ಹೊಸ ಸಂಘ ಕಟ್ಟೋಕೆ ಹೊರಟ ನಿರ್ಮಾಪಕ ಚೇತನ್ ರಾಜ್

Published on

851 Views

2020 ಕರೋನ ಒಂದು ಕಡೆ ಆದ್ರೆ ಇನ್ನೊಂದು ಕಡೆ ಪ್ರತಿಭಟನೆ ಸಂಘಗಳು ಗಲಾಟೆ… ಕನ್ನಡ ಪರ, ಹಿಂದೂ ಪರ, ಜಾತಿ ಪರ ಹೀಗೆ ಸಾಕಷ್ಟು ಸಂಘ ಸಂಘಟನೆಗಳು ಸಹ ನೋಡಿದ್ದಿವಿ. ಇಲ್ಲೊಂದು ತಂಡ ಮತ್ತೊಂದು ಸಂಘ ಕಟ್ಟುತ್ತೀವಿ ಅಂತ ಒಂದೂವರೆ ತಿಂಗಳಿಂದ ಹೇಳ್ತಾನೆ ಇದೆ . ಹೌದು ಕಮರೊಟ್ಟು ಚೆಕ್ ಪೋಸ್ಟ್, ಒಲವೇ ಮಂದಾರ 2 ಚಿತ್ರದ ನಿರ್ಮಾಪಕರಾದ ಚೇತನ್ ರಾಜ್ ಮತ್ತು ಅವರ ತಂಡ ಸಂಘ ಕಟ್ಟುತ್ತೀವಿ ಅಂತ ಅನೌನ್ಸ್ ಮಾಡಿದೆ.

ಊರಿಗೆ ಒಳ್ಳೆಯದಾಗಲಿ, ಜನ ಚೆನ್ನಾಗಿರಬೇಕು ಅಂತ ಏನೇನೋ ಪೋಸ್ಟರ್ ಮಾಡ್ಸಿ ಭರ್ಜರಿಯಾಗಿ ಸಂಘ ಮಾಡಿಯೇ ಮಾಡ್ತೀವಿ ಅಂತ ರೆಡಿಯಾಗಿದೆ ಚೇತನ್ ರಾಜ್ ಮತ್ತು ತಂಡ.

ಟ್ಯಾಗ್ ಲೈನ್ ಕೆಲ್ಸ ಇಲ್ದೇ ಇರೋವ್ರಿಗೆ ಅಂತ ಹಾಕೊಂಡು ಏನೋ ಒಂದು ಸಂಘ ಮಾಡೋದಿಕ್ಕೆ ಹೊರಟಿದ್ದಾರೆ. ಅದೇನ್ ಸಂಘ, ಅದೇನ್ ಸಂಘಟನೆ ಅಂತ ಎಲ್ಲೂ ಏನೂ ಬಿಡ್ಕೊಡದೆ ಅದ್ಧೂರಿಯಾಗಿ ದೊಡ್ಡ ಮಟ್ಟದಲ್ಲಿ ಹೇಳ್ತೀವಿ ಅಂತಿದ್ದಾರೆ ಚೇತನ್ ರಾಜ್.. ಅವರು ಕಟ್ಟುತ್ತಿರೊ ಸಂಘಕ್ಕೆ ಒಳ್ಳೆಯದಾಗಲಿ ಎಂಬುದೇ ನಮ್ ಆಶಯ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com