ಪ್ರಥ್ವಿ ಅಂಬರ್ ನಟನೆಯ ಚೌಕಿದಾರ್ʼಗೆ ಮುಹೂರ್ತ!!!
ದಿಯಾ ಚಿತ್ರದ ಖ್ಯಾತಿಯ ಪೃಥ್ವಿ ಅಂಬರ್ ಹಾಗೂ ಧನ್ಯಾ ರಾಮ್‌ಕುಮಾರ್‌ರವರು ನಟಿಸುತ್ತಿರುವ ಮುಂದಿನ ಚಿತ್ರ ಚೌಕಿದಾರ್ ಸಿನಿಮಾ ಸೆಟ್ಟೇರಿದೆ. ಶ್ರೀಮುರಳಿ ಯವರ ಹಿಟ್ ಚಿತ್ರ ರಥಾವರಕ್ಕೆ ಆಕ್ಷನ್ ಕಟ್ ಹೇಳಿದ್ದ ಚಂದ್ರಶೇಖರ್ ಬಂಡಿಯಪ್ಪ ಈಗ ಚೌಕಿದಾರ್ ಚಿತ್ರಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಪೃಥ್ವಿ ಅಂಬರ್ ಹಾಗೂ ಧನ್ಯ ರಾಮ್‌ಕುಮಾರ್ ಇದೇ ಮೊದಲನೇ ಬಾರಿಗೆ ಸಿನಿಮಾದಲ್ಲಿ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಹಾಗೂ ಈ ಚಿತ್ರದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Meet SIDDARTH from CHOWKIDAR ❤️#ChandraShekar#Saikumar@DhanyaRamkumar #sandalwood #chowkidar #pruthviambaar #saikumar #dhanyaramkumar pic.twitter.com/L88cD0grlD
— Pruthvi Ambaar (@AmbarPruthvi) July 3, 2024
ಚೌಕಿದಾರ್ ಸಿನಿಮಾದ ಮುಹೂರ್ತ ಇತ್ತೀಚೆಗೆ ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ನಡೆಯಿತು ಹಾಗೂ ದೇವಸ್ಥಾನದಲ್ಲಿ ಇಡೀ ಚಿತ್ರತಂಡ ಸೇರಿತ್ತು. ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ಈ ಚಿತ್ರವನ್ನು ಡಾ. ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದಾರೆ.
ಈ ಚಿತ್ರಕ್ಕೆ ಸಚಿನ್ ಬಸ್ರೂರ್ ಸಂಗೀತ ನಿರ್ದೇಶನ ಮಾಡುತ್ತಿದ್ದು, ವಿ.ನಾಗೇಂದ್ರ ಪ್ರಸಾದ್ ಹಾಗೂ ಪ್ರಮೋದ್ ಮರವಂತೆ ಹಾಡುಗಳಿಗೆ ಸಾಹಿತ್ಯ ಬರೆಯುತ್ತಿದ್ದಾರೆ. ಚೌಕಿದಾರ್ ಚಿತ್ರವು ಬಹುಭಾಷೆಗಳಲ್ಲಿ ಮೂಡಿಬರುತ್ತಿದ್ದು, ಪ್ರಥ್ವಿ ಅಂಬರ್‌ರವರು ಚಿತ್ರಗಳಲ್ಲಿ ಲವರ್ ಬಾಯ್ ಲುಕ್‌ನಲ್ಲಿ ಮತ್ತು ಮಾಸ್ ಹಾಗೂ ವಿಭಿನ್ನ ಲುಕ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸಿನಿಮಾ ಸೆಟ್ಟೇರಿದ ಖುಷಿಯಲ್ಲಿ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ, ಚಿತ್ರದ ನಟ ಪೃಥ್ವಿ ಅಂಬರ್, ನಟಿ ಧನ್ಯಾ ರಾಮ್‌ಕುಮಾರ್ ಹಾಗೂ ಡೈಲಾಗ್ ಕಿಂಗ್ ಸಾಯಿಕುಮಾರ್‌ರವರು ಖುಷಿಯನ್ನು ಹಂಚಿಕೊಂಡಿದ್ದಾರೆ. ಪೃಥ್ವಿ ಹಾಗೂ ಧನ್ಯಾ ಜೋಡಿಯನ್ನು ತೆರೆಯ ಮೇಲೆ ಮೊದಲನೇ ಬಾರಿ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ https://flixoye.com ನ್ನು ಫಾಲೋ ಮಾಡಿ.