ಬಾಲಿವುಡ್ ಗೆ ಪ್ರವೇಶ ಪಡೆದ ದಿಯಾ ಖ್ಯಾತಿಯ ಪೃಥ್ವಿ ಅಂಬರ್

Published on

571 Views

ದಿಯಾ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್ ನಲ್ಲಿ ಸ್ಟಾರ್ ಪಟ್ಟವನ್ನು ಪಡೆದ ಪೃಥ್ವಿ ಅಂಬಾರ್ ಸಿನಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಈಗ ಹೊಸ ಸುದ್ದಿಯೊಂದು ಹೊರ ಬಿದ್ದಿದ್ದು ದಿಯಾ ಸಿನಿಮಾ ಹಿಂದಿಯಲ್ಲಿ ರಿಮೇಕ್ ಆಗಲಿದ್ದು, ಕನ್ನಡದ ದಿಯಾ ಸಿನಿಮಾದಲ್ಲಿ ಆದಿ ಪಾತ್ರವನ್ನು ಮಾಡಿದ ಪೃಥ್ವಿ ಆ ಪಾತ್ರವನ್ನೇ ಹಿಂದಿಯಲ್ಲಿ ಮಾಡುತ್ತಿದ್ದು, ಬಾಲಿವುಡ್ ಗೂ ಪಾದಾರ್ಪಣೆ ಮಾಡುತ್ತಿದ್ದಾರೆ.

ಮೂಲಗಳ ಪ್ರಕಾರ ಈಗಾಗಲೇ ಹಿಂದಿ ಅವತರಣಿಕೆಯ ದಿಯಾ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದ್ದು, ನಟ ಪೃಥ್ವಿ ಅಂಬರ್ ಚಿತ್ರೀಕರಣದಲ್ಲಿ ಭಾಗಿಯಾಗಿಯಾಗಿರುವ ಬಗ್ಗೆ ಸುಳಿವು‌ ಬಿಟ್ಟು ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಲಖನೌದಲ್ಲಿರುವ ಪೋಟೋ ವನ್ನು ಶೇರ್ ಮಾಡಿದ್ದಾರೆ ಪೃಥ್ವಿ. ಸದ್ಯ ಕನ್ನಡದಲ್ಲಿ ಲೈಫ್ ಈಸ್ ಬ್ಯೂಟಿಫುಲ್, ಶಿವಪ್ಪ, ಶುಗರ್ ಲೆಸ್ ಹೀಗೆ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ ನಲ್ಲಿ ತಯಾರಾಗುತ್ತಿರುವ ಹಿಂದಿ‌ ರಿಮೇಕ್ ನಲ್ಲಿ ನಾಯಕಿಯಾಗಿ ಹಾಗೂ ಮತ್ತೋರ್ವ ನಾಯಕ ಯಾರು ಎನ್ನುವ ಬಗ್ಗೆ ಮಾಹಿತಿ ಮಾತ್ರ ಇನ್ನು ಹೊರ ಬಿದ್ದಿಲ್ಲ. ಈ ಚಿತ್ರದ ಚಿತ್ರೀಕರಣ ಡೆಹ್ರಾಡೂನ್ ಮತ್ತು ಮಸ್ಸೂರಿನಲ್ಲಿ ನಡೆಯುತ್ತಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com