ಚಂದನವನಕ್ಕೊಬ್ಬ ಸದಭಿರುಚಿಯ ನಿರ್ಮಾಪಕ
`ಮದುವೆ ಮಾಡ್ರಿ ಹೋಗ್ತಾನೆ’ ಎಂಬ ಡಿಫೆರೆಂಟ್ ಕಥಾಹಂದರದ ಚಿತ್ರ ಈಗಾಗಲೇ ಟೀಸರ್‍ನಿಂದ ಸಾಕಷ್ಟು ಸೌಂಡು ಮಾಡ್ತಿದೆ. ರಂಗನಟ ಗೋಪಿಕೆರೂರ್ ನಿರ್ದೇಶನದ ಈ ಚಿತ್ರಕ್ಕೆ ಗಂಗಾವತಿಯ ಶಿವರಾಜ್ ದೇಸಾಯಿಯವರು ಬಂಡವಾಳ ಹೋಡಿದ್ದಾರೆ. ಮೊಟ್ಟಮೊದಲಬಾರಿಗೆ ಚಿತ್ರರಂಗಕ್ಕೆ ಕಾಲಿಡುತ್ತಿರುವ ಈ ನವ ನಿರ್ಮಾಪಕರ ಬಾಳು-ಬವಣೆ, ಸೋಲುಗೆಲುವುಗಳ ಬಗ್ಗೆ ಒಂದಿಷ್ಟು ತಿಳ್ಕೋಳ್ಳೋಣ. ಸರಿ ಸುಮಾರು ಹನ್ನೆರಡು ವರ್ಷಗಳ ಕಾಲ ಟೆಲಿಫೋನ್ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶಿವಾರಜ್, ನಂತರದಲ್ಲಿ ಬೆಂಗಳೂರುನಲ್ಲಿ ಸ್ಟಾಕಿಸ್ಟ್ ಆಗಿ ತಮ್ಮ ಸ್ವಂತ ವ್ಯವಹಾರವನ್ನು ಆರಂಭಿಸಿದರು. ನಾಲ್ಕೈದು ವರ್ಷಗಳಿಂದ ಸ್ನೇಹಿತರಾಗಿದ್ದ ಗೋಪಿಯವರು ಶಿವರಾಜ್ ಅವರಿಗೆ ಚಿತ್ರದ ಟೈಟಲ್ ಮತ್ತು ಕಥೆಯ ಒಂದೆಳೆ ಹೇಳಿದಾಗ ಇಷ್ಟಪಟ್ಟು ಚಿತ್ರ ನಿರ್ಮಾಣಮಾಡಲು ಒಪ್ಪಿಕೊಂಡರು.
ಸಂಪೂರ್ಣವಾಗಿ ಉತ್ತರ ಕರ್ನಾಟಕದ ಬ್ಯಾಕ್‍ಡ್ರಾಪ್‍ನಲ್ಲಿ ಅಲ್ಲಿಯದೇ ಭಾಷೆಯ ಸೊಗಡಿನ ಚಿತ್ರವದ್ದಾರಿಂದ ಶಿವರಾಜ್ ಅವರಿಗೆ ಹೊಸ ಒಂದು ಪ್ರಯೋಗ ಎಂದೆನಿಸಿ ಒಪ್ಪಿಕೊಂಡ ನಿರ್ಮಾಣದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದಾರೆ. ಶಿವರಾಜ್ ಅವರು ಚಿತ್ರದ ಚಿತ್ರಕಥೆ ಬರೆಯುವ ಸಮಯದಿಂದಲೇ ಚಿತ್ರತಂಡದ ಜೊತೆಗಿದ್ದು, ಚಿತ್ರ ತಯಾರಾಗುವ ಪ್ರತೀ ಹಂತದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೆ ಪ್ರತಿಯೊಂದು ಟೆಕ್ನೀಶಿಯನ್‍ಗೆ ಕಥೆಯ ಬ್ಗೆ ಎಷ್ಟು ಹಿಡಿತವಿದಿಯೋ ಅಷ್ಟೇ ಹಿಡಿತ ಲೋಕೆಶನ್ ಮೇಲೂ ಇರಬೇಕು ಅನ್ನುವ ಉದ್ದೇಶಕ್ಕೆ ಇಡೀತಂಡಕ್ಕೆ ಲೋಕೆಶನ್‍ಗಳ ಪರಿಚಯ ಮಾಡಿಕೊಟ್ಟಿದ್ದರು ಶಿವರಾಜ್. ಇದರಿಂದ ಸಂಗೀತ-ನೃತ್ಯ-ಛಾಯಾಗ್ರಹಣ.. ಹೀಗೆ ಎಲ್ಲಾ ವಿಭಾಗದಲ್ಲಿ ದುಡಿದವರಿಗೆ ನಿರ್ದೇಶಕರ ವಿಷನ್ ಅನ್ನು ಅರ್ಥಮಾಡಿಕೊಳ್ಳಲು ಸುಲಭವಾಯಿತು. ಸ್ವತಃ ಸಂಗೀತ ಪ್ರಿಯರಾಗಿದ್ದ ಶಿವರಾಜ್ ಅವರು ತಮ್ಮ ಚೊಚ್ಚಲ ಚಿತ್ರದಲ್ಲೂ ಸಂಗೀತಕ್ಕೆ ಸಾಕಷ್ಟು ಒತ್ತು ಕೊಟ್ಟಿದ್ದಾರೆ. ಚಿತ್ರದ ಬಂಡವಾಳವನ್ನು ಲೆಕ್ಕಿಸದೆ ಮೊದಲ ಚಿತ್ರಕ್ಕೆ ದುಬಾರಿ ವೆಚ್ಚದ ಲೈವ್ ಮ್ಯೂಸಿಕ್ ಅನ್ನು ಮಾಡಿಸಿರುವ ನಿಮಾಕರು, ಯಾವುದೇ ವಿಚಾರದಲ್ಲಿ ಕಾಂಪ್ರಮೈಸ್ ಆಗಿದೆ ಬೆಸ್ಟ್ ಔಟ್‍ಪುಟ್ ಹೊರತಂದಿದ್ದಾರೆ. ಚಿತ್ರದ ನಾಯಕ-ನಾಯಕಿ ಹೊಸಬರಾದರೂ ಚಿತ್ರದಲ್ಲಿ ಹಲವಾರು ಸೀನಿಯರ್ ನಟರನ್ನು ಮತ್ತು ಅನುಭವೀ ಟೆಕ್ನಿಶಿಯನ್ ಇರೋದ್ರಿಂದ ಇದೊಂದು ರೀತಿಯಲ್ಲಿ ಕಂಪ್ಲೀಟ್ ಪ್ಯಾಕೆಜ್‍ನ ಚಿತ್ರ ಅನ್ನೋದು ಶಿವರಾಜ್ ಅವರ ಮಾತು. ಇನ್ನು ಈ ಕಥೆಗೆ ಹೊಸ ನಾಯಕ-ನಾಯಕಿಯರೇ ಹೆಚ್ಚು ಸೂಕ್ತವಾಗಿದ್ರಿಂದ ಹೊಸಬರನ್ನೇ ಆಯ್ಕೆ ಮಾಡಾಲಾಗಿದೆ. ನಿರ್ಮಾಪಕರು ನಂಬಿದ್ದ ನಾಯಕ-ನಾಯಕಿ ಇಬ್ಬರೂ ತಮ್ಮ ಪಾತ್ರವನ್ನು ಜಸ್ಟೀಫೈ ಮಾಡಿರೋದು ಚಿತ್ರದ ಬಹುದೊಡ್ಡ ಶಕ್ತಿಯಾಗಲಿದೆ. “ಕೇವಲ ಬಾಕ್ಸ್‍ಆಫೀಸ್‍ನಲ್ಲಿ ದುಡ್ಡುಮಾಡಿದ್ರೇ ಮಾತ್ರ ಚಿತ್ರ ಸಕ್ಸಸ್ ಅನ್ನೋದು ತಪ್ಪು.. ಚಿತ್ರ ನನಗೆ ತೃಪ್ತಿ ತಂದಿದೆ.. ಸಾಕಷ್ಟು ಹೊಸ ಕಲಿಕೆಗೆ ದಾರಿ ಮಾಡಿಕೊಟ್ಟಿದೆ ಹೀಗಿರುವಾಗ.. ನಾನಾಗಲೇ ಗೆದ್ದಿದ್ದೇನೆ’ ಎಂದು ನಗೆಬೀರುವ ಶಿವರಾಜ್‍ರಂತಹ ಪ್ರಮಾಣಿಕ ನಿರ್ಮಾಪರು ಗೆಲ್ಲಬೇಕು. ಇಂತಹವರು ಗೆದ್ದಿದ್ದೇ ಆದರೆ ಇನ್ನಷ್ಟು ಚಿತ್ರಗಳು ಸೆಟ್ಟೇರಿ, ಇವರಿಂದಾಗಿ ಒಂದಷ್ಟು ಕ್ರಿಯೇಟೀವ್ ಮನಸ್ಸುಗಳಿಗೆ ಬಾಳು ಸಿಗುತ್ತದೆ. ಇಷ್ಟರಲ್ಲಿಯೇ ಚಿತ್ರ ಆಡಿಯೋ ರಿಲೀಸ್ ಎಲಾ ಸಿದ್ಧತೆಯನ್ನು ಮಾಡಿಕೊಂಡಿರುವ ಚಿತ್ರತಂಡ ಪೆಭ್ರವರಿಯಲ್ಲಿ ತೆರೆಗೆ ಬರಲಿದೆ.