ಭರವಸೆಯ ನಟ ಬಂಜಾರ ಸೂಪರ್ ಸ್ಟಾರ್ ಚಂದು ವಿ.ರಾಜ್…
ಪ್ರತಿಭೆ, ಅದೃಷ್ಟ, ಇವೆರಡೂ ನಮ್ಮ ಕೈ ಹಿಡಿದ್ರೆ, ಅವನ ಸಾಧನೆಗೆ ಅದು ದಾರಿಯಾಗುತ್ತದೆ. ಅದೇ ರೀತಿ ಏನಾದರೂ ಸಾಧನೆ ಮಾಡ್ಬೇಕು, ಚಿತ್ರರಂಗದಲ್ಲಿ ಒಬ್ಬ ಗಾಯಕ ನಾಗಿ ಸಾಹಿತಿಯಾಗಿ ಗುರುತಿಸಿಕೊಳ್ಳಬೇಕೆಂದು ಕೊಂಡವನಿಗೆ ಹೀರೋ ಆಗುವ ಅವಕಾಶ ಬಂದಾಗ ಯಾರಿಗೆ ತಾನೇ ಖುಷಿಯಾಗಲ್ಲ. ಇಂತಹ ಒಂದು ಅವಕಾಶ ಬಂದಿರುವುದು ಬೇರೆ ಯಾರಿಗೂ ಅಲ್ಲ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ತಾಂಡದಿಂದ ಬೆಂಗಳೂರಿಗೆ ಕೆಲಸಕ್ಕೆಂದು ಬಂದು, ಅಲ್ಲಿಂದ ಸಿನಿಮಾದಲ್ಲೂ ಅವಕಾಶಗಳನ್ನು ಪಡೆದುಕೊಳ್ಳಬಹುದೆಂದು ಬೆಂಗಳೂರಿಗೆ ಅಪ್ಪನ ಜೊತೆ ಬಸ್ ಹತ್ತಿ, ಬೆಂಗಳೂರಿನ ಬಿಡದಿಯಲ್ಲಿ ಟೊಯೋಟಾ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿ, ತನ್ನ ಊರು ಕೇರಿಗಳಲ್ಲಿ ಆರ್ಕೆಸ್ಟ್ರಾ ಗಳಲ್ಲಿ ಹಾಡುತ್ತಿದ್ದ ಚಂದುಗೆ ಬಂದಿದ್ದು ಇಂತಹ ಒಂದು ಅವಕಾಶ.
ಬೆಂಗಳೂರಿನಲ್ಲೂ ಕೆಲವೊಂದು ಶೋಗಳಲ್ಲಿ ಹಾಡಿದ್ದಕ್ಕೆ ಅಲ್ಲಿಂದ ಪ್ರೋಗ್ರಾಂ ಮುಗಿಸಿ ಮನೆಗೆ ಹೋಗಲು 50ರೂ ಬಸ್ ಚಾರ್ಜ್ ಕೊಡುತ್ತಿದ್ದರು. ಆ 50ರೂಪಾಯಿ ಪಡೆದುಕೊಂಡು ಅದರಲ್ಲೂ ಖುಷಿ ಪಡುತ್ತಿದ್ದ ಚಂದು ತನ್ನ ವೃತ್ತಿಯ ಜೊತೆಗೆ ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದರು. ಚಂದುವಿಗೆ ಹೀಗೆ ಒಂದು ದಿನ ತನ್ನ ಪರಿಚಯದವರ ಮುಖಾಂತರ ಒಂದು ಬಂಜಾರ ಸಿನಿಮಾಕ್ಕೆ ಸಾಹಿತ್ಯ ಬರೆದುಕೊಡುವ ಅವಕಾಶ ಬಂತು, ಅಲ್ಲಿಗೆ ಹೋಗಿದ್ದ ಚಂದುವನ್ನು ನೋಡಿದ ಕುಮಾರ್ ರಾಥೊಡ್ ನಿರ್ದೇಶಕರು ಆಯ್ಕೆ ಮಾಡಿದ್ದು ತಮ್ಮ ಸಿನಿಮಾಕ್ಕೆ ನಾಯಕನಟನಾಗಿ, ನಾಯಕನಾಗಿ ಅಷ್ಟೇ ಅಲ್ಲದೆ ಆ ಸಿನಿಮಾಕ್ಕೆ ಸಾಹಿತ್ಯ ಬರೆಯುವ ಅವಕಾಶವನ್ನು ಕೊಟ್ಟರು. ನಾಯಕ ನಟನಾಗಿ ಮೊದಲು ನಟಿಸಿದ ಬಂಜಾರ ಸಿನಿಮಾ ‘ಗೋರಿಯಾ ಬಂಜಾರ ಟೈಗರ್’ ಬಂಜಾರದ ನಾಯಕನಟನಾಗಿ ಗುರುತಿಸಿಕೊಂಡು ನಂತರ ಮಂಜುನಾಥ.ಜೆ.(ಹೊಳಲ್ಕೆರೆ) ಯವರು ಸಿಕ್ಕಿ ಮತ್ತೊಂದು ಬಂಜಾರದ ‘ಗರಸ್ಯಾ’ ಎಂಬ ಸಿನಿಮಾದಲ್ಲಿ ಅವಕಾಶ ಕೊಟ್ಟರು. ಆ ಸಿನಿಮಾಕ್ಕೂ ಬರೆದಿರುವ ಸಾಹಿತ್ಯ ಸಾಕಷ್ಟು ಹೆಸರು ಮಾಡಿತು.
ಕೆಲವು ಕನ್ನಡ ಸಿನಿಮಾಗಳಿಗೂ ಸಾಹಿತ್ಯ ಬರೆದುಕೊಟ್ಟಿದ್ದಾರೆ. ಇವರು ನಟನೆಯ ಕನ್ನಡ ಸಿನಿಮಾ ದಚ್ಚು-ದೀಪು ಮುಹೂರ್ತ ಮುಗಿಸಿಕೊಂಡು ಕೆಲವೊಂದು ಕಾರಣಗಳಿಂದ ನಿಂತಿದೆ. ಈಗ ಹೊಸ ಕನ್ನಡ ಸಿನಿಮಾಕ್ಕೆ ಸಹಿ ಮಾಡಿದ್ದಾರೆ ಈ ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ಸೆಟ್ಟೇರಲಿದೆ.ಇವೆಲ್ಲಕ್ಕೂ ಮುಂಚೆ 2010 ಜೂನಿಯರ್ ಆರ್ಟಿಸ್ಟ್ ಆಗಿ ಕೆಲವೊಂದು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರಂತೆ ಚಂದು. 10 ವರ್ಷಗಳಿಂದ ಸಿನಿಮಾರಂಗದಲ್ಲಿ ಶ್ರಮಿಸುತ್ತಿರುವ ಚಂದುವಿಗೆ ಫ್ಯಾಮಿಲಿ ಯಲ್ಲಿ ತುಂಬಾನೇ ಸಪೋರ್ಟ್ ಇದೆಯಂತೆ. ಊರಲ್ಲಿ ಅಪ್ಪ ಗಾರೆ ಕೆಲಸ ಮಾಡಿಕೊಂಡು, ತಾಯಿ ಸಣ್ಣದೊಂದು ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರೂ ಮಗನಿಂದ ಯಾವುದೇ ಹಣದ ನಿರೀಕ್ಷೆಯನ್ನು ಇಟ್ಟುಕೊಳ್ಳದೆ, ಅವನ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಸಿನಿಮಾ ಮಾತ್ರವಲ್ಲದೇ ಸೀರಿಯಲ್ ಗಳಲ್ಲೂ ನಟಿಸುವ ಅವಕಾಶ ಬಂದರೆ ಖುಷಿಯಿಂದ ಒಪ್ಪಿಕೊಳ್ಳುತ್ತೇನೆ. ಮನೆಯಲ್ಲೂ ಸೀರಿಯಲ್ ನಲ್ಲಿ ಅವಕಾಶ ಸಿಕ್ಕಿದ್ದರೆ ಅಭಿನಯಿಸು ಎಂದು ಪ್ರೋತ್ಸಾಹ ನೀಡುತ್ತಾರೆ. ಒಬ್ಬ ಕಲಾವಿದನಿಗೆ ಅವಕಾಶಗಳು ಸಿಗುವುದೇ ಕಷ್ಟ.
ಅಂತದರಲ್ಲಿ ಒಳ್ಳೆ ಅವಕಾಶಗಳು ಬಂದಾಗ ಅದನ್ನು ಉಪಯೋಗಿಸಿಕೊಳ್ಳಬೇಕು ಎಂಬುದು ಚಂದುರವರ ಮಾತು. ಈಗಾಗಲೇ ಬಂಜಾರ ನಾಯಕನಾಗಿ ಗುರುತಿಸಿಕೊಂಡಿರುವ ಇವರಿಗೆ 40 ರಿಂದ 50 ಫ್ಯಾನ್ಸ್ ವಾಟ್ಸಪ್ ಗ್ರೂಪ್ ಗಳನ್ನು ಹುಟ್ಟು ಹಾಕಿದ್ದಾರೆ ಅಭಿಮಾನಿಗಳು. ಅಭಿಮಾನಿಗಳಿಂದ ‘ಬಂಜಾರ ಟೈಗರ್’ ಬಿರುದು ಪಡೆದಿರುವ ಚಂದುರವರು ಅಭಿಮಾನಿಗಳ ಅಭಿಮಾನಕ್ಕೆ ಖುಷಿಯನ್ನು ವ್ಯಕ್ತಪಡಿಸುತ್ತಾರೆ. ನನಗೆ ನನ್ನ ಸಿನಿಮಾಕ್ಕೆ,ಅವರ ಬೆಂಬಲ ಖಂಡಿತಾ ಇದ್ದೆ ಇರುತ್ತೆ ಎನ್ನುತ್ತಾರೆ. ಬಂಜಾರ ಸಿನಿಮಾದಲ್ಲಿ ಇವರ ನಟನೆಯನ್ನು ಗುರುತಿಸಿ, ‘ಕಲಾರತ್ನ’ ರಾಜ್ಯಪ್ರಶಸ್ತಿ, ‘ಬೆಸ್ಟ್ ಆ್ಯಕ್ಟರ್’ ಪ್ರಶಸ್ತಿಗಳು ಲಭಿಸಿದೆ. 2013 ರಲ್ಲಿ ನಡೆದ ‘ಹಾಡು ಬಾ ಕೋಗಿಲೆ’ ಈ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದಿರುವ ಚಂದು ಜೀ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ಶೋಗಳಲ್ಲಿ ಮೂರನೇ ರೌಂಡ್ ವರೆಗೂ ಬಂದು ವಾಪಸಾಗಿದ್ದರೆ. ನಂತರ ಸಿನಿಮಾದ ಕಡೆಗೆ ಮನಸ್ಸು ವಾಲಿದ್ದರಿಂದ ನಟನೆಯ ಕಡೆಗೆ ಗಮನ ಕೊಡಲಾರಂಭಿಸಿದ್ದರು. ಮೊದಲ ಸಿನಿಮಾಕ್ಕೆ ಆಯ್ಕೆಯಾದಾಗಲೇ ನಟನೆಯ ತರಬೇತಿಯನ್ನು ಪಡೆದುಕೊಂಡು, ಅಲ್ಲಿಂದ ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಾಯಕನಟನಾಗಿ ಮಿಂಚುವ ಎಲ್ಲ ಕ್ವಾಲಿಟಿಯನ್ನು ಹೊಂದಿರುವ ಚಂದುವರಿಗೆ ಇನ್ನಷ್ಟು ಅವಕಾಶಗಳು ಬರಲಿ. ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದೇ ನಮ್ಮ ಆಶಯ.
ಎತ್ತರ – 6 ಅಡಿ
ತೂಕ -75
ಮೊಬೈಲ್ ನಂ- 8971454493