಡು ಪ್ರಮುಖವಾಗಿ ಕಾಣಸಿಗುತ್ತೆ. ಕೇಳಸಿಗುತ್ತೆ. ವಿಶಿಷ್ಠ ಕಥಾಹಂದರವಿರೋ ಈ ಚಿತ್ರದಲ್ಲಿ ಎಲ್ಲಾ ಹಾಡುಗಳು ಕಥೆಯ ಜೊತೆಜೊತೆ ಸಾಗುತ್ತವಂತೆ. ಅಂದ್ಹಾಗೆ ಪುಕ್ಸಟ್ಟೆ ಲೈಫು ಚಿತ್ರತಂಡ ಈ ಭಜನೆ ಹಾಡಿನ ಲಿರಿಕಲ್ ವಿಡಿಯೋವನ್ನ ರಿಲೀಸ್ ಮಾಡೋ ಮೂಲಕ ಪ್ರಚಾರ ಕಾರ್ಯವನ್ನ ಶುರುಮಾಡಿದ್ದು, ಹಂತಹಂತವಾಗಿ ಚಿತ್ರದ ಮತ್ತಷ್ಟು ವಿಶೇಷಗಳನ್ನ ಹೇಳಲಿದ್ದಾರಂತೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com